ಸಾರ್ಥಕತೆಯ ಮೂಲಕ ಪಂಚಭೂತಗಳಲ್ಲಿ ಲೀನವಾದ ಪಂಚಭಾಷ ನಟಿ

Jayanthi

ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಸರು ಜಯಂತಿ..!

76 ವರ್ಷದ ಹಿರಿಯ ನಟಿ ಜಯಂತಿ ಇಹಲೋಕ ತ್ಯಜಿಸಿದ್ದಾರೆ. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಅಭಿನಯ ಶಾರದೆ ಜಯಂತಿ ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಡಾ ರಾಜ್​ಕುಮಾರ್​ ಅವರನ್ನೇ ಹಿಂಬಾಲಿಸಿದ್ದಾರೆ. ನಿನ್ನೆ ರಾತ್ರು ಎಂದಿನಂತೆ ಊಟ ಮುಗಿಸಿ ನಿದ್ರೆಗೆ ಜಾರಿದ್ದ ಹಿರಿಯ ನಟಿ ಉಸಿರು ಚೆಲ್ಲಿದ್ದರು. ಬೆಳಗ್ಗೆ ಎಚ್ಚರವಾಗಬೇಕಿದ್ದ ಅ,್, ಎದ್ದೇಳಲಿಲ್ಲ ಎಂದು ಎಚ್ಚರಿಸಲು ಮುಂದಾಗಿದ್ದ ಪುತ್ರ ಕೃಷ್ಣಕುಮಾರ್​ಗೆ ಅಮ್ಮ ಇಹಲೋಕ ತ್ಯಜಿಸಿದ್ದಾರೆ ಎನ್ನುವುದು ತಿಳಿಯಿತು. ಆ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಬನಶಂಕರಿ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಯ್ತು.

ನಟಿ ತಾರಾ ಮುಂದಾಳತ್ವದಲ್ಲಿ ವ್ಯವಸ್ಥೆ..!

ಹಿರಿಯ ನಟಿ ಜಯಂತಿ ಅವರ ಅಂತಿಮ ದರ್ಶನದ ಎಲ್ಲಾ ವ್ಯವಸ್ಥೆಗಳನ್ನು ನಟಿ ತಾರಾ ವಹಿಸಿಕೊಂಡಿದ್ದರು. ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಬೇಕಾಗಿರುವ ವ್ಯವಸ್ಥೆ ಮಾಡಿದ್ರು. ಅಂತಿಮ‌‌ ದರ್ಶನ ವ್ಯವಸ್ಥೆ ಜೊತೆಗೆ ಸ್ಮಾರಕ ನಿರ್ಮಾಣದ ಕುರಿತು ಸರ್ಕಾರದ ಜೊತೆ ಮಾತುಕತೆ ಮಾಡಿದ್ರು. 2 ದಶಕಗಳ ಕಾಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರರಂಗವನ್ನು ಆಳಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ ಜಯಂತಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ ಹೇಳುವ ಕೆಲಸ ಮಾಡಿದ್ರು. ದಿಕ್ಕಿಲ್ಲದ ಚಿತ್ರರಂಗದಲ್ಲಿ ನಾಯಕತ್ವ ವಹಿಸಿಕೊಳ್ಳುವ ಮೂಲಕ ಚಿತ್ರರಂಗದ ಯಜಮಾನಿಯಂತೆ ಕೆಲಸ ಮಾಡಿದ್ರು.

ಹಿರಿಯ ನಟಿ ಜಯಂತಿ ನಿಧನಕ್ಕೆ ಸಚಿವ ಬಿ.ಸಿ.ಪಾಟೀಲ್ ಸಂತಾಪ ಸೂಚಿಸಿದ್ರು. ಚಿಕ್ಕಂದಿನಿಂದಲೂ ನಾನು ಜಯಂತಿ ಅವರನ್ನು ನೋಡಿ ಬೆಳೆದವನು, ಶಿವಪ್ಪ ನಾಯಕ ಸಿನಿಮಾದಲ್ಲಿ ನನ್ನ ತಾಯಿ ಪಾತ್ರ ಮಾಡಿದ್ದರು. ಅತ್ಯಂತ ಸರಳ ಸ್ವಭಾವ ಅಹಂಭಾವ ಇಲ್ಲದ ವ್ಯಕ್ತಿತ್ವ ಅವರದ್ದು ಎಂದು ನೆನಪಿಸಿಕೊಂಡರು. ಅವರ ನಿಧನ ನನಗೆ ನೋವು ತಂದಿದೆ. ಪಂಚಭಾಷಾ ಕಲಾವಿದೆ ಜಯಂತಿ ಅವರನ್ನು ಕಳೆದುಕೊಂಡಿರುವುದು ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದ್ರು.

ನಿರ್ದೇಶಕ ಭಗವಾನ್ ಸಂತಾಪ ಸೂಚಿಸಿ ಮಾತನಾಡಿದ್ರು. ನನ್ನ ಅವಳ ಸಂಬಂಧ 60 ವರ್ಷಗಳ ಸಂಬಂಧ, ಗುರುಪೂರ್ಣಿಮೆ ದಿನ ಗುರುವಂದನೆಯನ್ನ ತಿಳಿಸಿದ್ದಳು. ಚಂದವಳ್ಳಿಯ ತೋಟ, ಮಂತ್ರಾಲಯ ಮಹಾತ್ಮೆ ಚಿತ್ರಗಳಲ್ಲಿ ಅದ್ಭುತ ನಟನೆ ಮಾಡಿದ್ದಳು. ಈ ರೀತಿಯ ನಟಿ ಸಿಗೋದು ಬಹಳ ವಿರಳ. ನನ್ನ ನಿರ್ದೇಶನದಲ್ಲಿ 7-8 ಸಿನಿಮಾದಲ್ಲಿ ಜಯಂತಿ ನಟಿಸಿದ್ದಳು ಎಂದು ನೆನಪಿಸಿಕೊಂಡರು. ನನ್ನನ್ನು ಹೋಗೋ ಬಾರೋ ಎಂದು ನನ್ನ ಜೊತೆ ಮಾತನಾಡುತ್ತಿದ್ದ ಏಕೈಕ ನಟಿ ಜಯಂತಿ ಎಂದ ಅವರು, ರಾಜ್ ಕುಮಾರ್ ಅವರನ್ನ ಹೇ ರಾಜ್ ಅಂತ ಕರೀತಿದ್ದಳು. ರಾಜ್ ಕುಮಾರ್ ಹೋದ್ರು ಈಗ ಜಯಂತಿ ಕೂಡ ಹೋದ್ರು, ನನ್ನನ್ನ ಒಂಟಿ ಮಾಡಿದ್ರು. ನಾನು ಈಗ ಒಬ್ಬಂಟಿ ಎಂದು ಬೇಸರ ವ್ಯಕ್ತಪಡಿಸಿದ್ರು.

ಹಿರಿಯ ನಟಿ ಜಯಂತಿ ನಿಧನಕ್ಕೆ ಹಿರಿಯ ನಟಿ ಲೀಲಾವತಿ ಕಂಬನಿ ಮಿಡಿದಿದ್ದು, ನಮ್ಮೇಲ್ಲರ ಅಭಿನಯ ಶಾರದೆ ನಮ್ಮ ಜಯಂತಿ ಅಗಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಜಯಂತಿ ಅಪಾರ ಕೊಡುಗೆ ನೀಡಿದ್ದಾರೆ. ನಾಗರಹಾವು ಚಿತ್ರದಲ್ಲಿ ಒನಕೆ ಓಬವ್ವನ ಪಾತ್ರ ಅಭಿನಯಿಸಿ ಅತ್ಯುತ್ತಮ ನಟಿ ಅನ್ನೋದನ್ನ ತೋರಿಸಿಕೊಟ್ಟಿದ್ರು. ಚಿತ್ರೋದ್ಯಮಕ್ಕೆ ಅತಿದೊಡ್ಡ ನಷ್ಟ ಆಗಿದೆ ಎಂದು ಬಣ್ಣಿಸಿದ್ರು. ಕುಟುಂಬ ವರ್ಗಕ್ಕೆ ಅಗಲಿಕೆ ನೋವು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ರು.

ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಮನೆಯಲ್ಲೇ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಚಿತ್ರರಂಗದ ಗಣ್ಯರು ಹಾಗೂ ಸಂಬಂಧಿಕರು ಅಂತಿಮ ನಮನ ಸಲ್ಲಿಸಿದ್ರು. ಆ ಬಳಿಕ ಸಂಜೆ 4 ಗಂಟೆ ತನಕ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಬ್ಯಾಂಡ್ ಬಾರಿಸಿ ಕುಶಾಲತೋಪು ಸಿಡಿಸುವ ಮೂಲಕ ಅಗಲಿದ ಚೇತನಕ್ಕೆ ಗೌರವ ಸಲ್ಲಿಸಲಾಯ್ತು. ಬಳಿಕ ಬನಶಂಕರಿ ಚಿತಾಗಾರದಲ್ಲಿ ಹಿರಿಯ ಹಿಂದೂ ಸಂಪ್ರದಾಯದಂತೆ ನಟಿ ಜಯಂತಿ ಅಂತ್ಯಕ್ರಿಯೆ ನಡೀತು. ಪುತ್ರ ಕೃಷ್ಣ ಕುಮಾರ್​ ಅಗ್ನಿಸ್ಪರ್ಶ ಮಾಡಿದ್ರು.

ನಟಿ ಜಯಂತಿ ಅವರಿಗೆ ಎಡಕ್ಕಲ್ಲು ಗುಡ್ಡದ ಮೇಲೆ, ಮಸಣದ ಹೂ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತು, ಆನಂದ್​, ಟುವ್ವಿ ಟುವ್ವಿ ಟುವ್ವಿ ಚಿತ್ರಗಳ ಹೊತೆಗೆ ಜೊತೆಗೆ ಡಾ ರಾಜ್​​ಕುಮಾರ್​ ಜೀವಮಾನ ಸಾಧನೆ ಪ್ರಶಸ್ತಿ ಸೇರಿ 7 ಬಾರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಇಷ್ಟೇ ಅಲ್ಲದೆ 1973ರಲ್ಲಿ ಎಡಕ್ಕಲ್ಲು ಗುಡ್ಡದ ಮೇಲೆ ಹಾಗೂ 1976ರಲ್ಲಿ ತುಳಸಿ ಚಿತ್ರಕ್ಕೆ ಸೌಥ್​ ಫಿಲ್ಮ್​ ಫೇರ್​ ಅವಾರ್ಡ್​ ಪ್ರಶಸ್ತಿ ಪಡೆದಿದ್ರು. 2017ರಲ್ಲಿ ಪದ್ಮಭೂಷಣ ಬಿ ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿತ್ತು.

Related Posts

Don't Miss it !