ಮುಖ್ಯಮಂತ್ರಿಯಾಗಿ ನಾನ್ಯಾಕೆ 2ನೇ ಮದುವೆ ಆದೆ..!? ಇದು ಅಸಲಿ ಕಥೆ..!

ಮೊದಲ ಪತ್ನಿ ಹಾಗು ಮಕ್ಕಳೊಂದಿಗೆ ಭಗವಂತ್ ಮನ್

ಪಂಜಾಬ್​ ಮುಖ್ಯಮಂತ್ರಿ ಮದುವೆ ಸರಳವಾಗಿ ಗುರುವಾರ ಚಂಢಿಗಡದ ನಿವಾಸದಲ್ಲಿ ನೆರವೇರಿದೆ. ಇತ್ತೀಚಿಗಷ್ಟೇ ಭರ್ಜರಿಯಾಗಿ ಆಮ್​ ಆದ್ಮಿ ಪಕ್ಷದಿಂದ ಜಯಭೇರಿ ಬಾರಿಸಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದ ಭಗವಂತ್​ ಮನ್​ ವೃತ್ತಿಯಲ್ಲಿ ವೈದ್ಯೆ​ ಆಗಿರುವ ಡಾ ಗುರ್​ಪ್ರೀತ್​​ ಕೌರ್ ಎಂಬಾಕೆಯನ್ನು ವರಿಸಿದ್ದಾರೆ. ಸರಳ ಕಾರ್ಯಕ್ರಮದಲ್ಲಿ ಸಂಬಂಧಿಕರು, ಆಪ್ತರು ಹಾಗೂ ಹಿತೈಶಿಗಳು ಮಾತ್ರವೇ ಭಾಗಿಯಾಗಿದ್ದರು. ಆಮ್​ ಆದ್ಮಿ ಪಕ್ಷದ ಸಂಸ್ಥಾಪಕ ಹಾಗು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಭಾಗವಹಿಸಿ, ನೂತನ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಆದರೆ ಪಂಜಾಬ್​ ಸಿಎಂ ಆಗುವ ಮೊದಲೇ ಭಗವಂತ್​ ಮನ್​​ ಈ ಹಿಂದೆ ಮದುವೆ ಆಗಿದ್ದರು, ಮಕ್ಕಳು ಕೂಡ ಇದ್ದಾರೆ. ಆದರೂ ಯಾಕೆ ಮದುವೆ ಆದರೂ ಅನ್ನೋದೆ ಅಚ್ಚರಿಯ ವಿಚಾರ.

ಮಗ ಮತ್ತು ಮಗಳ ಜೊತೆಗೆ ಮನ್

48 ವರ್ಷದ ಭಗವಂತ್​ ಮನ್​ ಮದುವೆ ಆಗಿದ್ಯಾಕೆ..?

ಮುಖ್ಯಮಂತ್ರಿ ಭಗವಂತ್​ ಮನ್​​ ಈ ಮೊದಲು ಇಂದರ್‌ಪ್ರೀತ್ ಕೌರ್ ಎಂಬುವರ ಜೊತೆಗೆ ಮದುವೆ ಆಗಿದ್ದರು. ಕಾರಣಾಂತರಗಳಿಂದ 6 ವರ್ಷಗಳ ಹಿಂದೆ ಅಂದರೆ 2015ರ ಆಸುಪಾಸಿನಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಮೊದಲ ಪತ್ನಿಯಿಂದ ವಿಚ್ಚೇದನ ಪಡೆದ ಬಳಿಕ ಒಂಟಿಯಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಮನ್​, ಇದೀಗ ಹರಿಯಾಣದ ಕುರುಕ್ಷೇತ್ರ ಮೂಲದ ವೈದ್ಯೆಯನ್ನು ವರಿಸಿದ್ದಾರೆ. ಕಳೆದ 4 ವರ್ಷಗಳ ಹಿಂದಿನಿಂದಲೂ ಡಾ ಗುರ್​ಪ್ರೀತ್​​ ಕೌರ್ ಜೊತೆಗೆ ಸ್ನೇಹದಿಂದ ಇದ್ದ ಭಗವಂತ್​ ಮನ್​, 2019ರ ಲೋಕಸಭಾ ಚುನಾವಣೆ ವೇಳೆ ಪ್ರಚಾರದಲ್ಲೂ ಭಾಗಿಯಾಗಿದ್ದರು ಎನ್ನಲಾಗಿದೆ. ಇನ್ನೂ ಇತ್ತೀಚಿಗೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರದ ವೇಳೆಯಲ್ಲೂ ಡಾ ಗುರ್​ಪ್ರೀತ್​​ ಕೌರ್ ಹಾಜರಿದ್ದರು. ಆದರೂ ಮದುವೆಯ ಗುಟ್ಟು ಜುಲೈ 6ರ ಸಂಜೆ ತನಕ ಯಾರಿಗೂ ತಿಳಿದಿರಲಿಲ್ಲ ಅನ್ನೋದು ವಿಶೇಷ.

2ನೇ ಪತ್ನಿ ಡಾ ಗುರ್​ಪ್ರೀತ್​​ ಕೌರ್

ಭಗವಂತ್​ ಮನ್​ ಮಗಳಿಗೆ 22, 2ನೇ ಪತ್ನಿಗೆ ಇದೀಗ 30..!

ಭಗವಂತ್​ ಮನ್​ಗೆ 48 ವರ್ಷ ಅಂದ್ರೆ 25 ವರ್ಷ ಹಿಂದೆಯೇ ಇಂದರ್​ಪ್ರೀತ್​ ಕೌರ್​ ಜೊತೆಗೆ ವಿವಾಹ ನೆರವೇರಿತ್ತು. ಮೊದಲು ಹೆಣ್ಣು ಮಗುವಾಗಿದ್ದು ಸೀರತ್ ಕೌರ್​ ಮನ್​​ಗೆ ಇದೀಗ 22 ವರ್ಷ. ಇನ್ನು ಗಂಡು ಮಗ ದಿಲ್ಶನ್ ಮನ್​​ಗೆ 17 ವರ್ಷ. 2015ರಲ್ಲಿ ಇಬ್ಬರ ಸಹಮತದಿಂದ ವಿವಾಹ ವಿಚ್ಛೇದನ ಪಡೆದಿದ್ದು, ಆ ಬಳಿಕ ಇಂದರ್​ಪ್ರೀತ್​ ಕೌರ್​ ಅಮೆರಿಕದಲ್ಲಿ ಮಕ್ಕಳ ಜೊತೆಗೆ ವಾಸವಿದ್ದಾರೆ. ಇತ್ತ ಏಕಾಂಗಿಯಾಗಿ ಇದ್ದುಕೊಂಡು ರಾಜಕಾರಣದಲ್ಲಿ ಕೆಲಸ ಮಾಡುತ್ತಿದ್ದ ಭಗವಂತ್​ ಮನ್​​ ಇದೀಗ ಮುಖ್ಯಮಂತ್ರಿ ಪಟ್ಟ ಪಡೆದಿದ್ದಾರೆ. ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಕ್ಕಳು ಹಾಗೂ ಮೊದಲ ಪತ್ನಿ ಇಂದರ್​ಪ್ರೀತ್​​ ಕೌರ್​, ಭಗವಂತ್​ ಮನ್​ ಬಗ್ಗೆ ವಿಶೇಷವಾಗಿ ಮಾತನಾಡಿದ್ದರು. ಪಂಜಾಬ್​ಗೆ ಏನಾದರೂ ಒಳ್ಳೆಯದು ಮಾಡ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದರು. ವಿಚ್ಛೇದನ ಪಡೆದಿದ್ದರೂ ನಾನು ಅವರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದರು ಇಂದರ್​ಪ್ರೀತ್​ ಕೌರ್.

ತಾಯಿ ಮತ್ತು ತಂಗಿಯ ಅಣತಿಯಂತೆ 2ನೇ ಮದುವೆ..!

ಮೊದಲ ಪತ್ನಿಯಿಂದ ಡೈವೋರ್ಸ್​ ಪಡೆದ ಬಳಿಕ ಭಗವಂತ್​ ಮನ್​​ ಸಾಕಷ್ಟು ದುಷ್ಚಟಗಳಿಗೆ ಬಲಿಯಾಗಿದ್ದರು ಎನ್ನಲಾಗಿದೆ. ಆ ಬಳಿಕ ಚಂಢಿಗಡದಲ್ಲಿ ಡಾ ಗುರ್​ಪ್ರೀತ್​ ಕೌರ್​ ಪರಿಚಯವಾದ ಬಳಿಕ ಮತ್ತೆ ಜೀವನದಲ್ಲಿ ಸರಿದಾರಿಗೆ ಬಂದಿದ್ದಾರೆ ಎನ್ನಲಾಗಿದೆ. ಮೊದಲ ಪತ್ನಿ ಹಾಗು ಇಬ್ಬರು ಮಕ್ಕಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಭಗವಂತ್​ ಮನ್​​ಗೂ ಸಂಗಾತಿಯಾಗಿ ಡಾ ಗುರ್​ಪ್ರೀತ್​ ಕೌರ್​ ಬಂದಿದ್ದಾರೆ. ತಂಗಿ ಹಾಗೂ ತಾಯಿ ಭಗವಂತ್​ ಮನ್​ ಅವರ ಜೀವನ ಸರಿ ಮಾಡುವ ಉದ್ದೇಶದಿಂದ ಈ ಮದುವೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಒಂಟಿ ಜೀವಕ್ಕೆ ವೈದ್ಯೆಯೊಬ್ಬರು ಜೊತೆಯಾಗಿದ್ದಾರೆ. ಕಳೆದ 4 ವರ್ಷಗಳಿಂದಲೂ ಸ್ನೇಹಿತರಾಗಿದ್ದವರು ಗುರುವಾರ ಸಿಖ್​ ಸಂಪ್ರದಾಯದಂತೆ ಹಸಮಣೆ ಏರಿದ್ದಾರೆ.

Related Posts

Don't Miss it !