ಮತಾಂತರ ಆರೋಪ ಮತ್ತು ಸಂಘಟನೆಗಳ ದಾಳಿ.. ಕಾನೂನು ಸಂಕಷ್ಟ

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮತಾಂತರ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಸ್ವತಃ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಅವರ ತಾಯಿ ಕೂಡ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ವಿಧಾನಸಭಾ ಅಧಿವೇಶದಲ್ಲಿ ಸ್ವತಃ ಶಾಸಕರೇ ಹೇಳಿಕೆ ನೀಡಿದ್ದರು. ಆ ಬಳಿಕ ಸಾಕಷ್ಟು ಹಿಂದೂಪರ ಸಂಘಟನೆಗಳು ಪ್ರಾರ್ಥನೆ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ, ಮತಾಂತರ ಮಾಡುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದರು. ಭಾನುವಾರ ರಾತ್ರಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಳ್ಳಾಡಿ ಎಂಬಲ್ಲೂ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ಮಾಡಲಾಗಿತ್ತು. ಜನತಾ ಕಾಲೋನಿಯ ಮನೆಯಲ್ಲಿ ನಡೆಯುತ್ತಿದ್ದ ಪ್ರಾರ್ಥನೆ ವೇಳೆ ಮತಾಂತರ ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಸದಸ್ಯರು ದಾಳಿ ಮಾಡಿದ್ದರು.

ಒತ್ತಾಯ ಪೂರ್ವಕ ಮತಾಂತರಕ್ಕೆ ಕಾನೂನು ಅವಕಾಶವಿಲ್ಲ

ಜನತಾ ಕಾಲೋನಿಯ ಪ್ರಕಾಶ್ ಮತ್ತು ಜ್ಯೋತಿ ದಂಪತಿ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ಆ ಬಳಿಕ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕ್ರೈಸ್ತ ಧರ್ಮದ ಪ್ರವಚನ ಮಾಡುತ್ತಿದ್ದರು. ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ದಂಪತಿ ಕ್ರೈಸ್ತ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಪ್ರೇರಣೆ ಮಾಡುತ್ತಿದ್ದರು ಎಂದು ಹಿಂದೂ ಜಾಗರಣ ವೇದಿಕೆ ಸದಸ್ಯರು ಗಂಭೀರ ಆರೋಪ ಮಾಡಿದ್ದರು. ಕೋಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. 20 ಜನರನ್ನು ಅವರ ಮನೆಗಳಿಗೆ ಕಳುಹಿಸಿ, ದಂಪತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ದಂಪತಿ ಸೇರಿದಂತೆ ಮೋಹನ್ ಮತ್ತು ರವಿ ಎಂಬುವರ ಮೇಲೆ ಎಫ್​ಐಆರ್ ಕೂಡ​ ದಾಖಲು ಮಾಡಲಾಗಿದೆ. ಧರ್ಮ ಪ್ರಚಾರ ಸಭೆಗೆ ಆಹ್ವಾನ ಪಡೆದಂತಹ ವ್ಯಕ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆತ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Raed this also;

ಮತಾಂತರ ಆಗುವುದು ಕಾನೂನು ವಿರುದ್ಧವೇ..?

ಯಾವುದೇ ವ್ಯಕ್ತಿ ತನಗೆ ಇಷ್ಟ ಬಂದ ಧರ್ಮದ ಅನುಯಾಯಿ ಆಗಲು ಭಾರತದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ತನ್ನ ಇಚ್ಛೆ ಇದ್ದರೆ ಯಾರು ಯಾವ ಧರ್ಮವನ್ನು ಪಾಲಿಸಲು ಅವಕಾಶ ಇರುವ ಕಾರಣದಿಂದ ಶಿಕ್ಷಿಸಲು ಅವಕಾಶವಿಲ್ಲ. ಒಂದು ವೇಳೆ ಪ್ರವಚನ ಕೇಳುತ್ತಿದ್ದ ವ್ಯಕ್ತಿಗಳು ನಮ್ಮನ್ನು ಒತ್ತಾಯ ಪೂರ್ವಕವಾಗಿ ಪ್ರಾರ್ಥನೆ ಕೇಳುವಂತೆ ಮಾಡಿದ್ದಾರೆ. ನಾವು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದು, ಒತ್ತಾಯ ಪೂರ್ವಕವಾಗಿ ಕ್ರೈಸ್ತ ಅಥವಾ ಬೇರೊಂದು ಧರ್ಮವನ್ನು ಹೇರಲಾಗ್ತಿದೆ ಎನ್ನುವ ಹೇಳಿಕೆಯನ್ನು ಸಭೆಯಲ್ಲಿ ನೆರೆದಿದ್ದರು ಪೊಲೀಸರ ಬಳಿ ಹೇಳಿಕೊಂಡರೆ ಮಾತ್ರ ಪ್ರಚಾರಕರ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ. ಇನ್ನೂ ದೇಶದ ಕಾನೂನಲ್ಲಿ ಧರ್ಮ ಪ್ರಚಾರವನ್ನು ಮಾಡಲು ಅವಕಾಶ ಇರುವ ಕಾರಣ, ಪ್ರಾರ್ಥನೆ ಮಾಡುವುದು, ತಮ್ಮ ಧರ್ಮದ ಬಗ್ಗೆ ಬಹಿರಂಗ ಸಭೆ ಮಾಡುವುದು ಕೂಡ ಕಾನೂನು ವಿರೋಧಿಯಲ್ಲ ಎನ್ನುತ್ತಾರೆ ಕಾನೂನು ತಜ್ಞರು.

Read this also;

ಒಂದು ಧರ್ಮದಿಂದ ಬೇರೆ ಧರ್ಮಕ್ಕೆ ಬದಲಾವಣೆ ಯಾಕೆ..?

ಮಾನವ ಜನ್ಮತಾಳುವ ಮುಂಚೆ ಯಾವುದೇ ಧರ್ಮ, ಜಾತಿಯೂ ಇರುವುದಿಲ್ಲ. ತನ್ನ ತಂದೆ ತಾಯಿ ಪಾಲಿಸುವ ಧರ್ಮ, ಜಾತಿಯನ್ನೇ ಮಗು ಕೂಡ ಪಾಲಿಸುತ್ತದೆ. ಆದರೆ ಸಮಾಜದಲ್ಲಿರುವ ಜಾತಿಯತೆ, ತಾರತಮ್ಯ ಬೇರೊಂದು ಧರ್ಮದ ಅನುಯಾಯಿ ಆಗುವಂತೆ ಪ್ರೇರೇಪಿಸುತ್ತದೆ. ಜಾತಿ ಜಾತಿಗಳ ನಡುವೆ ಸಮಾನತೆ ಇದ್ದರೆ ಯಾರೊಬ್ಬರೂ ಧರ್ಮ ಬಿಟ್ಟು ಹೋಗುವ ಕೆಲಸ ಮಾಡುವುದಿಲ್ಲ. ಆದರೆ ನಮ್ಮ ಜಾತಿಯನ್ನು ಕೀಳಾಗಿ ನೋಡುತ್ತಾರೆ. ನಮ್ಮ ಸಮುದಾಯಕ್ಕೆ ಗೌರವ ಸಿಗ್ತಿಲ್ಲ ಎನ್ನುವುದು ಮನಸ್ಸಿಗ ಬಂದಾಗ, ಸಮಾನತೆ ಬಯಸಿ ಬೇರೊಂದು ಧರ್ಮದ ಕಡೆಗೆ ಮುಖ ಮಾಡುತ್ತಾರೆ. ಇದನ್ನು ತಡೆಯುವುದಕ್ಕೆ ಕಾನೂನಲ್ಲಿ ಸದ್ಯಕ್ಕಂತೂ ಅವಕಾಶವಿಲ್ಲ. ರಾಜ್ಯ ಸರ್ಕಾರ ಕಾನೂನು ತರುವ ಬಗ್ಗೆ ಹೇಳಿಕೊಂಡಿದೆ. ಸಂವಿಧಾನದಲ್ಲಿ ಧರ್ಮ ಪ್ರಚಾರ ಹಾಗೂ ತನ್ನ ಇಚ್ಛೆಯಂತೆ ಧರ್ಮವನ್ನು ಬದಲಾಯಿಸಲು ಕಾನೂನು ಅವಕಾಶ ಇರುವ ಕಾರಣ ಕಾನೂನು ಮೂಲಕ ಹೇಗೆ ತಡೆಯುತ್ತಾರೆ ಎನ್ನುವುದೇ ಈಗಿರುವ ಕುತೂಹಲ. ಒಂದು ವೇಳೆ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ಕೊಟ್ಟರೆ, ಕಾನೂನು ಪ್ರಕಾರ ದಾಳಿ ಮಾಡಿದವರೇ ಸಂಕಷ್ಟ ಸಿಲುಕುವ ಸಾಧ್ಯತೆಯೂ ಇರುತ್ತದೆ.

Related Posts

Don't Miss it !