ಧಾರಾವಾಹಿ ಪ್ರೊಡಕ್ಷನ್​ ಲೇಡಿ, ಮರ್ಡರ್​ ಮಿಸ್ಟರಿ..!

ಕೊರೊನಾ ಸಂಕಷ್ಟದಲ್ಲಿ ಸಾಕಷ್ಟು ಜನರು ಪರದಾಡುತ್ತಿದ್ದಾರೆ. ಆದರೆ ಆ ಸಂಕಷ್ಟದಿಂದ ಪಾರಾಗಲು ಕೊಲೆ ಮಾಡಿದ್ದಾರೆ ನೀವು ನಂಬಲೇ ಬೇಕು. ಟಿವಿ ಸೌಂಡ್​ ಜಾಸ್ತಿ ಮಾಡಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಈಕೆ, ಕೇವಲ 24 ಗಂಟೆಯ ಒಳಗೆ ಪೊಲೀಸರ ಅತಿಥಿ ಆಗಿದ್ದಾಳೆ. ಕೊಲೆಗೆ ನೀಡಿರುವ ಕಾರಣ ಕೇಳಿ ಬೆಂಗಳೂರು ಪೊಲೀಸರೇ ಶಾಕ್​ ಆಗಿದ್ದಾರೆ.

ಕೊಲೆ ನಡೆದಿದ್ದು ಯಾಕೆ ಗೊತ್ತಾ..?

ಬೀದರ್​ ಮೂಲಕ ಮಹಿಳೆ ರಂಜಿತಾ ಉದ್ಯೋಗ ಹರಸಿಕೊಂಡು ದೂರದ ಬೆಂಗಳೂರಿಗೆ ಬಂದಿದ್ದರು. ಮದ್ವೆಯಾಗಿದ್ದ ರಂಜಿತ ತನ್ನ ಗಂಡ ಹಾಗೂ ಮೈದುನನ ಜೊತೆಗೆ ಜ್ಞಾನ ಜ್ಯೋತಿನಗರದಲ್ಲಿ ವಾಸ ಮಾಡ್ತಿದ್ರು. ಒಂದು ದಿನ ಕುತ್ತಿಗೆಗೆ ಚಿನ್ನದ ಸರ ಹಾಕಿಕೊಂಡು ಬಂದಿದ್ದನ್ನು ನೋಡಿದ್ದ ಮೊದಲ ಮಹಡಿಯಲ್ಲಿ ಬಾಡಿಗೆಗೆ ಇದ್ದ ಮಹಿಳೆ ಮಾತನಾಡಿಸುವ ನೆಪದಲ್ಲಿ ಬಂದು ಸರ ತುಂಬಾ ಚೆನ್ನಾಗಿದೆ, ನಾನೂ ಕೂಡ ಒಂದನ್ನು ಇದೇ ಡಿಸೈನ್​ನಲ್ಲಿ ಮಾಡಿಸಬೇಕು ಕೊಡು ಎಂದಿದ್ದಾಳೆ. ಬೆಣ್ಣೆಯಂತಹ ಮಾತಿಗೆ ಮರುಳಾದ ಮುಗ್ದ ಹೆಣ್ಣು ಮಗಳು ಆಯ್ತು ಎಂದಿದ್ದಳಂತೆ. ಅದೇ ಸರಕ್ಕಾಗಿ ಕೊಲೆ ನಡೆದುಬಿಟ್ಟಿದೆ. ಆರೋಪಿಗಳು 2 ಲಕ್ಷ ರೂಪಾಯಿ ಸಾಲ ಮಾಡಿದ್ದರು, ಜೊತೆಗೆ ಮನೆ ಬಾಡಿಗೆ ಕಟ್ಟಲು ಹಣ ಇಲ್ಲದ್ದು ಕೊಲೆಗೆ ಕಾರಣ.

ಆರೋಪಿ ಇಂದ್ರಮ್ಮ

ಒಂಟಿ ಮಹಿಳೆ ಕೊಲೆ ಹೇಗೆ ನಡೀತು..?


ಸರವನ್ನು ಆಕೆಯಿಂದ ತೆಗೆದುಕೊಳ್ಳಲೇ ಬೇಕು ಎಂದು ಪ್ಲ್ಯಾನ್​ ಹಾಕಿದ್ದ ಆರೋಪಿ ಮಹಿಳೆ ಇಂದ್ರಮ್ಮ ತನ್ನ ಪ್ರಿಯಕರ ರಾಜಶೇಖರ್​ಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾಳೆ. ರಂಜಿತ ಗಂಡ ಹಾಗೂ ಮೈದುನ ಕೆಲಸಕ್ಕೆ ಹೋದ ಬಳಿಕ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಇಂದ್ರಮ್ಮ, ಸರ ಕೇಳುವ ನೆಪದಲ್ಲಿ ರಂಜಿತ ಮನೆಗೆ ಬಂದಿದ್ದಾಳೆ. ಸರ ಕೊಡುವಂತೆ ಕೇಳಿದಾಗ ಸರ ನನ್ನದಲ್ಲ ಸಂಬಂಧಿಕರದ್ದು ಎಂದಿದ್ದಾಳೆ ರಂಜಿತ. ಆದರೆ ಈಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಕೊಲೆ ಯತ್ನ ಮಾಡಿದ್ದಾರೆ. ಆದರೆ ರಂಜಿತ ಜೋರಾಗಿ ಕಿರುಚಲು ಶುರು ಮಾಡಿದ ಮೇಲೆ ಟಿವಿ ಸೌಂಡ್​ ಹೆಚ್ಚು ಮಾಡಿ ಕೇಬಲ್​ ವೈರ್​ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾರೆ. ಚುಚ್ಚಿದ್ದ ಚಾಕುವನ್ನು ಆಕೆಯ ಕೈಗೇ ಇಟ್ಟಿದ್ದಾರೆ.

ಇಂದ್ರಮ್ಮನ ಪ್ರಿಯಕರ ರಾಜಶೇಖರ

ಕಿವಿ ಕುಯ್ದು ಬಿಸಾಕಿದ್ದ ಆರೋಪಿಗಳು..!


ರಂಜಿತಾಳನ್ನು ಕೊಲೆ ಮಾಡಿದ ಬಳಿಕಮನೆಯಲ್ಲಿ ಸರಕ್ಕಾಗಿ ಹುಡುಕಾಡಿದ್ದಾರೆ. ಆದರೆ ಸರ ಮನೆಯಲ್ಲಿ ಸಿಕ್ಕಿಲ್ಲ. ಯಾಕಂದ್ರೆ ಚಿನ್ನದಸರ ರಂಜಿತಾಳದ್ದು ಅಲ್ಲ, ಆಕೆಯ ಸಂಬಂಧಿಕರದ್ದು. ಒಂದು ದಿನ ಹಾಕಿಕೊಂಡಿದ್ದಳು ಅಷ್ಟೆ ಎನ್ನುವುದು ಈಗ ತಿಳಿದಿದೆ. ಕೊಲೆ ಮಾಡಿದ ಬಳಿಕ ಏನೂ ಸಿಗದಿದ್ದ ವೇಳೆ ಕಿವಿಯಲ್ಲಿದ್ದ ಕಿವಿಯೋಲೆ ಕಾಣಿಸಿದೆ. ಅವನ್ನು ಬಿಚ್ಚುವ ಬದಲು ಕಿವಿಯನ್ನೇ ಕತ್ತರಿಸಿದ್ದಾರೆ. ಆದ್ರೆ ಅವೂ ಕೂಡ ಉಮಾಗೋಲ್ಡ್​, ಹಾಗಾಗಿ ಕಿವಿ ಸಮೇತ ಓಲೆಗಳನ್ನು ಅಲ್ಲೆ ಬಿಸಾಕಿ, ತಾಳಿ ಸರದಲ್ಲಿ ಇದ್ದ ಎರಡು ಚಿನ್ನದ ಗುಂಡುಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಖತರ್ನಾಕ್​ ಕಿಲಾಡಿಗಳು ಸಿಕ್ಕಿದ್ಹೇಗೆ..?


ಕೊಲೆ ಪಾತಕಿ ಇಂದ್ರಮ್ಮ ಹಾಗೂ ರಾಜಶೇಖರ್​, ಧಾರವಾಗಿ ಪ್ರೊಡಕ್ಷನ್​​ನಲ್ಲಿ ಕ್ಯಾಟರಿಂಗ್​ ಅಸಿಸ್ಟೆಂಟ್​ ಕೆಲಸ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ಅದೇ ಗುಂಗಿನಲ್ಲಿದ್ದ ಆರೋಪಿಗಳು ಧಾರಾವಾಹಿಯಲ್ಲಿ ಕೊಲೆ ಮಾಡುವ ದೃಶ್ಯವನ್ನೇ ನಿಜಜೀವನದಲ್ಲೂ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಕೊಲೆ ಮಾಡಿದ ಬಳಿಕ ತಮಗೆ ಏನೂ ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಅನುಮಾನಗೊಂಡು ಇಬ್ಬರನ್ನು ಕರೆದುಕೊಂಡು ಹೋಗಿ ಠಾಣೆಯಲ್ಲಿ ವಿಚಾರಣೆ ಮಾಡಿದ ಬಳಿಕ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ.

ದೃಶ್ಯ ಸಿನಿಮಾ ಸ್ಟೈಲ್​ನಲ್ಲಿ ವಿಚಾರಣೆ..!

ಕೊಲೆ ಮಾಡಿದ ಬಳಿಕ ಪೊಲೀಸರು ವಿಚಾರಣೆ ಮಾಡಿದರೆ ಉತ್ತರ ಏನೇನು ಹೇಳಬೇಕು ಎನ್ನುವುದನ್ನು ಇಬ್ಬರೂ ಮಾತನಾಡಿಕೊಂಡಿದ್ದಾರೆ. ಎಷ್ಉ ಬಾರಿ ಕೇಳಿದರೂ ಉತ್ತರ ಬದಲಿಸಬಾರದು ಎನ್ನುವ ಬಗ್ಗೆ ದೃಶ್ಯ ಸಿನಿಮಾದ ರೀತಿಯಲ್ಲೇ ತಯಾರಾಗಿದ್ರು. ಆದ್ರೆ ಚಿನ್ನದ ಸರದ ಬಗ್ಗೆ ವಿಚಾರಣೆ ನಡೆಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಧಾರಾವಾಹಿಗಳಲ್ಲಿ ನಟನೆಗಾಗಿ ಕೊಲೆ ಮಾಡುವುದನ್ನೇ ನಿಜಜೀವನದಲ್ಲೂ ಪಾಲಿಸಲು ಹೋಗಿ ಕೊಲೆ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸರು ಕೇವಲ 24 ಗಂಟೆಗಳಲ್ಲೇ ಆರೋಪಿ ಪ್ರೇಮಿಗಳನ್ನು ಜೈಲಿಗೆ ಅಟ್ಟಿದ್ದಾರೆ. ಅಕ್ಕಪಕ್ಕದ ಮನೆಯವರ ಬಳಿ ತೋರಿಸಿಕೊಳ್ಳುವ ಜನ ಹುಷಾರಾಗಿ ಇರುವುದು ಒಳಿತು.

Related Posts

Don't Miss it !