ಕ್ರೇಜಿಸ್ಟಾರ್​ ರವಿಚಂದ್ರನ್​ ಕಿಡ್ನ್ಯಾಪ್​.. ಕನ್ನಡ ಸಿನಿಪ್ರೇಮಿಗಳಲ್ಲಿ ಆತಂಕ..!

ಸ್ಯಾಂಡಲ್​ವುಡ್​ನಲ್ಲಿ ಕ್ರೇಜಿಸ್ಟಾರ್​ ವಿ. ರವಿಚಂದ್ರನ್​ ಹೊಸ ಆಯಾಮ ತಂದುಕೊಟ್ಟವರು ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಚಿತ್ರರಂಗ ಸೇರಿದಂತೆ ಎಲ್ಲಾ ರೀತಿಯ ಸಕ್ರಿಯ ಕೆಲಸಗಳಿಂದ ದೂರ ಉಳಿದಿದ್ದಾರೆ. ತಾನಾಯ್ತು, ತನ್ನ ಬದುಕಾಯ್ತು ಎನ್ನುತ್ತಾ ಜೀವನ ಸಾಗಿಸುತ್ತಿರುವ ವಿ.ರವಿಚಂದ್ರನ್​ ಅಪಹರಣ ಮಾಡಲಾಗಿದೆ ಎನ್ನುವ ಸುದ್ದಿ ಕನ್ನಡ ಸಿನಿ ಪ್ರೇಮಿಗಳನ್ನು ಘಾಸಿಗೊಳಿಸಿದೆ. ಈ ರೀತಿಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟವಾಗುತ್ತಿದ್ದ ಹಾಗೆ ಸಾಕಷ್ಟು ಜನರು ತಮಗೆ ಗೊತ್ತಿರುವ ಪತ್ರಕರ್ತರು, ಪೊಲೀಸ್​ ಅಧಿಕಾರಿಗಳಿಗೆ ಕರೆ ಮಾಡಿ ಖಚಿತ ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ಆದರೆ ಈ ಸುದ್ದಿ ಕೇವಲ ಜೀ ಟೀವಿಯಲ್ಲಿ ಮಾತ್ರ ಪ್ರಸಾರವಾಗಿದ್ದು, ಹಲವರ ಅಚ್ಚರಿಗೂ ಕಾರಣವಾಗಿತ್ತು.

ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಸುದ್ದಿ ಮಾಧ್ಯಮಗಳು ಕ್ಷಣಕ್ಷಣದ ಮಾಹಿತಿಯನ್ನು ನೀಡುವುದರಲ್ಲಿ ತಲ್ಲೀನವಾಗಿವೆ. ಆದರೆ ವಿ ರವಿಚಂದ್ರನ್​ ಕಿಡ್ನ್ಯಾಪ್​ ಆಗಿರುವ ವಿಚಾರ ಯಾವುದೇ ಮಾಧ್ಯಮಗಳಲ್ಲಿ ಬಿತ್ತರ ಆಗಿಲ್ಲ. ಕೇವಲ ಜಿ ಕನ್ನಡದ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಪ್ರಸಾರವಾಗಿದೆ. ಅಂದರೆ ರವಿಚಂದ್ರನ್​ ಅವರ ಅಪಹರಣ ಆಗಿಲ್ಲ. ಯಾವುದೋ ಕಾರ್ಯಕ್ರಮಕ್ಕಾಗಿ ರವಿಚಂದ್ರನ್​ ಅವರ ಅಪಹರಣ ಆಗಿದೆ ಎನ್ನುವಂತೆ ದೃಶ್ಯಗಳನ್ನು ರೀ ಕ್ರಿಯೇಟ್​ ಮಾಡಲಾಗಿದೆ. ಇದೇ ವಿಡಿಯೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದೆ ಅಷ್ಟೆ. ಈ ವಿಚಾರ ತಿಳಿಯುತ್ತಿದ್ದ ಹಾಗೆ ಪ್ರೇಮಲೋಕದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ರವಿಚಂದ್ರನ್​ ಬೆಳಗ್ಗೆ ಎದ್ದಾಗಿಂದಲೇ ಅಪಹರಣಕಾರರು ಅವರನ್ನು ಫಾಲೋ ಮಾಡ್ತಾರೆ. ಆ ಬಳಿಕ ವಾಕಿಂಗ್​ ಮುಗಿಸಿ ಶೂಟಿಂಗ್​ ಹೊರಡುವಾಗಲೂ ಕಿಡ್ನಾಪರ್ಸ್​ ಮಾತನಾಡಿಕೊಳ್ತಾರೆ. ಶೂಟಿಂಗ್​ ಸ್ಪಾಟ್​ಗೆ ಹೋದ ಬಳಿಕ ಚಿತ್ರೀಕರಣದ ನಡುವೆ ಮೊಬೈಲ್​ನಲ್ಲಿ ಮಾತನಾಡುತ್ತ ಸೆಟ್​​ನಿಂದ ಹೊರಕ್ಕೆ ಬರ್ತಾರೆ. ಆ ವೇಳೆ ಕಿಡ್ನ್ಯಾಪರ್ಸ್​ ರವಿಚಂದ್ರನ್​ ಅವರನ್ನು ಕಿಡ್ನಾಪ್​ ಮಾಡ್ತಾರೆ. ಈ ವೇಳೆ ಸುದ್ದಿ ಮಾಧ್ಯಮ ಒಂದರಲ್ಲಿ ರವಿಚಂದ್ರನ್​ ಅವರ ಕಿಡ್ನ್ಯಾಪ್​ ಬಗ್ಗೆ ಸುದ್ದಿ ಮಾಡುತ್ತದೆ. ಆದರೆ ಇಷ್ಟು ಭಾಗ ಮಾತ್ರವನ್ನು ಕಟ್​ ಮಾಡಿಕೊಂಡಿರುವ ಕೆಲವರು ಸಾಕಷ್ಟು ವೈರಲ್​ ಮಾಡಿದ್ದಾರೆ. ಆದರೆ ಇದು ಜೀ ಕನ್ನಡದವರೇ ಶೂಟ್​ ಮಾಡಿರುವ ಪ್ರೋಮೋ.. ಯಾವ ಕಾರ್ಯಕ್ರಮಕ್ಕೆ..? ಇದರ ಹಿಂದಿನ ಉದ್ದೇಶ ಏನು ಎನ್ನುವುದನ್ನು ಜೀ ಕನ್ನಡ ಬಿಟ್ಟುಕೊಟ್ಟಿಲ್ಲ.

Related Posts

Don't Miss it !