Care Taker; ಅಗರ್ಭ ಶ್ರೀಮಂತನ ಬಾಳಿಗೆ ನಕಲಿ ಸಂಗಾತಿ, ವಿಷವುಣಿಸಿದಳಾ ಈ ಮಹಿಳೆ..!?

ಶ್ರೀಮಂತ ವಯೋವೃದ್ಧ ವ್ಯಕ್ತಿಯನ್ನು ನೋಡಿಕೊಳ್ಳಲು ನೇಮಕ ಮಾಡಿದ್ದ ಮಹಿಳೆ 2ನೇ ಮದುವೆ ಮಾಡಿಕೊಂಡಿದ್ದೇವೆ ಎನ್ನುವ ಹಾಗೆ ನಕಲಿ ದಾಖಲೆ ಸೃಷ್ಟಿಸಿಕೊಂಡು, ಶ್ರೀಮಂತ ವ್ಯಕ್ತಿಯನ್ನೇ ಕೊಲೆ ಮಾಡುವುದಕ್ಕೆ ಉಪಾಯ ಹುಡುಕಿರುವ ಘಟನೆ ನಡೆದಿದೆ. ನನ್ನ ತಂದೆಯನ್ನು ಸಾಯಿಸುವ ಉದ್ದೇಶದಿಂದ ಸ್ಲೋ ಪಾಯ್ಸನ್​ ನೀಡಿದ್ದಾರೆ ಎಂದು ಮಗನೇ ಕೊಟ್ಟಿರುವ ದೂರಿನ ಆಧಾರದಲ್ಲಿ ಬೆಂಗಳೂರಿನ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರು ಯಾರು..? ಯಾವ ರೀತಿ ಸಾಯಿಸಲು ಸಂಚು ಮಾಡಲಾಗಿತ್ತು..? ಮಗ ಮಾಡಿರುವ ಅಲ್ಯುಮಿಯಂ ಪಾಸ್ಪೇಟ್​​ ಎನ್ನುವ ವಿಷಕಾರಿ ಅಂಶ ಎನ್ನುವುದು ಎಷ್ಟು ಸತ್ಯ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಡಾ ಶಿವಲಿಂಗಯ್ಯ, ನಿವೃತ್ತ ಚೀಫ್ ಎಂಜಿನಿಯರ್

ಮಂಡ್ಯ ಮೂಲದ 92 ವರ್ಷದ ಚೀಫ್​ ಎಂಜಿನಿಯರ್​..!

ಮಂಡ್ಯ ಮೂಲದ 92 ವರ್ಷದ ಶಿವಲಿಂಗಯ್ಯ, ವೃತ್ತಿಯನ್ನು ಚೀಫ್​ ಎಂಜಿನಿಯರ್​ ಆಗಿ ನಿವೃತ್ತರಾಗಿದ್ದರು. ಆ ಬಳಿಕ ನಿವೃತ್ತಿ ಬಳಿಕ ಬ್ಯುಸಿನೆಸ್​ ಮಾಡಿಕೊಂಡು ಸದಾಶಿವನಗರದಲ್ಲಿ ವಾಸವಾಗಿದ್ದರು. ಆನಂದ ಸೋಷಿಯಲ್ ಎಜ್ಯುಕೇಷನ್ ಟ್ರಸ್ಟ್​ನ ಮುಖ್ಯಸ್ಥರಾಗಿದ್ದರು. ಕಳೆದ 15 ವರ್ಷಗಳ ಹಿಂದೆ ಪತ್ನಿ ತೀರಿಕೊಂಡ ಬಳಿಕ ತನ್ನ ಯೋಗಕ್ಷೇಮ ನೋಡಿಕೊಳ್ಳಲು ಓರ್ವ ಮಹಿಳೆಯನ್ನು ನೇಮಕ ಮಾಡಿಕೊಂಡಿದ್ದರು. ಸಂಬಳಕ್ಕೆ ಬಂದಿದ್ದ ಧನಮಣಿ ಎನ್ನುವ ಮಹಿಳೆ ಧನದಾಸೆಗೆ ಸಂಬಂಧ ಕುದುರಿಸಿ ಕೋಟಿ ಕೋಟಿ ಹಣ ಲಪಟಾಯಿಸುವ ಸಂಚು ರೂಪಿಸಿದ್ದಾರೆ. ತನ್ನ ತಂದೆಗೆ ಕಾಫಿಯಲ್ಲಿ ಅಲ್ಯುಮಿನಿಯಂ ಪಾಸ್ಪೇಟ್​​ ಮಿಶ್ರಣ ಹಾಕಿ ನಿಧಾನವಾಗಿ ಸಾಯುವಂತೆ ಸಂಚು ರೂಪಿಸಿದ್ದಾರೆ ಎನ್ನುವುದು ಶಿವಲಿಂಗಯ್ಯ ಅವರ ಪುತ್ರ ಡಾ ರವಿ ಪ್ರಕಾಶ್​ ಅವರ ಆರೋಪ. ಸದಾಶಿವನಗರ ಪೊಲೀಸ್​ ಠಾನೆಯಲ್ಲಿ ದೂರು ದಾಖಲಿಸಿದ್ದಾರೆ. ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಅಲ್ಯುಮಿನಿಯಂ ಪ್ರಮಾಣ ಒಮ್ಮೆ 26 ಹಾಗೂ ಮತ್ತೊಮ್ಮೆ 30ಕ್ಕು ಹೆಚ್ಚು ಬಂದಿದೆ ಎನ್ನುವ ಮಾಹಿತಿ ನೀಡಿದ್ದಾರೆ.

ಡಾ ರವಿ ಪ್ರಕಾಶ್, ಡಾ ಶಿವಲಿಂಗಯ್ಯ ಪುತ್ರ

ಮದುವೆ ಆಗಿದ್ದರೂ ಅಚ್ಚರಿಯಿಲ್ಲ..!! ಮೂಲಗಳ ಮಾಹಿತಿ..

ಧನಮಣಿ ಹಾಗೂ ಶಿವಲಿಂಗಯ್ಯ ನಡುವೆ ವಿವಾಹ ನಡೆದಿದೆ ಎನ್ನುವ ಬಗ್ಗೆ ಮಾಹಿತಿಗಳು ಕೇಳಿ ಬರುತ್ತಿವೆ. ಆದರೆ ಮಗ ಡಾ ರವಿ ಪ್ರಕಾಶ್​, ಧನಮಣಿ ಹೇಳುತ್ತಿರುವ ಹೇಳಿಕೆ ಹಾಗೂ ನೀಡುತ್ತಿರುವ ದಾಖಲೆಗಳು ನಕಲಿ ಎನ್ನುತ್ತಿದ್ದಾರೆ. ಆದರೆ ಶಿವಲಿಂಗಯ್ಯ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಆದರೆ ನನ್ನ ತಂದೆಗೆ ಕಾಫಿ ಕುಡಿಯುವ ಅಭ್ಯಾಸವೇ ಇರಲಿಲ್ಲ. ಆದರೆ ನನ್ನ ತಂದೆಗೆ ಕಾಫಿಯನ್ನು ಕೊಡುತ್ತಿರುವುದನ್ನು ಕಂಡಾಗ ನನಗೆ ಆಶ್ಚರ್ಯ ಆಯ್ತು ಎಂದಿದ್ದಾರೆ. ಈಗ 92 ವರ್ಷ ವಯ್ಯಸ್ಸಿನ ಶಿವಲಿಂಗಯ್ಯ, ಕಳೆದ 15 ವರ್ಷಗಳ ಹಿಂದೆ ಹೆಂಡತಿಯನ್ನು ಕಳೆದುಕೊಂಡಿದ್ದಾರೆ. ಈ ನಡುವೆ ಮಗನಿಂದಲೂ ದೂರವಿದ್ದ ಹಿರಿಯ ಜೀವಕ್ಕೆ ಹೆಣ್ಣಿ ಆಸರೆ ಬೇಕೆನ್ನಿಸಿ ವಿವಾಹ ನಡೆದಿರಬಹುದು ಎನ್ನುವ ಶಂಕೆ ಪೊಲೀಸರನ್ನು ಕಾಡುತ್ತಿದೆ. ಇದೇ ಕಾರಣದಿಂದ ಶಿವಲಿಂಗ್ಗಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವ ನಿರೀಕ್ಷೆಯಲ್ಲಿದ್ದಾರೆ. ಶಿವಲಿಂಗಯ್ಯ ಅವರ ಹೇಳಿಕೆ ಆಧಾರದಲ್ಲಿ ಈ ಪ್ರಕರಣ ನಿಂತಿದೆ. ಶಿವಲಿಂಗಯ್ಯ ಅವರ ಪಿಎ ವೆಂಕಟೇಶ್ ಮೂರ್ತಿ ಹಾಗೂ ಧನಮಣಿ ಎನ್ನುವವರು ತಪ್ಪು ಮಾಡಿದ್ದಾರೋ..? ಅಥವಾ ಮಗನೇ ಆಸ್ತಿಗಾಗಿ ಹೊಂಚು ಹಾಕಿದ್ದಾರೋ ಎನ್ನುವ ಬಗ್ಗೆಯೂ ತನಿಖೆ ಶುರುವಾಗುವ ಲಕ್ಷಣ ಕಂಡು ಬಂದಿದೆ.

ಧನಮಣಿ, ಕೇರ್‌ಟೇಕರ್

32 ವರ್ಷಗಳ ಕಾಲ ತಂದೆಯನ್ನು ಬಿಟ್ಟು ಹೋಗಿದ್ಯಾಕೆ..?

ಶಿವಲಿಂಗ್ಯಯ್ಯ ಚೀಫ್​ ಎಂಜಿನಿಯರ್​ ಆಗಿದ್ದವರು. ಮಗ ಡಾ ರವಿ ಪ್ರಕಾಶ್​ ಅವರನ್ನು ಡಾಕ್ಟರ್​ ಮಾಡಿಸಿದ್ದಾರೆ. ಆ ಬಳಿಕ ಶಿವಲಿಂಗಯ್ಯ ದಂಪತಿ ಸದಾಶಿವನಗರದಲ್ಲಿ ವಾಸವಾಗಿದ್ದರು. ಕಳೆದ 15 ವರ್ಷಗಳ ಹಿಂದೆ ತಾಯಿ ಸಾವನ್ನಪ್ಪಿದ ಬಳಿಕ ಒಂಟಿಯಾದ ತಂದೆಯನ್ನು ತಮ್ಮೊಂದಿಗೆ ಕರೆದೊಯ್ಯುವುದು ಉತ್ತಮರ ಲಕ್ಷಣ. ಆದರೆ 77 ವರ್ಷದ ವೃದ್ಧನನ್ನು ಒಂಟಿಯಾಗಿ ಯಾರೋ ಕೇರ್​ಟೇಕರ್​ ಬಳಿ ಬಿಟ್ಟು ಹೋಗಿದ್ದು ಎಷ್ಟು ಸರಿ..? ಎನ್ನುವ ಪ್ರಶ್ನೆಯೂ ಉದ್ಬವ ಆಗಿದೆ. ಆಗಿನಿಂದ ಜೊತೆಯಲ್ಲಿದ್ದ ಧನಮಣಿ ಬಗ್ಗೆ ಉತ್ತಮ ಅಭಿಪ್ರಾಯ ಬಂದು ಮದುವೆಯಾಗಿ ತನ್ನ ಸಂಪತ್ತನ್ನು ಆಕೆಯ ಹೆಸರಿಗೆ ಮಾಡಿಕೊಟ್ಟಿರಬಹುದು. ಈ ವಿಚಾರ ತಿಳಿದ ಪುತ್ರ ಡಾ ರವಿಪ್ರಕಾಶ್​, ಅಲ್ಯುಮಿನಿಯಂ ಫಾಸ್ಟೇಟ್​ ಎನ್ನುವ ವೈದ್ಯಲೋಕದ ಕಥೆ ಕಟ್ಟಿರಬಹುದು ಎನ್ನುವ ಅನುಮಾನವೂ ಕಾಡುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯಾಂಶವನ್ನು ಜಗತ್ತಿನ ಮುಂದೆ ತೆರೆದಿಡುವ ಕೆಲಸ ಮಾಡಬೇಕಿದೆ. ಒಂದು ವೇಳೆ ಸತ್ಯಾಂಶಕ್ಕೆ ಸಾಕ್ಷಿ ಆಗಿರುವ ಶಿವಲಿಂಗಯ್ಯ ಆಸ್ಪತ್ರೆಯಿಂದ ಹೊರಬಂದು ಸತ್ಯಾಂಶವನ್ನು ಬಯಲು ಮಾಡದಿದ್ದರೆ, ಇದು ಸಾಧ್ಯವಾಗದಿದ್ದರೆ ಕೋರ್ಟ್​ ಕಟಕಟೆಯಲ್ಲಿ ಸತ್ಯ ಸಂಘರ್ಷ ನಡೆಯುವುದು ನಿಶ್ಚಿತ.

Related Posts

Don't Miss it !