ಸೆಪ್ಟೆಂಬರ್​ 6ರಿಂದ ಶಾಲೆ ಓಪನ್​.. ಗಣೇಶನ ಬಗ್ಗೆ ಸರ್ಕಾರಕ್ಕೆ ಸಂಕಷ್ಟ..!

ರಾಜ್ಯ ಸರ್ಕಾರ ಕೋವಿಡ್​​ ತಾಂತ್ರಿಕ ಸಮಿತಿ ಸಭೆ ನಡೆಸಿ ಶಾಲೆ ಆರಂಭ ಮಾಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸೆಪ್ಟೆಂಬರ್​ 6 ರಿಂದ ಶಾಲೆಗಳು ಶುರುವಾಗಲಿದ್ದು, 6ನೇ ತರಗತಿ ಮೇಲ್ಟಟ್ಟ ಮಕ್ಕಳು ಬೌತಿಕ ತರಗತಿಗೆ ಆರಂಭ ಮಾಡುವುದಕ್ಕೆ ಸರ್ಕಾರ ಆದೇಶ ಮಾಡಿದೆ. ದಿನಬಿಟ್ಟು ದಿನ ಶಾಲೆಗಳು ನಡೆಯಬೇಕು ಹಾಗೂ ಶೇಕಡ 50 ರಷ್ಟು ಮಕ್ಕಳನ್ನು ಕರೆದು ಪಾಠ ಮಾಡಬೇಕು ಎಂದು ಸರ್ಕಾರ ತಿಳಿಸಿದೆ. ಆದರೆ ವಾರದಲ್ಲಿ 5 ದಿನಗಳು ಮಾತ್ರ ಪಾಠಗಳು ನಡೆಯಬೇಕು, ಉಳಿದ ಶನಿವಾರ ಹಾಗೂ ಭಾನುವಾರ ಶಾಲೆಗಳನ್ನು ಸ್ಯಾನಿಟೈಸ್ ​ಮಾಡಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ. ಈಗಾಗಲೇ ಶುರುವಾಗಿರುವ ಮಕ್ಕಳಲ್ಲಿ 6,472 ಮಕ್ಕಳಲ್ಲಿ ಕೊರೊನಾ ಸೋಂಕು ತಪಾಸಣೆ ನಡೆಸಿದ್ದು ಅದರಲ್ಲಿ 14 ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದಿದ್ದಾರೆ.

ಪಾಸಿಟಿವಿಟಿ ದರ ಶೇಕಡ 2ಕ್ಕಿಂತ ಕಡಿಮೆ ಇರಬೇಕು..!

ಕೊರೊನಾ ಮಾರ್ಗಸೂಚಿಯನ್ನು ರಾಜ್ಯದಿಂದ ಜಿಲ್ಲೆಗಳಿಗೆ ಇಳಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ ಜಿಲ್ಲೆಗಳಿಂದ ತಾಲೂಕು ಮಟ್ಟಕ್ಕೆ ಇಳಿಕೆ ಮಾಡಲಾಗಿದೆ. ಯಾವ ತಾಲೂಕುಗಳಲ್ಲಿ ಶೇಕಡ 2ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ದರ ಇರುತ್ತದೆಯೋ ಆ ತಾಲೂಕುಗಳಲ್ಲಿ ಶಾಲೆ ಆರಂಭ ಮಾಡಬಹುದು ಎಂದು ತಿಳಿಸಲಾಗಿದೆ. ಇನ್ನು ಹಾಸನ, ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಾಗಿರುವ ಕಾರಣ ವೀಕೆಂಡ್​ ಲಾಕ್​ಡೌನ್​ ಜಾರಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಮದುವೆ ಕಾರ್ಯಕ್ರಮಗಳ ಬಗ್ಗೆಯೂ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 400 ಜನರನ್ನು ಸೇರಿಸಿ ಚೌಲ್ಟ್ರಿಯಲ್ಲಿ ಮದುವೆ ಮಾಡಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಸಣ್ಣಪುಟ್ಟ ಕಲ್ಯಾಣಮಂಟಪಗಳಲ್ಲಿ ಶೇಕಡ 50 ರಷ್ಟು ಜನರನ್ನು ಸೇರಿಸಿ ಮದುವೆ ಮಾಡಬಹುದಾಗಿದೆ. ಥಿಯೇಟರ್​ಗಳಲ್ಲೂ ಶೇಕಡ 50 ರಷ್ಟು ಸೀಟಿಂಗ್​ ಮೀರುವಂತಿಲ್ಲ.

ಇದನ್ನೂ ಓದಿ;

ಗಣೇಶ ಹಬ್ಬದ ಬಗ್ಗೆ ನಿರ್ಧಾರ ಸದ್ಯಕ್ಕಿಲ್ಲ..!

ಗಣೇಶೋತ್ಸವ ಆಚರಣೆ ಬಗ್ಗೆ ಸರ್ಕಾರ ಇನ್ನೂ ಗೊಂದಲಕ್ಕೆ ಸಿಲುಕಿದ್ದು, ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿದೆ. ಇದೇ ಕಾರಣದಿಂದ ಸೆಪ್ಟೆಂಬರ್​ 5ರಂದು ಮತ್ತೊಮ್ಮೆ ಸಭೆ ನಡೆಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣೇಶೋತ್ಸವ ಆಚರಣೆ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ. ಆದರೆ ಸಕಾರಾತ್ಮಕ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಆರ್​ ಅಶೋಕ್​ ಹೇಳಿರುವ ಕಾರಣ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗುವುದು ಎನ್ನಲಾಗ್ತಿದೆ. ಆದರೆ ಸೆಪ್ಟೆಂಬರ್​ 5ರೊಳಗೆ ಕೊರೊನಾ ಸೋಂಕು ಯಾವ ರೀತಿ ಹರಡುತ್ತದೆ ಎನ್ನುವುದನ್ನು ನೋಡಿಕೊಂಡು ಷರತ್ತು ಬದ್ಧ ಅನುಮತಿ ಕೊಡಲಾಗುತ್ತದೆ. ಅದರಲ್ಲೂ ಸಾವಿರಾರು ಜನರು ಸೇರುವ ಗಣೇಶೋತ್ಸವಗಳ ಸಂಘಟಕರ ಜೊತೆಗೆ ಮಹತ್ವದ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ;

ಕೇರಳ ಭಯದಲ್ಲಿ ಕರ್ನಾಟಕ ಸರ್ಕಾರ..!

ಕೊರೊನಾ ಸೋಂಕು ನಡುವೆ ಗಣೇಶೋತ್ಸವಕ್ಕೆ ಅನುಮತಿ ನೀಡಲೇಬೇಕಾದ ಅನಿವಾರ್ಯತೆ ಬಿಜೆಪಿ ಸರ್ಕಾರದ ಮೇಲಿದೆ. ಹಿಂದುತ್ವದ ಆಧಾರದ ಮೇಲೆ ಮತ ಕೇಳುವ ಬಿಜೆಪಿ ನಾಯಕರು ಗಣೇಶೋತ್ಸವ ಆಚರಣೆ ರದ್ದು ಮಾಡುವುದಕ್ಕೆ ತೀವ್ರ ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಹಿಂದೂ ಸಂಘಟನೆಗಳು ಸರ್ಕಾರದ ವಿರುದ್ಧ ಕೆಂಗಣ್ಣು ಬೀರುತ್ತಿದ್ದಾರೆ. ಆದರೆ ಪಕ್ಕದ ಕೇರಳದಲ್ಲಿ ಓಣಂ ಆಚರಣೆಗೆ ಅನುಮತಿ ಕೊಟ್ಟ ಬಳಿಕ ಕೊರೊನಾ ಸೋಂಕು ಅಬ್ಬರಿಸುತ್ತಿದ್ದು ಪ್ರತಿದಿನ 40 ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಗಣೇಶೋತ್ಸವದ ಬಳಿಕ ಕೊರೊನಾ ರಣಕೇಕೆ ಹಾಕಿದರೆ ಎನ್ನುವ ಭಯದಲ್ಲಿ ಸರ್ಕಾರವಿದೆ. ಇನ್ನೂ ಗಣೇಶೋತ್ಸವಕ್ಕೆ ಅನುಮತಿ ನೀಡದಿದ್ದರೂ ಸ್ವಯಂ ಪಕ್ಷದ ನಾಯಕರ ಆಕ್ರೋಶಕ್ಕೆ ಗುರಿಯಾಗುವ ಆತಂಕವೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲಿದೆ. ಸೆಪ್ಟೆಂಬರ್​ 5ರಂದು ಎಲ್ಲಾ ಆಯಾಮದ ಚರ್ಚೆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ.

Related Posts

Don't Miss it !