ರಷ್ಯಾದ ಕದನ ವಿರಾಮ, ಯುದ್ಧ ಭೀಕರತೆ ಮುನ್ಸೂಚನೆ..! ಯುದ್ಧಕ್ಕೆ ಧುಮುಕಲಿದೆ ನ್ಯಾಟೋ..!!

ರಷ್ಯಾ – ಉಕ್ರೇನ್​​ ನಡುವಿನ ಯುದ್ಧದಲ್ಲಿ ತಾತ್ಕಾಲಿಕ ವಿರಾಮ ಘೋಷಣೆ ಆಗಿದೆ. ರಷ್ಯಾ ಕದನ ವಿಮಾನ ಘೋಷಣೆ ಮಾಡಿರುವುದು ಸಾಕಷ್ಟು ಕುತೂಹಲಗಳಿಗೂ ಕಾರಣವಾಗಿದೆ. ರಷ್ಯಾ ಸೇನೆ ಮುಂದಿನ ದಿನಗಳಲ್ಲಿ ಭೀಕರ ದಾಳಿ ನಡೆಸುವ ಉದ್ದೇಶದಿಂದಲೇ ತಾತ್ಕಾಲಿಕ ಬ್ರೇಕ್​ ತೆಗೆದುಕೊಂಡಿದ್ಯಾ..? ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗ್ತಿದೆ. ಈ ನಡುವೆ ರಷ್ಯಾ ಹಾಗೂ ಉಕ್ರೇನ್​ ಸರ್ಕಾರದ ನಡುವೆ ಮಾತಿನ ಸಮರ ಏರ್ಪಟ್ಟಿದ್ದು, ಕದನ ವಿರಾಮದ ಹಿಂದೆ ರಷ್ಯಾದ ಮಹಾತಂತ್ರ ಅಡಗಿರುವ ಎಲ್ಲಾ ಸಾಧ್ಯತೆಗಳೂ ಇದೆ, ಮುಂದಿನ ದಿನಗಳಲ್ಲಿ ಉಕ್ರೇನ್​ ನೆಲದಲ್ಲಿ ರಕ್ತದೋಕುಳಿ ಆಟವಾಡಲು ರಷ್ಯಾ ಸ್ಕೆಚ್​ ಹಾಕಿರುವಂತಿದೆ. ಉಕ್ರೇನ್​ನ​​ ಮಾರಿಯುಪೋಲ್​​ನಲ್ಲಿ ಕದನ ವಿರಾಮ ಘೋಷಣೆ ಮಾಡಿರುವುದು ಭೀಕರ ದಾಳಿಗೆ ಸನ್ನದ್ಧವಾಗುವಂತಿದೆ. ಇಲ್ಲೀವರೆಗೂ ಸಂಪೂರ್ಣ ಶಕ್ತಿಯೊಂದಿಗೆ ಯುದ್ಧ ಮಾಡದ ರಷ್ಯಾ ಕೇವಲ ಉಕ್ರೇನ್ ಸೇನೆಯನ್ನು​ ಬೆದರಿಸುವ ಕೆಲಸ ಮಾಡುತ್ತಿತ್ತು. ಇನ್ನೂ ಈಗಾಗಲೇ 2 ಬಾರಿ ಸಂಧಾನ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಇದೀಗ ರಷ್ಯಾ ಪರಾಕ್ರಮ ಮೆರೆಯಲು ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದೆ. ಮಹಾ ಸಂಗ್ರಾಮಕ್ಕೂ ಮುನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಭಾರೀ ಕಸರತ್ತು ಮಾಡಿದ್ದಾರೆ ಎನ್ನುವುದು ತಿಳಿದುಬರುತ್ತಿದೆ.

ರಷ್ಯಾ ಪೈಲಟ್ ಸೆರೆ

ನಾಗರಿಕರು ಇಲ್ಲದಿದ್ದರೆ ಉಕ್ರೇನ್​ ಸೇನೆ ಧೂಳೀಪಟ..!

ರಷ್ಯಾ ಇಲ್ಲೀವರೆಗೂ ಸಂಪೂರ್ಣ ಶಕ್ತಿಯೊಂದಿಗೆ ಯುದ್ಧ ಮಾಡದೆ ಇರುವುದಕ್ಕೆ ಪ್ರಮುಖ ಕಾರಣ ಅಲ್ಲಿರುವ ನಾಗರಿಕರು. ಉಕ್ರೇನ್​ ನಾಗರಿಕರು ನಗರಗಳನ್ನು ಬಿಟ್ಟು ಹೋಗದಿದ್ದರೆ ಅನಿವಾರ್ಯವಾಗಿ ಯುದ್ಧದ ಪರಿಣಾಮವನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದರೆ ಇತರೆ ರಾಷ್ಟ್ರಗಳ ನಾಗರಿಕರು ಉಕ್ರೇನ್​ನಲ್ಲಿ ಸಿಲುಕಿರುವುದರಿಂದ, ರಷ್ಯಾ ಪ್ರಕರ ದಾಳಿ ಮಾಡುವುದು ಸಾಧ್ಯವಾಗಿರಲಿಲ್ಲ. ಒಂದು ವೇಳೆ ಬೇರೆ ಬೇರೆ ದೇಶದ ಜನರು ಉಕ್ರೇನ್​ನಲ್ಲಿ ಇಲ್ಲದಿದ್ದರೆ, ರಷ್ಯಾ ಸೇನೆಯ ದಾಳಿ ಇನ್ನೂ ತೀವ್ರವಾಗಿ ಇರುತ್ತಿತ್ತು ಎನ್ನುವುದು ಅಂತಾರಾಷ್ಟ್ರೀಯ ವಿಶ್ಲೇಷಕರ ಮಾತು. ಇದೇ ಕಾರಣಕ್ಕಾಗಿ ಯುದ್ಧದ ಮಧ್ಯೆ ಮಧ್ಯೆ ರಷ್ಯಾ ಕದನ ವಿರಾಮ ಘೋಷಣೆ ಮಾಡುತ್ತಿದ್ದು, ಎಲ್ಲಾ ದೇಶದ ನಾಗರಿಕರು ಉಕ್ರೇನ್​ ತೊರೆದು ತಮ್ಮ ತಮ್ಮ ದೇಶಕ್ಕೆ ಹೊರಟರೆ ಯುದ್ಧ ಮಾಡುವುದು ಸುಗಮವಾಗಲಿದೆ. ಉಕ್ರೇನ್​ ಮೇಲೆ ಅಟ್ಟಹಾಸ ಮೆರೆಯಬಹುದು ಎನ್ನುವುದು ರಷ್ಯಾ ಸೇನೆಯ ಲೆಕ್ಕಾಚಾರ. ಇದನ್ನು ಸಾಧ್ಯವಾಗದಂತೆ ತಡೆಯುವುದು ಉಕ್ರೇನ್​ ಸೇನೆಯ ಪ್ರತ್ಯುತ್ತರ. ನಾಗರಿಕರು ದೇಶ ಬಿಡದಂತೆ ತಡೆಯುವುದು ಸವಾಲಿನ ಕೆಲಸವಾಗಿದೆ.

ರಷ್ಯಾ ದಾಳಿ ಭೀಕರತೆ

ನಾಗರಿಕರು ತೆರಳದಂತೆ ತಡೆಯುತ್ತಿದೆ ಉಕ್ರೇನ್​​ ಸೇನೆ..!?

ನಾಗರಿಕರು ನಗರಗಳನ್ನು ಬಿಟ್ಟು ಸುರಕ್ಷಿತ ತಾಣಗಳಿಗೆ ತೆರಳಲು ಅನುಕೂಲ ಆಗುವ ಉದ್ದೇಶದಿಂದಲೇ ರಷ್ಯಾ ಕದನ ವಿರಾಮ ಘೋಷಣೆ ಮಾಡುತ್ತಿದೆ. ಆದರೆ ನಾಗರಿಕರು ಇಲ್ಲದಿದ್ದರೆ ರಷ್ಯಾ ಮನಸೋ ಇಚ್ಛೆ ದಾಳಿ ಮಾಡುವ ಭೀತಿಯಿಂದ, ನಾಗರಿಕರು ನಗರ ಬಿಟ್ಟು ತೆರಳದಂತೆ ಉಕ್ರೇನ್​ ಸೇನೆ ತಡೆಯುತ್ತಿದೆ ಎನ್ನುವ ಮಾತಿದೆ. ರಷ್ಯಾ ಸೇನೆ ಕೂಡ ಇದೇ ಮಾತನ್ನು ಹೇಳಿದ್ದು, ಸ್ವತಃ ಉಕ್ರೇನ್​ ಸರ್ಕಾರ ತನ್ನದೇ ಪ್ರಜೆಗಳನ್ನು ಹತ್ಯೆ ಮಾಡುವ ಹಂತಕ್ಕೆ ಹೋಗಿದೆ. ಜನರು ನಗರ ತೊರೆಯುವುದಕ್ಕೆ ಉಕ್ರೇನ್​ ಸೇನೆ ಬಿಡುತ್ತಿಲ್ಲ ಎಂದು ರಷ್ಯಾ ಆರೋಪ ಮಾಡಿದೆ. ಆದರೆ ಕದನ ವಿರಾಮ ಘೋಷಣೆ ಮಾಡಿದ ಬಳಿಕವೂ ರಷ್ಯಾ ಸೇನೆ ಶೆಲ್​ ದಾಳಿ ನಡೆಸುತ್ತಲೇ ಇದೆ. ಸ್ಥಳಾಂತರಕ್ಕೆ ನಿರ್ಮಾಣ ಆಗಿರುವ ಮಾನವೀಯ ಕಾರಿಡಾರ್​ ಮೇಲೆ ರಷ್ಯಾ ದಾಳಿ ನಡೆಯುತ್ತಿದೆ. ಹೀಗಾಗಿ ಜನರನ್ನು ಕಳುಹಿಸಿ ಕೊಡುವುದಕ್ಕೆ ಸಾಧ್ಯವಾಗ್ತಿಲ್ಲ ಎಂದು ಉಕ್ರೇನ್​ ಸರ್ಕಾರ ಹೇಳಿದೆ. ಆದರೆ ಈ ಎರಡೂ ದೇಶಗಳ ದ್ವೇಷದ ನಡುವೆ ಮಾರಿಯುಪೋಲ್​ನಲ್ಲಿ ಸಿಲುಕಿರುವ ನಾಗರಿಕರು ಪ್ರಾಣ ಭೀತಿಯಲ್ಲಿದ್ದಾರೆ. ಭಾರತೀಯ ನಾಗರಿಕರು ಖಾರ್ಕಿವ್​ನಲ್ಲಿ ಯಾರೂ ಇಲ್ಲ ಎನ್ನಲಾಗಿದೆ. ಆದರೆ ಸುವಿ ನಗರದಲ್ಲಿ ಇನ್ನೂ ಭಾರತೀಯರಿದ್ದು, ಯಾವಾಗ ರಷ್ಯಾ ದಾಳಿಯಿಂದ ಕರಾಳ ಇತಿಹಾಸ ಸೇರುತ್ತೇವೆಯೋ ಎನ್ನುವಂತಾಗಿದೆ.

ನೇರವಾಗಿ ಅಖಾಡಕ್ಕೆ ಇಳಿಯುತ್ತಾ ನ್ಯಾಟೋ ಪಡೆ..!?

ಉಕ್ರೇನ್​ಗೆ ವಿಶ್ವದ ಬೇರೆ ರಾಷ್ಟ್ರಗಳು ಬೆಂಬಲ ನೀಡಿಲ್ಲ ಎನ್ನುವುದಾಗಿದ್ದರೆ ರಷ್ಯಾ ಎದುರು ಉಕ್ರೇನ್​ ಯುದ್ಧಕ್ಕೆ ಇಳಿಯುವ ಧೈರ್ಯವನ್ನೇ ಮಾಡುತ್ತಿರಲಿಲ್ಲ. ಉಕ್ರೇನ್​​ ಹಿಂದೆ ನಿಂತಿರುವ ಅಮೆರಿಕ ಸರ್ಕಾರ, ಉಕ್ರೇನ್​ ಸೇನೆಯನ್ನು ದಾಳವಾಗಿ ಮಾಡಿಕೊಂಡು ರಷ್ಯಾ ವಿರುದ್ಧ ಹೋರಾಟ ಮಾಡಿಸುತ್ತಿದೆ. ಆದರೆ ರಷ್ಯಾ ಬಲಾಬಲದ ಎದುರು ವಿಶ್ವದ ಯಾವುದೇ ರಾಷ್ಟ್ರ ಕೂಡ ಎದೆಯೊಡ್ಡಿ ನಿಲ್ಲಲಾರದು. ಇದೇ ಕಾರಣಕ್ಕೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ನೇರವಾಗಿ ರಷ್ಯಾ ಎದುರಿಸದೆ ಕೇವಲ ಉಕ್ರೇನ್​ಗೆ ಬೆಂಬಲ ನೀಡುತ್ತಿವೆ. ವಿಶ್ವದ ಬೇರೆಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಮುಗಿಬಿದ್ದರೆ ಕಷ್ಟ ಎನ್ನುವ ಕಾರಣಕ್ಕೆ ರಷ್ಯಾ ಅಣುಬಾಂಬ್​ ದಾಳಿಯ ಗುಮ್ಮನನ್ನು ತೋರಿಸಿ ಬೆದರಿಸುವ ಕೆಲಸ ಮಾಡುತ್ತಿದೆ. ಆದರೆ ಇಂದು ಅಮೆರಿಕ ನೀಡಿರುವ ಹೇಳಿಕೆ ವಿಶ್ವವನ್ನೇ ಬೆರಗು ಮೂಡಿಸುವಂತಿದೆ. ರಷ್ಯಾ ದೇಶ ತನ್ನ ದೇಶದಿಂದಲೇ ವಿಶ್ವದ ಯಾವುದೇ ದೇಶಕ್ಕೂ ಪರಮಾಣು ಬಾಂಬ್​​ ಹಾಕುವ ತಾಕತ್ತು ಹೊಂದಿದೆ. ಆದರೂ ಅಮೆರಿಕ ಮಾತ್ರ ರಷ್ಯಾ ವಿರುದ್ಧ ಉಕ್ರೇನ್​ ಗೆಲ್ಲಲಿದೆ ಎನ್ನುವ ಮೂಲಕ ಯುದ್ಧದ ಭವಿಷ್ಯ ಹೇಳಿದೆ. ಅಮೆರಿಕ ಈ ಮಾತನ್ನು ಹೇಳುವುದಕ್ಕೂ ಮುನ್ನ ನ್ಯಾಟೋ ಪಡೆಗಳು ಉಕ್ರೇನ್​ ಸುತ್ತಮುತ್ತಲ ದೇಶಗಳಲ್ಲಿ ಬೀಡು ಬಿಟ್ಟಿದ್ದು, ರಷ್ಯಾ ವಿರುದ್ಧ ನ್ಯಾಟೋ ಪಡೆ ನೇರವಾಗಿ ಅಖಾಡಕ್ಕೆ ಇಳಿಯುತ್ತಾ ಎನ್ನುವ ಗುಮಾನಿ ಸೃಷ್ಟಿಸಿದೆ.

Related Posts

Don't Miss it !