ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ತರಗತಿ ಆರಂಭ..! ಶಿಕ್ಷಣ ಇಲಾಖೆ ಆದೇಶ..!

ಕೊರೊನಾ 2ನೇ ಅಲೆಯಿಂದ ಶಾಲಾ – ಕಾಲೇಜು ಆರಂಭಕ್ಕೆ ಹಿಂದೆ ಮುಂದೆ ನೋಡುತ್ತಿರುವ ಶಿಕ್ಷಣ ಇಲಾಖೆ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಮಾಡಲು ನಿರ್ಧಾರ ಮಾಡಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಾಳೆಯಿಂದಲೇ ಆನ್​ಲೈನ್ ತರಗತಿಗಳಿಗಳು ಪ್ರಾರಂಭ ಆಗಲಿವೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಆನ್​ಲೈನ್ ತರಗತಿಯ ವೇಳಾಪಟ್ಟಿ ಪ್ರಕಟ ಮಾಡಿ ಆದೇಶ ಹೊರಡಿಸಿದೆ.

ಹೇಗಿದೆ ತರಗತಿ ವೇಳಾಪಟ್ಟಿ..?

ಬೆಳಗ್ಗೆ 10 ರಿಂದ 11 ರವರೆಗೆ ಮೊದಲ ಅವಧಿ ಆಗಿದ್ದು, 11 ರಿಂದ 12 ರವರೆಗೆ ಎರಡನೇ ಅವಧಿ ಕೊಡಲಾಗಿದೆ. ಮಧ್ಯಾಹ್ನ 12 ರಿಂದ 12.30 ರ ನಡುವೆ ಅರ್ಧ ಗಂಟೆಗಳ ಕಾಲ ವಿರಾಮ ನೀಡಲಾಗಿದೆ. ಮಧ್ಯಾಹ್ನ 12:30 ರಿಂದ 1:30 ರವರೆಗೆ ಮೂರನೇ ಅವಧಿ ತರಗತಿ ನಡೆಯಲಿದೆ. ಮಧ್ಯಾಹ್ನ 1:30 ರಿಂದ 2:30 ರವರೆಗೆ ನಾಲ್ಕನೇ ಅವಧಿ ತರಗತಿ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದೆ.

ಕಳೆದ ಬಾರಿ ರೆಕಾರ್ಡೆಡ್​ ಲಿಂಕ್​ಗಳನ್ನು ವಾಟ್ಸಪ್​ ಗ್ರೂಪ್​ಗಳಿಗೆ ಕಲುಹಿಸಲಾಗ್ತಿತ್ತು. ಆದರೆ ಈ ಶೈಕ್ಷಣಿಕ ವರ್ಷದಲ್ಲಿ MS Team, Google meet, Zoom Meet, Jio Meet ಬಳಸಿಕೊಂಡು ಆನ್​ಲೈನ್​ ತರಗತಿ ನಡೆಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಪ್ರತಿದಿನದ ಹಾಜರಾತಿ ನಡೆದು ಪ್ರಾಂಶುಪಾಲರಿಗೆ ಸಲ್ಲಿಸಬೇಕು. ಒಂದು ವೇಳೆ ಯಾವುದೇ ಕಾಲೇಜಿನಲ್ಲಿ ತರಗತಿಗೆ ಉಪನ್ಯಾಸಕರು ಇಲ್ಲದಿದ್ದರೆ, ಪಕ್ಕದ ಕಾಲೇಜಿನ ವಿಷಯ ಉಪನ್ಯಾಸಕರಿಗೆ ಮಕ್ಕಳನನ್ನು ಸರಿಹೊಂದಿಸುವುದು. ತರಗತಿಗಳನ್ನು ನಡೆಸುವ ಜವಾಬ್ದಾರಿ ನೀಡುವುದು ಎಂದು ತಿಳಿಸಲಾಗಿದೆ.

Related Posts

Don't Miss it !