ಒಂಟಿ ಮಹಿಳೆ ಮನೆಗೆ ನುಗ್ಗಿ ಮೈ ಕೈ ಕಚ್ಚಿದ ಕಾಮುಕ.. ಖಾಕಿ ಮಾಡಿದ ಎಡವಟ್ಟು..!!

ನೇಪಾಳಿ ಮೂಲದ ಮಹಿಳೆ ಮೇಲೆ ಮೃಘೀಯ ವರ್ತನೆ ತೋರಿಸಿದ್ದ ರೌಡಿ ಶೀಟರ್ ಅವೇಜ್​ನನ್ನು ಪೊಲೀಸರು ಬಂಧಿಸಿದ್ದರು. ಆದರೆ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗುವಾಗ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಆದರೆ ಪೊಲೀಸರೇ ರೌಡಿಶೀಟರ್​ ಒಬ್ಬನಿಗೆ ತಪ್ಪಿಸಿಕೊಳ್ಳಲು ಬೆಂಬಲ ನೀಡಿದ್ರಾ..? ಎನ್ನುವ ಅನುಮಾನ ಮೂಡಿಸುವಂತೆ ಮಾಡಿದೆ. ಇದೀಗ ನಾಪತ್ತೆ ಆಗಿರುವ ರೌಡಿಶೀಟರ್​ ಹುಡುಕಾಟಕ್ಕೆ ಎರಡು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಆರೋಪಿ ಬಂಧನಕ್ಕೆ 2 ವಿಶೇಷ ತಂಡ ರಚನೆ ಮಾಡಿರುವುದಾಗಿ ಪೂರ್ವ ವಿಭಾಗದ ಡಿಸಿಪಿ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ; ಆ್ಯಂಕರ್​ ಅನುಶ್ರೀ ತಂದೆ ಪರಿಸ್ಥಿತಿ ಹೇಗಿದೆ ಗೊತ್ತಾ..? ಅಪ್ಪನ ಜೀವ ರಕ್ಷಣೆಗೆ ಬರ್ತಾರಾ ಸ್ಟಾರ್​ ಡಾಟರ್..?

ಅತ್ಯಾಚಾರ ಯತ್ನ ಘಟನೆ ನಡೆದಿದ್ದು ಎಲ್ಲಿ..? ಮತ್ತು ಹೇಗೆ..?

ರೌಡಿಶೀಟರ್​ ಅವೇಜ್​ನನ್ನು ಈ ಹಿಂದೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಗಡಿಪಾರು ಮಾಡಿದ್ದರು. ಆದರೂ ನಿನ್ನೆ ತಡರಾತ್ರಿ ಡಿಜೆ ಹಳ್ಳಿಯ ಮುನಿಯಪ್ಪ ಬ್ಲಾಕ್​ನಲ್ಲಿ ಕಾಣಿಸಿಕೊಂಡಿದ್ದನು. ಕುಡಿದ ಮತ್ತಿನಲ್ಲಿ ನೇಪಾಳಿ ಮೂಲದ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆಸಿದ್ದನು. ಮಹಿಳೆಯ ಮೈಮೇಲೆ ಎರಗಿ ಪ್ರಾಣಿಗಳಂತೆ ಮಹಿಳೆಯ ಮೈ ಕಚ್ಚಿದ್ದನು. ರೌಡಿಶೀಟರ್ ಅವೇಜ್ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಪೊಲೀಸರು, ಮುಂಜಾನೆ ನೇಪಾಳಿ ಮಹಿಳೆ ರೇಪ್ ಕೇಸ್​ನಲ್ಲಿ ಬಂಧಿಸಿದ್ದರು. ಆ ಬಳಿಕ ಕೋರ್ಟ್​ಗೆ ಹಾಜರು ಮಾಡುವ ಮುನ್ನ ವೈದ್ಯಕೀಯ ತಪಾಸಣೆ ಮಾಡಿಸಲು ಆಸ್ಪತ್ರೆಗೆ ಕರೆದೊಯ್ಯುವಾಗ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.

ಗಡಿಪಾರು ರೌಡಿಶೀಟರ್ ಬಂಧನದಲ್ಲಿ ಭದ್ರತಾ ಲೋಪ..!

ಕಮರ್ಷಿಯಲ್ ಸ್ಟ್ರೀಟ್ ರೌಡಿಶೀಟರ್ ಅವೇಜ್​ ಬಂಧನದ ವೇಳೆ ಪೊಲೀಸರು ಭದ್ರತಾ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪೊಲೀಸರು ಉದ್ದೇಶ ಪೂರ್ವಕವಾಗಿ ಆತನನ್ನು ಬಿಟ್ಟು ಕಳುಹಿಸಿದ್ರೋ..? ಅಥವಾ ಪರಿಚಯವನ್ನೇ ಲಾಭ ಮಾಡಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ ಎನ್ನುವ ಬಗ್ಗೆ ಹಿರಿಯ ಪೊಲೀಸರು ವರದಿ ಕೇಳಿದ್ದಾರೆ ಎನ್ನಲಾಗಿದೆ. ಆದರೂ ಮಹಿಳೆಯ ಮೈಕೈ ಕಚ್ಚಿ ಆಸ್ಪತ್ರೆ ಸೇರುವಂತೆ ಮಾಡಿರುವ ರೌಡಿಶೀಟರ್​ ವಿಚಾರದಲ್ಲಿ ಪೊಲೀಸ್ರು ನಡೆದುಕೊಂಡಿರುವ ರೀತಿ ನೀತಿಗಳನ್ನು ನೋಡಿದರೆ ಅನುಮಾನ ಮೂಡುವಂತೆ ಮಾಡಿದೆ. ಕುಡಿತ ಮತ್ತಿನಲ್ಲಿ ನೇಪಾಳ ಮೂಲದ ಮನೆಗೆ ನುಗ್ಗಿದ್ದ ರೌಡಿಯೊಬ್ಬ ತಪ್ಪಿಸಿಕೊಂಡು ಹೋಗಿದ್ದಾನೆ.

ನೇಪಾಳಿ ಮೂಲಕ ಕುಟುಂಬ, ಭದ್ರತೆಯೇ ಕಾಯಕ..!

ನೇಪಾಳ ಮೂಲದ ಜನರು ಬಹುತೇಕ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ. ಅತ್ಯಾಚಾರ ಯತ್ನಕ್ಕೆ ಸಿಲುಕಿ ಗಾಯಗೊಂಡಿರುವ ಸಂತ್ರಸ್ತ ಮಹಿಳೆಯ ಪತಿ ಕೂಡ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಮುನಿಯಪ್ಪ ಬ್ಲಾಕ್​ನ ಐದನೇ ಕ್ರಾಸ್​ನಲ್ಲಿದ್ದ ಮಹಿಳೆ ಮನೆಗೆ ಮದ್ಯಪಾನ ಮಾಡಿದ ಮತ್ತಿನಲ್ಲಿ ನುಗ್ಗಿದ ರೌಡಿಶೀಟರ್​ ಆವೇಜ್​, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ತನಿಖೆ ಮುಂದುವರಿದಿದೆ. ಅವೇಜ್​ ಮೃಗೀಯ ವರ್ತನೆಯಿಂದ ಅಸ್ವಸ್ತರಾಗಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮೆಡಿಕಲ್​ ಚೆಕ್​ ಅಪ್​ಗೆ ತೆರಳುವಾಗ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಇದು ಪೂರ್ವ ನಿಯೋಜಿತವೋ ಎನ್ನುವ ಬಗ್ಗೆಯೂ ತನಿಖೆ ನಡೆಯಬೇಕಿದೆ.

Related Posts

Don't Miss it !