ಭಾರತದಲ್ಲಿ ಮತ್ತೆ ಬ್ರಿಟೀಷ್​ ಆಳ್ವಿಕೆ – 2.O – RSS ಆತಂಕ

ಭಾರತವನ್ನು 18ನೇ ಶತಮಾನದಲ್ಲಿ ಆಗ್ಲರು ಆಳ್ವಿಕೆ ಮಾಡಿದ್ದರು. ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಕಾಲಿಟ್ಟಿದ್ದ ಬ್ರಿಟೀಷರು, ಸಣ್ಣ ಸಣ್ಣ ರಾಜ್ಯಗಳಾಗಿದ್ದ ಸ್ವಾತಂತ್ರ್ಯ ಪೂರ್ವ ಭಾರತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಮಾರು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದು ಇತಿಹಾಸ. ಆದರೆ ಸ್ವಾತಂತ್ರ್ಯ ಪಡೆದ ಭಾರತ ಪ್ರಜಾಪ್ರಭುತ್ವ, ಸಂವಿಧಾನದ ಆಶಯದಡಿ ಸರ್ಕಾರಗಳು ಸ್ಥಾಪನೆ ಆಗುತ್ತಿವೆ. ಆದರೆ ಮತ್ತೆ ಬ್ರಿಟೀಷರು ಭಾರತವನ್ನು ತಮ್ಮ ಕೈವಶ ಮಾಡಿಕೊಳ್ಳಲಿದ್ದಾರೆ ಎಂದು ಬಿಜೆಪಿ ಮಾತೃ ಸಂಸ್ಥೆ ಆಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆತಂಕ ಹೊರ ಹಾಕಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪಾದಕತ್ವದಲ್ಲಿ ಹೊರಬರುವ ಪಾಂಚಜನ್ಯ ಪತ್ರಿಕೆಯಲ್ಲಿ ಈ ರೀತಿಯ ಲೇಖನ ಪ್ರಕಟ ಮಾಡಲಾಗಿದೆ.

ಈಸ್ಟ್​ ಇಂಡಿಯಾ ಕಂಪನಿ – 2.O..!

ಅಕ್ಟೋಬರ್​ 3ರಂದು ಬಿಡುಗಡೆ ಆಗುವ ಸಂಚಿಕೆಯಲ್ಲಿ ಈಸ್ಟ್​ ಇಂಡಿಯಾ ಕಂಪನಿ 2.O ಹೆಸರಿನ ಲೇಖನ ಪ್ರಕಟವಾಗುತ್ತಿದ್ದು, ಅದರಲ್ಲಿ ಆನ್​ಲೈನ್​ ವ್ಯಾಪಾರ ನಡೆಸುತ್ತಿರುವ ಬೃಹತ್​ ಸಂಸ್ಥೆ ಅಮೆಜಾನ್​ ವಿರುದ್ಧ ವಾಗ್ದಾಳಿ ಮಾಡಲಾಗಿದೆ. ಅಮೆಜಾನ್​ ಸಂಸ್ಥೆಯು ತನಗೆ ಬೇಕಾದ ಹಾಗೆ ಕಾನೂನು ಮಾಡಿಕೊಡುವ ಉದ್ದೇಶದಿಂದ ಸರ್ಕಾರಗಳಿಗೆ ಕೋಟಿ ಕೋಟಿ ಲಂಚ ಕೊಟ್ಟಿರುವ ವರದಿಗಳಿಗೆ ಎಂದು ಪ್ರಸ್ತಾಪಿಸಲಾಗಿದೆ. 18ನೇ ಶತಮಾನದಲ್ಲಿ ಭಾರತವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಈಸ್ಟ್​ ಇಂಡಿಯಾ ಕಂಪನಿ ಏನು ಮಾಡಿತ್ತೋ ಅದನ್ನೇ ಈಗ ಅಮೆಜಾನ್​ ಸಂಸ್ಥೆ ಮಾಡುತ್ತಿದೆ. ಇದಕ್ಕಾಗಿ ಅಮೆಜಾನ್​ ಭಾರತದ ಸರ್ಕಾರಗಳಿಗೆ ಕೋಟ್ಯಂತರ ರೂಪಾಯಿ ಲಂಚದ ಹಣವನ್ನು ನೀಡಿದೆ ಎಂದು ದೂರಲಾಗಿದೆ.

Read this also;

ಅಮೆಜಾನ್​ ಉದ್ದೇಶವೇ ಮಾರುಕಟ್ಟೆ ಏಕಸ್ವಾಮ್ಯ..!

ಅಮೇಜಾನ್​ ಎನ್ನುವ ಅನ್​ಲೈನ್​ ವ್ಯಾಪಾರ ತಾಣದ ಉದ್ದೇಶವೇ ಭಾರತದ ಮಾರುಕಟ್ಟೆ ಮೇಲೆ ಏಕಸ್ವಾಮ್ಯತೆ ಮೆರೆಯುವುದು. ಇದನ್ನು ಆ ಸಂಸ್ಥೆ ಕೂಡ ಬಹಿರಂಗವಾಗಿ ಹೇಳಿಕೊಂಡಿದೆ. ಅದಕ್ಕಾಗಿ ಕೆಲಸ ಕೂಡ ನಡೆಯುತ್ತಿದೆ. ಈ ಮೂಲಕ ಭಾರತೀಯ ಆರ್ಥಿಕತೆಯ ನಿಯಂತ್ರಣ ಮಾಡುವುದು. ನಂತರ ರಾಜಕೀಯ ಮತ್ತೆ ಭಾರತೀಯರ ವೈಯಕ್ತಿಕ ಸ್ವಾತಂತ್ರ್ಯ ಕಸಿಯುವ ಕೆಲಸ ಮಾಡಲಿದೆ ಎಂದು ಆರೋಪಿಸಲಾಗಿದೆ. ಅಮೆಜಾನ್​ ಪ್ರೈಮ್​ ವಿರುದ್ಧ ದಾಳಿ ಮಾಡಿರುವ ಪಾಂಚಜನ್ಯ, ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಚಲನಚಿತ್ರ ಹಾಗೂ ನೆಟ್​ ಸೀರಿಸ್​ ಬಿಡುಗಡೆ ಮಾಡುತ್ತಿದೆ. ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅನುಕೂಲ ಆಗುವಂತೆ ಸಾಕಷ್ಟು ಸಹಸಂಸ್ಥೆಗಳನ್ನು ಅಮೆಜಾನ್​ ಸ್ಥಾಪಿಸಿಕೊಂಡಿದೆ ಎಂದು ಬರೆಯಲಾಗಿದೆ.

Read this also;

2018 – 2020 ರ ನಡುವೆ ಲಂಚ ವ್ಯವಹಾರ..!

ಫ್ಯೂಚರ್​ ಗ್ರೂಪ್​ ಸ್ವಾಧೀನ ವಿಚಾರದಲ್ಲಿ ಕಾನೂನು ಸಂಕಷ್ಟ ಎದುರಿಸುತ್ತಿರುವ ಅಮೆಜಾನ್​ ಸಂಸ್ಥೆ, ಭಾರತೀತಿ ಸ್ಪರ್ಧಾ ಆಯೋಗದ ತನಿಖೆಯನ್ನು ಎದುರಿಸುತ್ತಿದೆ. ಅಮೆರಿದ ಈ ಕಾಮರ್ಸ್​ ದೈತ್ಯ ಸಂಸ್ಥೆ ಕೂಡ ಭಾರತದಲ್ಲಿ ಲಂಚ ನೀಡಿರುವ ಬಗ್ಗೆ ತನಿಖೆ ನಡೆಸುತ್ತಿದೆ. 2018 ರಿಂದ 2020ರ ಅವಧಿಯಲ್ಲಿ ಬರೋಬ್ಬರಿ ₹8,546 ಕೋಟಿ ರೂಪಾಯಿಗಳನ್ನು ಕಾನೂನು ಪರಿಹಾರಕ್ಕಾಗಿ ಬಳಸಿಕೊಳ್ಳಲಾಗಿದೆ. ಭಾರತದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್​ ಕೂಡ ಅಮೆಜಾನ್​ ಲಂಚದ ಬಗ್ಗೆ ಸುಪ್ರೀಂಕೋರ್ಟ್​ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹ ಮಾಡಿತ್ತು ಎಂಬುದನ್ನು ಒಳಗೊಂಡಿದೆ ಎಂದು ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ.

Related Posts

Don't Miss it !