ಕೆಲವೇ ಕ್ಷಣಗಳಲ್ಲಿ Public TV ಕಚೇರಿಯಲ್ಲಿ ಮಾಂಸ ವಿತರಣೆ..!!

ಪಬ್ಲಿಕ್ ಟಿವಿ ಸಾಕಷ್ಟು ವಿಚಾರಗಳಲ್ಲಿ ಪ್ರತಿ ಬಾರಿಯೂ ಗಮನ ಸೆಳೆಯುವ ಕೆಲಸ ಮಾಡುತ್ತದೆ. ಕಳೆದ ಬಾರಿ 10 ವರ್ಷದ ಸಂಭ್ರಮಾಚಾರಣೆಯಲ್ಲಿ ಎಲ್ಲಾ 10 ವರ್ಷ ಪೂರೈಸಿದ ಸಿಬ್ಬಂದಿಗಳಿಗೆ 25 ಸಾವಿರ ಉಳಿದವರಿಗೆ 10 ಸಾವಿರ ನಗದು ಪ್ರೋತ್ಸಾಹ ಧನ ನೀಡಲಾಗಿತ್ತು. ಇದಕ್ಕೂ ಮುನ್ನ ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್‌.ಆರ್ ರಂಗನಾಥ್ ಅವರ ಮಗಳ ಮದುವೆ ಕಾರ್ಯಕ್ರಮಕ್ಕೆ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಹೊಸ ಬಟ್ಟೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಮಹಿಳಾ ಸಿಬ್ಬಂದಿಗೆ ರೇಷ್ಮೆ ಸೀರೆ ವಿತರಣೆ ಮಾಡಿದ್ದು ವಿಶೇಷ. ಇದೇ ಮೊದಲ ಬಾರಿಗೆ ಯುಗಾದಿ ಹಬ್ಬದ ವಿಶೇಷವಾಗಿ ಎಲ್ಲಾ ಸಿಬ್ಬಂದಿಗಳಿಗೂ ಹಬ್ಬಕ್ಕೆ ಬೇಕಾದ ಪ್ರತಿಯೊಂದು ದಿನಸಿ ಸಾಮಾನುಗಳ ಕಿಟ್ ನೀಡಲಾಗಿದೆ. ಆ ಕಿಟ್‌ನಲ್ಲಿ 30 ಬಗೆಯ ವಿವಿಧ ಸಾಮಗ್ರಿಗಳು ಇವೆ ಎನ್ನುವುದು ಅಚ್ಚರಿಯ ಸಂಗತಿ.

ಕೊರೊನಾ ಸಂಕಷ್ಟ ಕಾಲದಲ್ಲೂ ಕೈ ಹಿಡಿದಿದ್ದ ರಂಗನಾಥ್..!

ಕೊರೊನಾ ಸೋಂಕು ದೇಶದಲ್ಲಿ‌ ಅಬ್ಬರಿಸಿದ ಬಳಿಕ ಸಾಕಷ್ಟು ಉದ್ದಿಮೆಗಳು ಬಾಗಿಲು ಬಂದ್ ಮಾಡಿಕೊಂಡಿದ್ದವು. ಇನ್ನುಳಿದ ಮಾಧ್ಯಮ ಸಂಸ್ಥೆಗಳಲ್ಲಿಯೇ ಕಾಸ್ಟ್ ಕಟಿಂಗ್ ಎನ್ನುವ ಹೆಸರಿನಲ್ಲಿ ಸಿಬ್ಬಂದಿಗಳಿಗೆ ಸೋಡ ಚೀಟಿ ಕೊಡುವ ಕೆಲಸವೂ ನಡೀತು. ಆದರೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ತಲಾ 10 ಸಾವಿರ ರೂಪಾಯಿ ನಗದು ಘೋಷಣೆ ಮಾಡಿದ್ದರು. ಕೊರೊನಾ ಸಂಕಷ್ಟದ ಕಾಲದಲ್ಲೂ ಯಾವುದಕ್ಕೂ ಅಂಜದೆ ಕೆಲಸ ಮಾಡಿದ್ದನ್ನು ಮನಗಂಡು ರಂಗನಾಥ್ ಅವರು, ಪ್ರೋತ್ಸಾಹ ಧನ ನೀಡಿದ್ದರು. ಇದೀಗ ಯುಗಾದಿ ಸಂಭ್ರಮ ಹೆಚ್ಚಿಸಲು ದಿನಸಿ ಪದಾರ್ಥ ನೀಡಲಾಗಿದೆ. ಆ 30 ಬಗೆಯ ಆಹಾರ ಪದಾರ್ಥಗಳಲ್ಲಿ ಎರಡು ಬಗೆಯ ಮಾಂಸವನ್ನು ಸೇರಿಸಲಾಗಿದೆ. ನಿನ್ನೆ ಆಹಾರ ಪದಾರ್ಥ ನೀಡಲಾಗಿತ್ತು. ಇಂದು ಮಾಂಸ ವಿತರಣೆ ಕಾರ್ಯಕ್ರಮ.

Public TV ಸಿಬ್ಬಂದಿಗೆ ಉಡುಗೊರೆ

ಕೆಲವೇ ಕ್ಷಣಗಳಲ್ಲಿ ಪಬ್ಲಿಕ್ ಟಿವಿ ಸಿಬ್ಬಂದಿಗಳಿಗೆ ಮಾಂಸ ವಿತರಣೆ..!


ಇದನ್ನೂ ಓದಿ:
ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರಿ ಟ್ರೋಲ್ ಆಗಿದ್ಯಾಕೆ..?

ಸಸ್ಯಹಾರಿಗಳು, ಮಾಂಸಹಾರಿಗಳು ಎಂದು ಪಟ್ಟಿ ಮಾಡಿಕೊಂಡಿರುವ ಪಬ್ಲಿಕ್ ಟಿವಿ ಆಡಳಿತ ಮಂಡಳಿ,  ಸಸ್ಯಹಾರಿಗಳೂ ಸೇರಿ ಎಲ್ಲಾ ಸಿಬ್ಬಂದಿಗಳಿಗೆ ಮಾಂಸ ಹೊರತುಪಡಿಸಿ, ಉಳಿದೆಲ್ಲಾ ಪದಾರ್ಥಗಳನ್ನು ವಿತರಣೆ ಮಾಡಲಾಗಿತ್ತು. ಮಾಂಸಹಾರ ಸೇವಿಸುವ ಸಿಬ್ಬಂದಿಗಳಿಗೆ ಇಂದು ಬೆಳಗ್ಗೆ 6 ಗಂಟೆಗೆ ಮಾಂಸ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಲವೇ ಕ್ಷಣಗಳಲ್ಲಿ  Public TV ವತಿಯಿಂದ ಎರಡು ಕೆಜಿ ಮಾಂಸ ಹಾಗೂ ಒಂದು ಕೆಜಿ ಕೋಳಿ ಮಾಂಸ ವಿತರಣೆ ಮಾಡಲಾಗುತ್ತದೆ. ಇದಕ್ಕೂ‌ ಮೊದಲು ಎಲ್ಲಾ ಸಿಬ್ಬಂದಿಗಳಿಗೂ ಹೊಸ ಬಟ್ಟೆ ವಿತರಣೆ ಮಾಡಲಾಗಿದ್ದು, ಮಾಧ್ಯಮ ಲೋಕದಲ್ಲಿ ಇದೇ ಮೊದಲ ಬಾರಿಗೆ ಯುಗಾದಿ ಸಂಭ್ರಮ ಮನೆ ಮಾಡುವಂತೆ ಮಾಡಿದೆ. ಯಾರೂ ಯೋಚನೆ ಮಾಡದೆ ಇರುವುದನ್ನೇ ಯೋಚಿಸುವ ಹೆಚ್.ಆರ್ ರಂಗನಾಥ್ ತನ್ನ ವಿಭಿನ್ನ ಕೆಲಸಗಳಿಗಳಿಂದಲೇ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರಿ ಟ್ರೋಲ್ ಆಗಿದ್ಯಾಕೆ..?

ಬೆಲೆ ಕಟ್ಟಲಾಗದ ಸಂಪತ್ತು ಸಿಬ್ಬಂದಿ‌ ಮೇಲಿನ ಈ ಕಾಳಜಿ..!

ಯುಗಾದಿ ಹಬ್ಬಕ್ಕೆ ಬೇಕಿರುವ ಪ್ರತಿಯೊಂದು ಆಹಾರ ಪದಾರ್ಥವನ್ನೂ ನೀಡಿದ್ದಾರೆ. ಇಂದು ಮಾಂಸದ ಅಡುಗೆಗೆ ಬೇಕಿರುವ ಎಲ್ಲಾ ವಿಧದ ಸಾಮಗ್ರಿಗಳನ್ನು ನೀಡಿದ್ದಾರೆ. ಇದರ ಮೌಲ್ಯ ಮಾರುಕಟ್ಟೆಯಲ್ಲಿ‌ ನಿಗದಿ‌ ಮಾಡಬಹುದು. ಬೇರೆ ಬೇರೆ ಮಾಧ್ಯಮ ಸಂಸ್ಥೆಗಳ ಆಡಳಿತ ಮಂಡಳಿ, ಇದರ ಪಕ್ಕಾ ಲೆಕ್ಕವನ್ನೂ ಕೂಡಿ, ಬಾಗಿಸಿ, ಕಳೆದು ಗುಣಿಸಬಹುದು. ಆದರೆ ಈ ರೀತಿ ಸಿಬ್ಬಂದಿಗಳಿಗೆ ಅಚ್ಚರಿಯ ಉಡುಗೊರೆ ನೀಡಿರುವುದು ಸಿಬ್ಬಂದಿಗಳಲ್ಲಿ ಧನ್ಯತ ಭಾವನೆ ಮೂಡುವಂತೆ ಮಾಡಿದೆ. ನಾನೊಬ್ಬ ಪಬ್ಲಿಕ್ ಟಿವಿಯ ಸಿಬ್ಬಂದಿ ಎಂದು ಸಾರ್ವಜನಿಕವಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎನ್ನುವುದು ವಿಶೇಷ. ಇನ್ನು ಅದೆಷ್ಟೋ ಸಂಸ್ಥೆಗಳಲ್ಲಿ ಸಂಬಳ ಕೊಡಲು ಆಗದೆ ಪರದಾಡುವ ಪರಿಸ್ಥಿತಿಯಲ್ಲಿ ಪಬ್ಲಿಕ್ ಟಿವಿ ತನ್ನ ಪ್ರಭಾವಳಿ ಹೇಗಿದೆ ಎನ್ನುವುದನ್ನು ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ತಿದೆ‌ ಎನ್ನುವುದು ಮಾತ್ರ ಸತ್ಯ.

Related Posts

Don't Miss it !