ಉಕ್ರೇನಿಯನ್ನರ ದೇಶಪ್ರೇಮ ರಸ್ತೆ ರಸ್ತೆಯಲ್ಲೂ ಅಬ್ಬರ..! ರಷ್ಯಾಗೆ ಸಂಧಾನವೇ ಸಕ್ಸಸ್..!

ರಷ್ಯಾ – ಉಕ್ರೇನ್​ ನಡುವೆ ಯುದ್ಧ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ತಿದೆ. ಉಕ್ರೇನ್​ನ ಒಂದೊಂದೇ ನಗರಗಳು ರಷ್ಯಾ ಸೈನಿಕರ ಹಿಡಿತಕ್ಕೆ ಹೋಗುತ್ತಿವೆ. ರಷ್ಯಾ ಸೇನೆಯ ಯುದ್ಧ ಟ್ಯಾಂಕರ್​​ಗಳ ಅಬ್ಬರ ಉಕ್ರೇನ್​​ ರಸ್ತೆಗಳಲ್ಲಿ ಕಾಣಿಸುತ್ತಿದೆ. ಬಾಂಬ್​​ಗಳ ಸುರಿಮಳೆ ಆಗುತ್ತಿದೆ. ಉಕ್ರೇನ್​ ದೇಶಕ್ಕೆ ಲಗ್ಗೆ ಇಟ್ಟಿರುವ ರಷ್ಯಾ ಸೈನಿಕರ ಸ್ಥಿತಿ ಅಯೋಮಯವಾಗಿದೆ. ರಷ್ಯಾ ಸೈನಿಕರು ತಿನ್ನಲು ಆಹಾರ ಸಿಗದೆ ಉಕ್ರೇನ್​ ದೇಶದ ಸೂಪರ್​ ಮಾರ್ಕೆಟ್​​ಗಳಲ್ಲಿ ತಡಕಾಡುತ್ತಿರುವ ದೃಶ್ಯ ಸರ್ವೇ ಸಮಾನ್ಯವಾಗಿದೆ. ಉಕ್ರೇನ್​​ ದೇಶದ ಅಣು ವಿದ್ಯುತ್​​ ಸ್ಥಾವರಗಳನ್ನು ವಶಕ್ಕೆ ಪಡೆದಿರುವ ರಷ್ಯಾ ಸೇನೆ, ಅನಿಲ ಸ್ಥಾವರಗಳನ್ನು ಸ್ಫೋಟ ಮಾಡಿದ್ದು, ಆಹಾರ ತಯಾರಿಸಲು ಗ್ಯಾಸ್​ ಇಲ್ಲದೆ ಉಕ್ರೇನ್​​ ಜನರೂ ಕೂಡ ಸಂಕಷ್ಟ ಪಡುವಂತಾಗಿದೆ. ಅದರಲ್ಲೂ ಅನಿವಾಸಿ ಉಕ್ರೇನಿಯನ್ನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್​ ಮಾತ್ರ ರಷ್ಯಾ ಸೈನಿಕರು ಆವರಿಸಿದ್ದರೂ ತಾನು ಸೋಲು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಮಾಡು ಇಲ್ಲವೇ ಮಡಿ ಹೋರಾಟ ಎಂದು ಘೋಷಣೆ ಮಾಡಿದೆ.

ಉಕ್ರೇನ್ ಸ್ಥಿತಿ

ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ, ಉಕ್ರೇನ್​ಗೆ ಬೆಂಬಲ..!

ರಷ್ಯಾ ಯುದ್ಧ ನೀತಿಯನ್ನು ನ್ಯಾಟೋ ರಾಷ್ಟ್ರಗಳು ಸೇರಿದಂತೆ G-7 ಒಕ್ಕೂಟ ವಿರೋಧಿಸಿತ್ತು. ಆ ಬಳಿಕ ಉಕ್ರೇನ್​ ನೆರವಿಗೆ ನಿಲ್ಲುವುದಾಗಿ ಬಹಿರಂಗ ಘೋಷಣೆಯನ್ನೂ ಮಾಡಿದ್ದವು. ರಷ್ಯಾ ಯುದ್ಧ ನಿಲ್ಲಿಸಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾದಿತು ಎನ್ನುವ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದವು. ಆದರೆ ರಷ್ಯಾ ಮಾತ್ರ ಯಾವುದೇ ಬೆದರಿಕೆಗೂ ಜಗ್ಗದೆ ಆನೆ ನಡೆದಿದ್ದೇ ಹಾದಿ ಎನ್ನುವಂತೆ ಸಾಗುತ್ತಿದ್ದು, ಉಕ್ರೇನ್​ ದೇಶದಲ್ಲಿ ದಿಗಿಲು ಸೃಷ್ಟಿಯಾಗಿತ್ತು. ಇದೀಗ ಉಕ್ರೇನ್​ ನೆರವಿಗೆ ಸಾಕಷ್ಟು ದೇಶಗಳು ಧಾವಿಸಿ ಬಂದಿದ್ದು, ಉಕ್ರೇನ್​ ಸೇನೆಯ ನೆರವಿಗೆ ನಿಂತಿವೆ. ಈ ನಡುವೆ 3 ಲಕ್ಷದ 68 ಸಾವಿರ ಉಕ್ರೇನ್​ ಜನರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ರಷ್ಯಾ ಮಾತ್ರ ಉಕ್ರೇನ್​ ಸೈನಿಕರು ಶರಣಾಗತಿ ಆದರೆ ಯುದ್ಧವನ್ನು ನಿಲ್ಲಿಸಲಾಗುವುದು ಎಂದು ಘೋಷಿಸಿದ್ದು, ರಾಯಭಾರ ಅಧಿಕಾರಿಗಳನ್ನು ಸಂಧಾನಕ್ಕಾಗಿ ಉಕ್ರೇನ್​​ಗೆ ಕಳುಹಿಸಿದೆ. ಆದರೆ ಶಸ್ತ್ರಾಸ್ತ್ರ ಕೆಳಕ್ಕೆ ಇಡುವ ಪ್ರಶ್ನೆಯೇ ಇಲ್ಲ ಎಂದು ತಿರುಗಿ ಬಿದ್ದಿರುವ ಉಕ್ರೇನ್​ ಸರ್ಕಾರ, ಮೊದಲು ಯುದ್ಧ ನಿಲ್ಲಿಸಿ ಆ ಬಳಿಕ ಮಾತುಕತೆ ಬನ್ನಿ ಎಂದು ತಿರುಗೇಟು ನೀಡಿದೆ.

ಇದನ್ನೂ ಓದಿ: 3ನೇ ವಿಶ್ವಯುದ್ಧ ಘೋಷಣೆಗೆ ಕ್ಷಣಗಣನೆ ಆರಂಭ..! ಇಕ್ಕಟ್ಟಿಗೆ ಸಿಲುಕಿದ ಭಾರತ..!

ಉಕ್ರೇನ್​ ಸೈನಿಕರಿಂದ ಕೆಚ್ಚೆದೆಯ ಹೋರಾಟ..! ಸಾವಿಗೂ ಡೋಂಟ್​ ಕೇರ್​..

ಕಳೆದ 2 ದಿನಗಳ ಹಿಂದೆ ಉಕ್ರೇನ್​ ದೇಶಕ್ಕೆ ಲಗ್ಗೆ ಹಾಕು ಸಿದ್ಧವಾಗಿದ್ದ ರಷ್ಯಾ ಸೇನೆಗೆ ಹಿನ್ನಡೆ ಉಂಟು ಮಾಡಿದ್ದು ಒಬ್ಬನೇ ಒಬ್ಬ ಸೈನಿಕ ಎನ್ನುವುದು ಅಚ್ಚರಿಯ ಸಂಗತಿ. ಉಕ್ರೇನ್‌ ಗಡಿಯನ್ನು ದಾಟಿ ಬರುವಾಗ ಖೆರ್ಸನ್ ಪ್ರಾಂತ್ಯದಲ್ಲಿ ಸೇತುವೆ ಅನುಕೂಲ ಆಗಿತ್ತು. ಆದರೆ ರಷ್ಯನ್ ಟ್ಯಾಂಕರ್​ ತಡೆಯುವ ಉದ್ದೇಶದಿಂದ ಹೆನಿಚೆಸ್ಕ್ ಸೇತುವೆ ಸ್ಫೋಟಿಸಿದ ಸೈನಿಕ ತಾನೂ ಸತ್ತರೂ ದೇಶ ರಕ್ಷಣೆ ಮುಖ್ಯ ಎನ್ನುವ ಸಂದೇಶ ರವಾನಿಸಿದ್ದ. ದೇಶಕ್ಕಾಗಿ ಹುತಾತ್ಮನಾದ ಯೋಧ ವಿಟಲಿ ಸ್ಕಾಕುನ್ ವೊಲೊಡಿಮಿರೊವ್​ ಈಗ ಉಕ್ರೇನ್​ ದೇಶಿಗರ ಮೆಚ್ಚಿನ ಹೀರೋ. ತನ್ನ ಸೈನಿಕನ ಸಾಹಸವನ್ನು ವ್ಯರ್ಥವಾಗುವುದಕ್ಕೆ ಬಿಡಲ್ಲ ಎಂದಿರುವ ಉಕ್ರೇನ್​​ ಸೈನಿಕರು, ಪ್ರಾಣ ಇರುವ ತನಕ ಯುದ್ಧ ಮಾಡುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇನ್ನೂ ಉಕ್ರೇನ್​​ ದೇಶದ ಜನರು ಸ್ವಯಂ ಯುದ್ಧ ಮಾಡುವುದಕ್ಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ನಾವು ರಷ್ಯಾ ಸೇನೆಗೆ ಶರಣಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾ ಸಂಧಾನ ಮಾತುಕತೆಯನ್ನು ತಿರಸ್ಕರಿಸಿರುವ ಉಕ್ರೇನ್​ ಯುದ್ಧ ನಿಲ್ಲಿಸಿ ಮಾತುಕತೆ ಬನ್ನಿ ಎಂದಿದೆ.

ಇದನ್ನೂ ಓದಿ: ಗಂಡನ ಎಡವಟ್ಟಿಗೆ ಹೆಂಡತಿ ಹೊಣೆ ಮಾಡಿದ ಪೊಲೀಸರು..!? ಈ ಸಾವಿಗೆ ಯಾರು ಹೊಣೆ..?

ಬೆಲಾರಸ್​​ ಮಾತುಕತೆ ಮೂಲಕ ಸಂಧಾನ ಆಗುತ್ತಾ..?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪ್ಲುಟಿನ್​ ಹಾಗೂ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಇಬ್ಬರೂ ಯುದ್ಧ ನಿಲ್ಲಿಸುವ ನಿರ್ಧಾರ ಮಾಡಿಲ್ಲ. ಈ ನಡುವೆ ಉಕ್ರೇನ್​ ಪರವಾಗಿ ಸಾಕಷ್ಟು ರಾಷ್ಟ್ರಗಳು ಮದ್ದು ಗುಂಡು ಸರಭರಾಜು ಜೊತೆಗೆ ರಷ್ಯಾ ಬಳಕೆಯಿಂದ ವಾಯುನೆಲೆಯನ್ನು ತೆರವು ಮಾಡುವ ನಿರ್ಧಾರ ಮಾಡಿವೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ರಷ್ಯಾ ಹಾಗೂ ಉಕ್ರೇನ್​ ನಡುವೆ ಸಂಧಾನ ಮಾತುಕತೆ ನಡೆಸಲು ನಾನು ಸಿದ್ಧ ಎಂದು ಇಸ್ರೇಲ್​ ತಿಳಿಸಿದೆ. ಬೆಲಾರಸ್​​ನಲ್ಲಿ ಮಾತುಕತೆಗೆ ಉಕ್ರೇನ್​ ಒಪ್ಪಿಕೊಂಡಿದೆ ಎಂದು ರಷ್ಯಾ ಹೇಳಿದರೂ ಇನ್ನೂ ಯಾವುದೇ ಖಚಿತ ಮಾಹಿತಿ ಉಕ್ರೇನ್​ ಕಡೆಯಿಂದ ಸಿಕ್ಕಿಲ್ಲ. ಆದರೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಉಕ್ರೇನ್​ ಅರ್ಜಿ ಸಲ್ಲಿಕೆ ಮಾಡಿದ್ದು, ರಷ್ಯಾ ನಡೆಸುತ್ತಿರುವ ದಾಳಿ ಮಾನವೀಯತೆಯನ್ನು ಮೀರಿದೆ. ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದೆ. ಇನ್ನೂ ಮೂರೂವರೆ ಸಾವಿರ ರಷ್ಯಾದ ಸೈನಿಕರನ್ನು ನಾವು ಕೊಂದಿದ್ದೇವೆ ಎಂದು ಉಕ್ರೇನ್​​ ಘೋಷಣೆ ಮಾಡಿದೆ. ಖಾರ್ಕೀವ್ ವಶಕ್ಕೆ ಪಡೆದಿದ್ದ ರಷ್ಯಾ ಸೈನಿಕರನ್ನು ಓಡಿಸಿರುವ ಉಕ್ರೇನ್​​ ಸೈನಿಕರು ಖಾರ್ಕೀವ್​​ ನಗರವನ್ನು ಮರು ವಶಕ್ಕೆ ಪಡೆದಿದೆ. ಜನರೇ ರಷ್ಯಾ ಸೇನೆ ವಿರುದ್ಧ ತಿರುಗಿ ಬಿದ್ದಿರುವ ಹಿನ್ನೆಲೆಯಲ್ಲಿ ಕಕ್ಕಾಬಿಕ್ಕಿ ಆಗಿರುವ ರಷ್ಯಾ, ಸಂಧಾನದ ಕಡೆಗೆ ಕಣ್ಣೊರಳಿಸಿದೆ.

Related Posts

Don't Miss it !