ರಷ್ಯಾ – ಉಕ್ರೇನ್​ ಯುದ್ಧ ನಿಲ್ಲೋದು ಯಾವಾಗ..? ಜನರ ರಕ್ಷಣೆಗೆ ಮೆಟ್ರೋ ಸುರಂಗ..!!

ರಷ್ಯಾ ಹಾಗೂ ಉಕ್ರೇನ್​​ ನಡುವೆ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದ ರಷ್ಯಾ, ಉಕ್ರೇನ್ ಮೇಲೆ ಆರ್ಭಟ ಮುಂದುವರಿಸಿದೆ. ಇದೀಗ ಭಾರತ ಸೇರಿದಂತೆ ಇತರೆ ರಾಷ್ಟ್ರಗಳು ಯುದ್ಧದ ತೀವ್ರತೆ ನಿಲ್ಲಿಸುವಂತೆ ಮನವಿ ಮಾಡುತ್ತಿವೆ. ತಮ್ಮ ದೇಶದ ಪ್ರಜೆಗಳನ್ನು ಉಕ್ರೇನ್‌ನಿಂದ ವಾಪಸ್ ಕರೆತರುವುದಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿವೆ. ನೂರಾರು ಕನ್ನಡಿಗ ವಿದ್ಯಾರ್ಥಿಗಳೂ ಸೇರಿದಂತೆ ಭಾರತದ 20 ಸಾವಿರಕ್ಕೂ ಅಧಿಕ ಕನ್ನಡಿಗರು ಉಕ್ರೇನ್​ನ ಯುದ್ಧ ಭೀತಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಷ್ಯಾ ಅಧ್ಯಕ್ಷರ ಜೊತೆಗೆ ಮಾತನಾಡಿದ್ದು, ತಮ್ಮ ದೇಶದ ಯುವ ಸಮುದಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಉಕ್ರೇನ್ ಜನರ ಪ್ರಾಣ ರಕ್ಷಣೆಗೆ ಮೆಟ್ರೋ ಸ್ಟೇಷನ್ ಬಳಕೆ..!!

ಉಕ್ರೇನ್‌ನಲ್ಲಿ ಬಹುತೇಕ ಮೆಟ್ರೋ ಮಾರ್ಗ ಸುರಂಗದಲ್ಲೇ ನಿರ್ಮಾಣ ಮಾಡಿದ್ದು, ರಷ್ಯಾ ನಡುವಿನ ಯುದ್ಧದ ವೇಳೆ ಜನರ ಪ್ರಾಣ ಉಳಿಸುವ ಉದ್ದೇಶಕ್ಕೆ ಬಳಸಲಾಗುತ್ತಿದೆ‌. ಉಕ್ರೇನ್‌ನ ಜನವಸತಿ ಪ್ರದೇಶ ಸೇರಿದಂತೆ ಎಲ್ಲಾ ಕಡೆಗಳಲ್ಲೂ ದಾಳಿ ಮಾಡುತ್ತಿದ್ದು, ಸಿಕ್ಕ ಸಿಕ್ಕಲ್ಲಿ ಬಾಂಬ್‌ಗಳು ಬೀಳುತ್ತಿವೆ. ಜನರು ಕಟ್ಟಡಗಳಲ್ಲೇ ವಾಸವಾಗಿದ್ದರೆ, ಬಾಂಬ್ ದಾಳಿಯಲ್ಲಿ ಪ್ರಾಣ ಕಳೆದುಕೊಳ್ಳುವ ಅಪಾಯ ಇರುವುದರಿಂದ ಮೆಟ್ರೋ ಸುರಂಗಗಳಲ್ಲಿ ಜನರನ್ನು ಅಡಗಿಸಲಾಗ್ತಿದೆ. ಇನ್ನೂ ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳನ್ನೂ ಬಂಕರ್​ ರೀತಿ ಬಳಸಿಕೊಳ್ಳಲಾಗ್ತಿದೆ. ಎಲ್ಲಾ ನಾಗರಿಕರು, ಅಶಕ್ತರು, ಆಹಾರಗಳ ಸಮೇತ ನೆಲಮಾಳಿಗೆಯಲ್ಲಿ ವಾಸ ಮಾಡುವಂತೆ ಘೋಷಣೆ ಮಾಡಿದೆ.

ಇದನ್ನೂ ಓದಿ: ರಷ್ಯಾ ಹಾಗೂ ಉಕ್ರೇನ್​ ನಡುವೆ ಯುದ್ಧ ಆರಂಭಕ್ಕೆ ಕಾರಣ ಏನು..!? ಉಕ್ರೇನ್‌ಗೆ ಬೆಂಬಲಿಸ್ತಾರಾ ಮೋದಿ..?

ಮೆಟ್ರೋ ರೈಲು ಸ್ಟೇಷನ್​​ ಅಷ್ಟು ಶಕ್ತಿಯುತವೇ..? ಹೇಗೆ..?

ಇತ್ತೀಚಿಗೆ ಮೆಟ್ರೋ ಸುರಂಗ ಕೊರೆಯುವುದು ಬೆಂಗಳೂರು ಸೇರಿದಂತೆ ವಿಶ್ವಾದಾದ್ಯಂತ ಚಾಲ್ತಿಯಲ್ಲಿದೆ. ಮೆಟ್ರೋ ಸುರಂಗ ಕೊರೆಯುವ ಟನಲ್​ಗಳು ಸಾಕಷ್ಟು ಆಳ ಪ್ರದೇಶದಲ್ಲಿ ಸುರಂಗ ಕೊರೆಯುತ್ತವೆ. ಅಷ್ಟು ಮಾತ್ರವಲ್ಲದೆ ಭೂಮಿಯ ಆಳದಲ್ಲಿ ಸಂಭವಿಸುವ ಭೂಕಂಪ ಅಥವಾ ಭೂಮಿ ಮೇಲೆ ಸಂಭವಿಸುವ ಬಾಂಬ್​​ ಸ್ಫೋಟಕ್ಕೂ ಯಾವುದೇ ಹಾನಿಯಾಗದ ರೀತಿಯಲ್ಲಿ ಸುರಂಗ ನಿರ್ಮಾಣ ಮಾಡಲಾಗುತ್ತಿದೆ. ಉಕ್ರೇನ್​​ನಲ್ಲಿ ಮೆಟ್ರೋ ಸಂಚಾರ ಸಂಪೂರ್ಣವಾಗಿ ಭೂಮಿ ಒಳಗೆ ಇರುವ ಕಾರಣ ಸುರಂಗಗಳನ್ನೇ ಬಂಕರ್​ ರೀತಿಯಲ್ಲಿ ಬಳಸಲಾಗ್ತಿದೆ. ಇನ್ನೂ ಅಪಾರ್ಟ್​ಮೆಂಟ್​​ಗಳಲ್ಲೂ ಭೂಕಂಪನ ತೀವ್ರತೆ ತಡೆದುಕೊಳ್ಳುವಷ್ಟು ಶಕ್ತಿಯುತವಾಗಿ ನಿರ್ಮಾಣ ಮಾಡಲಾಗ್ತಿದ್ದು, ಅಪಾರ್ಟ್​ಮೆಂಟ್​​ ಕೆಳಗೆ ಜನರನ್ನು ಸಂಗ್ರಹ ಮಾಡಲಾಗಿದೆ. ಇನ್ನೊಂದು ಅಚ್ಚರಿಯ ವಿಚಾರ ಎಂದರೆ ನಾಗರಿಕರಿಗೆ ಮೆಷಿನ್​​​ ಗನ್​ಗಳನ್ನು ವಿತರಣೆ ಮಾಡಲಾಗಿದೆ.

ಯುದ್ಧದಲ್ಲಿ ಭಾಗಿಯಾಗಿ ಎಂದು ಜನರಿಗೆ ಉಕ್ರೇನ್​ ಸರ್ಕಾರ ಘೋಷಣೆ..!

ರಷ್ಯಾ ಸಂಪೂರ್ಣ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಉಕ್ರೇನ್​ ಸೇನೆ ಸೇರಿಕೊಳ್ಳುವಂತೆ ತನ್ನ ನಾಗರಿಕರಿಗೆ ಕಟ್ಟಪ್ಪಣೆ ಹೊರಡಿಸಿದೆ, ದೇಶ ರಕ್ಷಣೆಗೆ ಬರಬೇಕು ಎನ್ನುವ ಘೋಷಣೆ ಜೊತೆಗೆ ಅಪಾಯಕಾರಿ ಆಗಿರುವ ಮೆಷಿನ್​ಗಳನ್ನು ವಿತರಣೆ ಮಾಡಿದೆ. ಒಂದು ವೇಳೆ ಮೂಲಭೂತ ಅಗತ್ಯ ವಸ್ತುಗಳನ್ನು ಕೊಳ್ಳುವ ಉದ್ದೇಶದಿಂದ ಹೊರಕ್ಕೆ ಬಂದಿದ್ದರೂ ಸೈರನ್​ ಆಗುತ್ತಿದ್ದರೆ ಅಪಾಯವೆಂದು ತಿಳಿದು ಬಂಕರ್​ ಸೇರಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಇನ್ನೂ ಭಾರತ ಸೇರಿದಂತೆ ಹತ್ತಾರು ದೇಶಗಳು ತನ್ನ ಪ್ರಜೆಗಳ ಬಗ್ಗೆ ಆತಂಕಕ್ಕೆ ಈಡಾಗಿದ್ದು, ರಷ್ಯಾ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ ರಷ್ಯಾ ಮಾತ್ರ ಯಾವುದಕ್ಕೂ ಜಗ್ಗುತ್ತಿಲ್ಲ. ಅಮೆರಿಕ ಕೂಡ ಉಕ್ರೇನ್​ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದು, ಮಾಡು ಇಲ್ಲವೆ ಮಡಿ ಹೋರಾಟ ನಡೆಯುತ್ತಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ನಡೆಯುತ್ತಿದ್ದು, ಆ ಬಳಿಕ ಯುದ್ಧದ ಬಗ್ಗೆ ಕೆಲವು ನಿರ್ಧಾರಗಳು ಹೊರ ಬೀಳುವ ಸಾಧ್ಯತೆಗಳು ಇವೆ.

Related Posts

Don't Miss it !