ಇಂದ್ರಜಿತ್​ ಹೇಳಿಕೆ ಒಪ್ಪಿಕೊಂಡ ಸಂದೇಶ್​..! ದರ್ಶನ್​ ಏನಂದ್ರು..?

ಮೈಸೂರಿನ ಸಂದೇಶ್​ ಪ್ರಿನ್ಸ್​ ಹೋಟೆಲ್​​ನ ವೇಟರ್​ ಮೇಲೆ ನಟ ದರ್ಶನ್​ ಹಲ್ಲೆ ಮಾಡಿದ್ದಾರೆ ಎನ್ನುವ ಇಂದ್ರಜಿತ್​ ಲಂಕೇಶ್​ ಅವರ ಹೇಳಿಕೆಯನ್ನು ಹೋಟೆಲ್​ ಮಾಲೀಕ ಹಾಗೂ ವಿಧಾನ ಪರಿಷತ್​ ಸದಸ್ಯ ಸಂದೇಶ್​ ನಾಗರಾಜು ಭಾಗಶಃ ಒಪ್ಪಿಕೊಂಡಿದ್ದಾರೆ. ಸಂದೇಶ್ ದಿ ಪ್ರಿನ್ಸ್ ಹೋಟೆಲ್​ನಲ್ಲಿ ನಟ ದರ್ಶನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಹೇಳಿದ್ದಾರೆ. ಈ ಘಟನೆಯಿಂದ ನಮಗೂ, ನಮ್ಮ ಹೋಟೆಲ್​ಗೂ ತೊಂದರೆಯಾಗಿದೆ. ಲಾಕ್​ಡೌನ್​ಗೂ ನಾಲ್ಕು ದಿನ ಮುಂಚೆ ಈ ಘಟನೆ ನಡೆದಿದೆ‌. ಆದ್ರೆ ಹೊಟೆಲ್ ಸಿಬ್ಬಂದಿ ಮೇಲೆ ಹಲ್ಲೆಯಾಗಿಲ್ಲ. ಸಿಬ್ಬಂದಿಯನ್ನ ಬೈದಿದ್ದು ನಿಜ ಎಂದಿದ್ದಾರೆ.

ದರ್ಶನ್​ ಹೋಟೆಲ್​ಗೆ ಬಂದಿದ್ದಾಹ ಮಹಾರಾಷ್ಟ್ರ ಮೂಲದ ಟ್ರೈನಿ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡುತ್ತಿದ್ದ. ಸರ್ವಿಸ್ ವಿಚಾರದಲ್ಲಿ ನಟ ದರ್ಶನ್ ಸಿಬ್ಬಂದಿಗೆ ಬೈದ ಅಷ್ಟೆ. ಅವತ್ತು ಘಟನೆ ನಡೆದ ದಿನ 20 ಕ್ಕೂ ಹೆಚ್ಚು ಜನ ಇದ್ರು. ಅವತ್ತು ರಾಕೇಶ್ ಪಾಪಣ್ಣ, ಹರ್ಷ, ಪವಿತ್ರ ಗೌಡ ಕೂಡ ಅವತ್ತು ಬಂದಿದ್ದರು. ರಾತ್ರಿ 12 ಗಂಟೆ ವೇಳೆಯಲ್ಲಿ ಘಟನೆ ನಡೀತು. ಆ ವೇಳೆ ದರ್ಶನ್​ಗೂ ನಾನು ಸಮಾಧಾನ ಮಾಡಿದ್ದೇನೆ. ನನ್ನ ಹೋಟೆಲ್ ಸಿಬ್ಬಂದಿ ಆತ ಆತನಿಗೆ ಬೈಯೋದು ಬೇಡ ಅಂತಾ ಸಮಾಧಾನ ಮಾಡಿದ್ದೇನೆ‌. ನನ್ನ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೆ ನಾನು ಸುಮ್ಮನೆ ಬಿಡ್ತೀನಾ ಎಂದು ತಿಳಿಸಿದ್ದಾರೆ. ಹಲ್ಲೆಯಾಗಿದ್ರೆ ನಾನೇ ಪೊಲೀಸರಿಗೆ ಕಂಪ್ಲೈಟ್ ಕೊಡ್ತಿದ್ದೆ. ಸಿಸಿಟಿವಿ ಪುಟೇಜ್ ನಾಶ ಮಾಡುವ ಉದ್ದೇಶ ಇಲ್ಲ. ಹತ್ತು ದಿನಗಳ ವರೆಗೆ ಪುಟೇಜ್ ಇರುತ್ತೆ. ಆ ಬಳಿಕ ತನ್ನಷ್ಟಕ್ಕೆ ತಾನೇ ರೀಶಫಲ್ ಆಗುತ್ತದೆ ಎಂದಿದ್ದಾರೆ.

ಘಟನೆ ಬಗ್ಗೆ ಸ್ಪಷ್ಟವಾಗಿ ಹೇಳದ ನಟ ದರ್ಶನ್​..!

ಇಂದ್ರಜಿತ್ ಲಂಕೇಶ್ ಆರೋಪಕ್ಕೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದು, ಇಂದ್ರಜಿತ್ ಲಂಕೇಶ್ ಏನ್ ಆದ್ರೂ ಹೇಳಲಿ, ಊಹಾಪೋಹಗಳಿಗೆ ಉತ್ತರ ಕೊಡಲ್ಲ. ಈ ಪ್ರಕರಣವನ್ನು ಇಲ್ಲಿಗೆ ಮುಚ್ಚಿ ಹಾಕ್ತಿಲ್ಲ, ಮುಚ್ಚಿ ಹಾಕುವುದಿಲ್ಲ. ಎಫ್ ಐಆರ್ ಆಗಿದೆ, ಪೋಲಿಸವರಿಗೆ ತನಿಖೆ ಮಾಡಲು ಟೈಮ್ ಕೊಡಿ ಎಂದಿರುವ ಅವರು ಇದ್ರಲ್ಲಿ ಜಾತಿ ಬೇರೆ ತರುತ್ತಾ ಇದ್ದಾರೆ. ನನ್ನದು ಸಂದೇಶ್‌ ಅವರದ್ದು ಸಾವಿರ ಗಲಾಟೆ ಇದೆ, ನಮ್ನದನ್ನು ನಾವು ನೋಡ್ಕೊತ್ತೇವೆ, ಅದು ಬಿಟ್ಟು ಬಿಡಿ ಎನ್ನುವ ಮೂಲಕ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಇಂದ್ರಜಿತ್ ಅವ್ರು ದೊಡ್ಡ ತನಿಖಾದಾರರು, ನಾಲ್ಕು ದಿನದ ಲೆಕ್ಕ ತೆಗೆದುಕೊಳ್ಳಲಿ, ಇಂದ್ರಜಿತ್ ಅವರೇ ಪ್ರೂವ್ ಮಾಡಿಕೊಳಲಿ. ನನ್ನ ಬಳಿಕ ಇಂಟರ್ ವ್ಯೂಗೆ 2 ಬಾರಿ ಕೇಳಿದ್ರು. ನಾನು ಈಗ ಆಗಲ್ಲ ಅಂದಿದ್ದೆ ಎಂದಿದ್ದಾರೆ.

ಒಂದು ಮುಚ್ಚಿಡಲು ಹೋಗಿ ಮತ್ತೊಂದು ಬಯಲು..!

ಹೋಟೆಲ್​ನಲ್ಲಿ ಹಲ್ಲೆ ಮಾಡಿದ್ದ ವಿಚಾರ ಯಾರಿಗೂ ಗೊತ್ತಿರಲಿಲ್ಲ. ತಿಂಗಳ ಹಿಂದೆ ನಡೆದಿದ್ದ ಘಟನೆ ಬಹುತೇಕ ಮುಚ್ಚಿಹೋಗಿತ್ತು. ಆದರೆ ಯಾವಾಗ 25 ಕೋಟಿ ರೂಪಾಯಿ ವಂಚನೆ ಯತ್ನ ಎಂದು ಸ್ವತಃ ತಾನೇ ಬಹಿರಂಗ ಮಾಡಿಕೊಂಡು, ಆ ಬಳಿಕ ರಾಜಿ ಮಾಡಲು ಮುಂದಾಗಿ, ಗುಟ್ಟು ಗುಟ್ಟಾಗಿ ಮೀಟಿಂಗ್​ಗಳನ್ನು ನಡೆಸಿ ಪ್ರಕರಣಕ್ಕೆ ತೆರೆ ಎಳೆಯುವ ಯತ್ನ ಮಾಡಿದ್ರು. ಆ ವಿಚಾರ ಕೇವಲ 25 ಕೋಟಿ ವಂಚನೆ ಯತ್ನ ಮಾತ್ರವಲ್ಲ. ಅದರಲ್ಲಿ ಬೇರೆ ಯಾವುದೇ ವಿಚಾರವಿದ್ದು, ಗುಟ್ಟು ರಟ್ಟಾಗುವ ಭಯದಲ್ಲಿ ಪೊಲೀಸ್​ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿದೆ ಎನ್ನಲಾಗ್ತಿದೆ. ಪೊಲೀಸ್ರು ಕೂಡ ಆರೋಪಿಯನ್ನೇ ಬಿಟ್ಟು ಕಳುಹಿಸಿದ್ದಾರೆ. ಇದೀಗ ದರ್ಶನ್​ ವಿರುದ್ಧದ ಮತ್ತೊಂದು ವಿಚಾರ ಬಯಲಾಗಿದೆ. ಮುಂದೆ ಮತ್ತಷ್ಟು ತೆರೆ ಮೇಲೆ ಬಂದರೂ ಅಚ್ಚರಿಯೇನಿಲ್ಲ.

==============

Related Posts

Don't Miss it !