ತುಂಟ ರಾಜ ರಂಗನಾಯಕನ ಜೊತೆ ಕಚಗುಳಿ ಸ್ಟಾರ್​ ಮಠ ಗುರು..!!

ಕನ್ನಡದಲ್ಲಿ ಎಂದೆಂದಿಗೂ ಪ್ರೇಕ್ಷಕರ ಮನಸ್ಸಿಗೆ ಮುದ ನೀಡುವ ಚಿತ್ರಗಳ ಸಾಲಿನಲ್ಲಿ ಮಠ ಹಾಗೂ ಎದ್ದೇಳು ಮಂಜುನಾಥ ಸ್ಥಾನ ಪಡೆಯುವುದು ಖಚಿತ. ಈ ಸಿನಿಮಾಗಳು ಕಡಿಮೆ ಬಜೆಟ್​ನ ಚಿತ್ರಗಳಾದರೂ ಜನರಿಗೆ ಮನರಂಜನೆ ಕಡಿಮೆಯಾಗಿಲ್ಲ. ಆ ಸಿನಿಮಾಗಳ ನಿರ್ಮಾತೃ ನಿರ್ದೇಶಕ ಗುರುಪ್ರಸಾದ್​ ಹಾಗೂ ನಾಯಕ ನಟ ಜಗ್ಗೇಶ್​ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಆ ಜೋಡಿ ಮತ್ತೆ ಒಂದಾಗಿದೆ. 14 ವರ್ಷದ ಬಳಿಕ ಹೊಸ ಸಿನಿಮಾ ಮೂಲಕ ಹ್ಯಾಟ್ರಿಕ್​ ಜೋಡಿ ಎನ್ನುವ ಪಟ್ಟ ಪಡೆಯಲು ಸಜ್ಜಾಗ್ತಿದೆ. ಆ ಸಿನಿಮಾ ಹೆಸರು ರಂಗನಾಯಕ.

ಸಂಕ್ರಾಂತಿಗೆ ತೆರೆ ಮೇಲೆ ರಂಗನಾಯಕ..!

ರಂಗನಾಯಕ ಚಿತ್ರ ಶೂಟಿಂಗ್​ ಆರಂಭಿಸಿದ್ದು, ಮಾಧ್ಯಮಗೋಷ್ಟಿ ನಡೆಸಿತು. ಈ ವೇಳೆ ಮಾತನಾಡಿದ ನಿರ್ದೇಶಕ ಗುರು ಪ್ರಸಾದ್​, ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು ರತ್ನವನ್ನು ಬೀದಿಯಲ್ಲಿ ಮಾರುತ್ತಿದ್ದರು ಎನ್ನುವ ಮಾಹಿತಿ ಎಲ್ಲರಿಗೂ ತಿಳಿದಿದೆ. ಅದನ್ನು ನಾವು ದೃಶ್ಯ ರೂಪದಲ್ಲಿ ತರುವ ಉದ್ದೇಶ ಹೊಂದಿದ್ದೇವೆ. ಅಕ್ಟೋಬರ್​ ಅಂತ್ಯದ ವೇಳೆಗೆ ಚಿತ್ರೀಕರಣ ಮುಗಿಸಲಿದ್ದು, ಆ ಬಳಿಕ 10 ದಿನಗಳ ಕಾಲ ಲಂಡನ್​ನಲ್ಲಿ ಶೂಟಿಂಗ್​ ಮಾಡುತ್ತೇವೆ. ಪೋಸ್ಟ್​ ಪ್ರೊಡಕ್ಷನ್​ ಮುಗಿಸಿಕೊಂಡು ಜನವರಿ 14ರ ಸಂಕ್ರಾಂತಿಗೆ ರಂಗನಾಯಕ ಸಿನಿಮಾ ತೆರೆಗೆ ತರುವ ಉದ್ದೇಶ ಹೊಂದಿದ್ದೇವೆ ಎಂದಿದ್ದಾರೆ. ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾವನ್ನು ರಂಗನಾಯಕ ಮೀರಿಸಲಿದ್ದಾನೆ ಎನ್ನುವುದು ನಿರ್ದೇಶಕರ ವಿಶ್ವಾಸ.

ಇದನ್ನೂಓದಿ

ಕೃಪೆ: ರಚಿತಾ ಇನ್ಸ್​​ಸ್ಟಾಗ್ರಾಂ

ರಂಗಭೂಮಿ ಕಲಾವಿದರಿಗೆ ಗುರು ನೆರವು..!

ಕೊರೊನಾ ಸಂಕಷ್ಟಕ್ಕೆ ಸಿಲುಕಿದ ನೂರಾರು ರಂಗಭೂಮಿ ಕಲಾವಿದರನ್ನು ನಿರ್ದೇಶಕ ಗುರು ಪ್ರಸಾದ್​ ಆಯ್ಕೆ ಮಾಡಿಕೊಂಡಿರುವುದಕ್ಕೆ ನವರಸ ನಾಯಕ ಜಗ್ಗೇಶ್​ ಮೆಚ್ಚುಗೆ ವ್ಯಕ್ತಪಡಿಸಿದ್ರು. ವರ್ಷಾನುಗಟ್ಟಲೆ ರಂಗಭೂಮಿಯಲ್ಲಿ ಕೆಲಸ ಮಾಡಿದ 150 ಮಂದಿ ರಂಗಭೂಮಿ ಕಲಾವಿದರ ಆಯ್ಕೆ ಮಾಡಿಕೊಂಡಿದ್ದಾರೆ. ನನಗಿಂತಲೂ ತುಂಬಾ ಚೆನ್ನಾಗಿ ಪಾತ್ರ ಮಾಡುವ ಜನರನ್ನು ಆಯ್ಕೆ ಮಾಡಲಾಗಿದೆ. ಅವರ ಎದುರು ನಾನೇ ತಪ್ಪು ಮಾಡುತ್ತೇನೆ ಎನಿಸಿಬಿಡುತ್ತದೆ ಎಂದಿದ್ದಾರೆ. ಇನ್ನೂ ಈ ಕಾಲಕ್ಕೆ ಪೌರಾಣಿಕ ಸಿನಿಮಾ ಸರಿ ಹೊಂದುತ್ತಾ ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಹಾಸ್ಯ ಸೇರಿಸಿ ಮಾಡಿದ್ರೆ ಅದ್ಬುತವಾಗಿ ಬರಲಿದೆ. ಈ ಸಿನಿಮಾದಲ್ಲಿ ಕನಿಷ್ಟ 150 ರಿಂದ 200 ಕ್ಲಿಪ್ಪಿಂಗ್​ ನೋಡಿದ್ರೆ ಎಂಜಾಯ್ ಮಾಡುವುದರಲ್ಲಿ ಅನುಮಾನವೇ ಇಲ್ಲ. ನನ್ನ ಬಾಲ್ಯದ ಕನಸು ಈಗ ನನಸಾಗುತ್ತಿದೆ, ಜನರು ಚೇರ್​ ಮೇಲೆ ಕುಳಿತು ಸಿನಿಮಾ ನೋಡಲು ಸಾಧ್ಯವಿಲ್ಲ. ಕೆಳಕ್ಕೆ ಬಿದ್ದು ಉರುಳಾಡಿ ನಗುವುದು ಖಚಿತ ಎಂದಿದ್ದಾರೆ.

ಕೃಪೆ: ರಚಿತಾ ಇನ್ಸ್​​ಸ್ಟಾಗ್ರಾಂ

ಕನ್ನಡದ ತಮಿಳು ನಟಿ ಜಗ್ಗೇಶ್​ ಜೋಡಿ..!

ಚೇಷ್ಟೆ ರಾಜನ ಸಹಧರ್ಮಿಣಿಯಾಗಿ ರಚಿತಾ ಮಹಾಲಕ್ಷ್ಮೀ ಆಯ್ಕೆ ಮಾಡಲಾಗಿದೆ. ಮುದ್ದು ಮುಖದ ಸೌಂದರ್ಯ ರಾಶಿ ಹೊಂದಿರುವ ರಚಿತಾ ಮಹಾಲಕ್ಷ್ಮಿ ಕನ್ನಡದ ನಟಿ. ಆದರೆ ಕನ್ನಡದಲ್ಲಿ ಬೇಡಿಕೆ ಕಡಿಮೆ ಆಗಿದ್ದರಿಂದ ತಮಿಳು ಕಡೆಗೆ ಮುಖ ಮಾಡಿದ್ದರು. ಸ್ಟಾರ್​ ವಿಜಯ್​ನಲ್ಲಿ ಪ್ರಸಾರ ಆಗುವ ಸರವಣನ್​ ಮೀನಾಕ್ಷಿಹಾಗೂ ನಾನಿರುವ ನನಗಿರುವಂ ಧಾರಾವಾಹಿಯಲ್ಲಿ ಕಳೆದ ಏಳೆಂಟು ವರ್ಷದಿಂದ ಪಾತ್ರ ಮಾಡುತ್ತಿದ್ದಾರೆ. ಆದರೆ ಸ್ಮಾಲ್​ ಸ್ಕ್ರೀನ್​​ನಿಂದ ಬಿಗ್​ಸ್ಕ್ರೀನ್​ಗೆ ಎಂಟ್ರಿ ಕೊಟ್ಟ ಸಂತಸ ರಚಿತಾ ಮಹಾಲಕ್ಷ್ಮೀ ಮೊಗದಲ್ಲಿ ಕಾಣಿಸುತ್ತಿತ್ತು. ಅದರಲ್ಲೂ ಹಿರಿಯ ನಟ ಜಗ್ಗೇಶ್​ ಜೋಡಿಯಾಗಿ ಮಾಡುತ್ತಿರುವುದು ರಚಿತಾ ಸಂಭ್ರಮವನ್ನು ಹೆಚ್ಚು ಮಾಡಿತ್ತು. ಇಮ್ರಾನ್​ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡುತ್ತಿದ್ದು, ಒಂದು ರೊಮ್ಯಾಂಟಿಕ್​ ಹಾಡು ಸೇರಿ ಒಟ್ಟು 5 ಹಾಡುಗಳು ಇವೆ ಎಂದಿದ್ದಾರೆ. ಅವುಗಳು ಕಂದ ರೂಪದಲ್ಲಿ ಮೂಡಿಬರುವುದು ಬಹುತೇಕ ಖಚಿತ.

ಕೃಪೆ: ರಚಿತಾ ಇನ್ಸ್​​ಸ್ಟಾಗ್ರಾಂ

ಬಿಗ್​ಬಾಸ್​ನಲ್ಲಿ ಸಿಕ್ಕ ಕ್ಯಾಮರಾ ಮ್ಯಾನ್​..!

ಕೆಲಸಗಾರರಿಗೆ ಮನ್ನಣೆ ಜಾಸ್ತಿ ಎನ್ನುವುದು ಇಲ್ಲೂ ಸಾಬೀತಾಗಿದೆ. ನಿರ್ದೇಶಕ ಗುರುಪ್ರಸಾದ್​ ಈ ಹಿಂದೆ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಹೋಗಿದ್ರು. ಈ ವೇಳೆ ಕ್ಯಾಮರಾ ಮ್ಯಾನ್ ಅಶೋಕ್​ ಬಿಗ್​ಬಾಸ್​ನಲ್ಲಿ ಒಂದು ಪ್ರೋಮೋ ಮಾಡಿದ್ರಂತೆ. ಹಿಂದಿ ಮಾತನಾಡ್ತಿದ್ದ ಹುಡುಗ ಕೆಲವೇ ನಿಮಿಷದಲ್ಲಿ ಪ್ರೋಮೋ ಮಾಡಿದ್ದನ್ನು ನೋಡಿ ಮೆಚ್ಚಿಕೊಂಡಿದ್ದ ಗುರುಪ್ರಸಾದ್​, ಹಿಂದಿಯಲ್ಲಿ ಮಾತನಾಡಿಸಿದ್ದಾರೆ. ಆದರೆ ಅಶೋಕ್​ ಕನ್ನಡದಲ್ಲೇ ಮಾತನಾಡಿದ್ದಾರೆ. ಆಗ ಜೇಬಿನಲ್ಲಿದ್ದ 500 ರೂಪಾಯಿ ಒಳಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ಅಶೋಕ್​ಗೆ ಕೊಟ್ಟು ನಾನು ಹೊರಗಡೆ ಬಂದ ಮೇಲೆ ಸಿನಿಮಾ ಮಾಡೋಣ ಎಂದಿದ್ದರಂತೆ. ಅದರಂತೆ 2ನೇ ಸಲ ಚಿತ್ರ ಮಾಡಿದ್ದ ಅಶೋಕ್​, ಈಗ ರಂಗನಾಯಕ ಚಿತ್ರಕ್ಕೂ ಅವರೇ ಜೊತೆಯಾಗಿದ್ದಾರೆ.

ಕೃಪೆ: ರಚಿತಾ ಇನ್ಸ್​​ಸ್ಟಾಗ್ರಾಂ

ರಂಗಗೀತೆಗಳ ಪ್ರಯೋಗವೇ ಅದ್ಬುತ..!

ಹ್ಯಾಟ್ರಿಕ್​ ಕನಸು ಕಟ್ಟಿಕೊಂಡು ರಂಗನಾಯಕ ಸಿನಿಮಾ ಮಾಡುತ್ತಿದ್ದೇನೆ ನಿರ್ದೇಶಕ ಗುರುಪ್ರಸಾದ್​, ಈ ಸಿನಿಮಾದಲ್ಲಿ ರಂಗಗೀತೆಗಳ ಪ್ರಯೋಗಕ್ಕೆ ಕೈ ಹಾಕಿದ್ದಾರೆ. 14 ವರ್ಷಗಳ ಹಿಂದೆ ಎದ್ದೇಳು ಮಂಜುನಾಥ ಸಿನಿಮಾ ಮುಗಿದ ಬಳಿಕ ಒಂದು ದಿನ ಸುಮ್ಮನೆ ಹರಟೆ ಹೊಡೆಯುತ್ತಿದ್ದಾಗ ಜಗ್ಗೇಶ್​ ರಂಗಗೀತೆ ಹಾಡುತ್ತಿದ್ದರಂತೆ. ಆಗಲೇ ರಂಗಗೀತೆ ಪ್ರಯೋಗದ ನಿರ್ಧಾರ ಮಾಡಿದ್ದ ಗುರುಪ್ರಸಾದ್​ ಈಗ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 5 ಸಾವಿರ ಚಿತ್ರಗಳು ಬಂದಿರಬಹುದು. ಅದರಲ್ಲಿ ರಂಗನಾಯಕ ವಿಭಿನ್ನವಾಗಿ ಇರಬೇಕು ಎನ್ನುವುದು ಗುರುಪ್ರಸಾದ್​ ಇಚ್ಛೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಗೀತ ನಿರ್ದೇಶಕ ಅನೂಪ್ಗ್ ಸೀಳಿನ್​, ಟ್ರಾಕ್​ ಇಲ್ಲದ ಕಾರಣಕ್ಕೆ ತಾವೇ ಹಾಡಿನ ಝಲಕ್​ ತೋರಿಸಿದ್ರು.

ಇದನ್ನೂ ಓದಿ;

ಹಾಡಿನ ಸಾಲು:

ಎನ್ನ ಮನದರಸಿ ನಿನ್ನ ಮನೆ ಕಾಯೋಗ
ನನ್ನ ಪ್ರಾಣಸಖಿ ನೀನಿದ್ರೆ ಏನು ಸುಖ
ಬ್ರಹ್ಮಚಾರಿಯ ಬುಡಕ್ಕೆ ಬೆಂಕಿ ಇಟ್ಟೋಳೆ
ವೆಲ್ಡಿಂಗ್​ ವೆಲ್ಡಿಂಗ್​ ಅಂದರೆ ವೆಡ್ಡಿಂಗ್​ ಅಂದೋಳೆ
ಬಳುಕೋ ಬಾಳಿಕೆ ಬಲಿತ ಕನ್ನಿಕೆ ಬಾಯ್ಗೆ ಮಣ್ಣಾಕ

Related Posts

Don't Miss it !