21 ಅತ್ಯಾಚಾರ ಮಾಡಿದ ಕಾಮುಕ ಉಮೇಶ್​​ ರೆಡ್ಡಿಗೆ ಗಲ್ಲು ತಡ ಆಗ್ತಿದೆ ಯಾಕೆ..!?

ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಗಮನ ಸೆಳೆದಿದ್ದ ಕಾಮುಕ ಉಮೇಶ್​ ರೆಡ್ಡಿಗೆ ಮತ್ತೆ ಗಲ್ಲು ಶಿಕ್ಷೆ ಕಾಯಂ ಆಗಿದೆ. ಬರೋಬ್ಬರಿ 21 ಜನರನ್ನು ಅಮಾನುಷವಾಗಿ ಹರಿದು ಮುಕ್ಕಿದ್ದ ಉಮೇಶ್​ ರೆಡ್ಡಿಗೆ ಸೂಕ್ತ ಶಿಕ್ಷೆಯೇ ಆಗಿದೆ ಎನ್ನಬಹುದು. ಆದರೆ ಮರಣದಂಡನೆ ಶಿಕ್ಷೆ ಜಾರಿಯಾಗಿ ಬರೋಬ್ಬರಿ 15 ವರ್ಷಗಳೇ ಕಳೆದಿದ್ದರೂ ಶಿಕ್ಷೆ ಮಾತ್ರ ಜಾರಿಯಾಗುವುದಕ್ಕೆ ಬಿಟ್ಟಿಲ್ಲ. 2006ರಲ್ಲಿ ಬೆಂಗಳೂರಿನ ಸೆಷನ್ಸ್​ ಕೋರ್ಟ್​ ಮರಣದಂಡನೆ ಶಿಕ್ಷೆ ಜಾರಿ ಮಾಡಿತ್ತು. 2009ರಲ್ಲಿ ಹೈಕೋರ್ಟ್​ ಕೂಡ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಆ ಬಳಿಕ ಸುಪ್ರೀಂಕೋರ್ಟ್​ ಕೂಡ 2011ರಲ್ಲಿ ಮೇಲ್ಮನವಿ ಅರ್ಜಿ ವಜಾ ಮಾಡಿತ್ತು. 2013ರಲ್ಲಿ ರಾಷ್ಟ್ರಪತಿಗಳಿಂದ ಕ್ಷಮಾದಾನ ಅರ್ಜಿ ಕೂಡ ತಿರಸ್ಕಾರ ಆಯ್ತು. 2016ರಲ್ಲಿ ಸುಪ್ರೀಂಕೋರ್ಟ್​ನಲ್ಲಿ ಮರು ಪರಿಶೀಲನಾ ಅರ್ಜಿ ವೇಳೆಯೂ ಗಲ್ಲು ಶಿಕ್ಷೆಯೇ ಸೂಕ್ತ ಎಂದು ಅಭಿಪ್ರಾಯ ಆಗಿತ್ತು. 2016ರಲ್ಲಿ ಮತ್ತೆ ರಾಜ್ಯ ಹೈಕೋರ್ಟ್​ ಮೆಟ್ಟಿಲೇರಿದ ಬಳಿಕ ಇದೀಗ ಮತ್ತೆ ಮರಣದಂಡನೆ ಮರು ನಿಗದಿ ಮಾಡಿದೆ ಹೈಕೋರ್ಟ್​.

21 ರೇಪ್​ ಕೇಸ್​ಗಳಲ್ಲಿ ಶಿಕ್ಷೆ ಯಾವುದಕ್ಕೆ..?

ಉಮೇಶ್​ ರೆಡ್ಡಿ ಮೇಲೆ ಬರೋಬ್ಬರಿ 21 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣಗಳು ದಾಖಲಾಗಿವೆ. ಆದರೆ 1998ರಲ್ಲಿ ಜಯಶ್ರೀ ಎಂಬುವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಉಮೇಶ್​ ರೆಡ್ಡಿಯನ್ನು ಬಂಧಿಸಲಾಗಿತ್ತು. ಆದರೆ ಕೋರ್ಟ್​ಗೆ ಕರೆದೊಯ್ಯುವಾಗ ಎಸ್ಕೇಪ್ ಆಗಿದ್ದ. 1997ನಲ್ಲಿ ಎಸ್ಕೇಪ್ ಆಗಿದ್ದ ಆರೋಪಿ 2002 ರಲ್ಲಿ ಬೆಂಗಳೂರಿನ ಯಶವಂತಪುರದ ಸಲೂನ್ ಶಾಪ್​ನಲ್ಲಿ ಸಿಕ್ಕಿಬಿದ್ದಿದ್ದ. 1998 ರಲ್ಲಿ ಪೀಣ್ಯಾ ಠಾಣೆ ಇನ್ಸ್​​ಪೆಕ್ಟರ್​ ಆಗಿದ್ದ ಉಮೇಶ್​ ತನಿಖಾಧಿಕಾರಿ ಆಗಿದ್ದರು. ಕಠಿಣ ಸೆಕ್ಷನ್​ಗಳನ್ನು ಹಾಕಿ ಚಾರ್ಜ್​ಶೀಟ್​ ಹಾಕಿದ್ದರ ಪರಿಣಾಮ ಗಲ್ಲು ಶಿಕ್ಷೆಯಾಗಿತ್ತು. ಆದರೆ ಎಂದಿನಿಂದಲೂ ಕಾನೂನು ಸಂಕೋಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುವ ಆರೋಪಿ ಇದೀಗ ಮತ್ತೊಂದು ಅವಕಾಶ ಎದುರು ನೋಡುತ್ತಿದ್ದಾರೆ. ​

Read this also;

ಗಲ್ಲು ಶಿಕ್ಷೆ ಸ್ವಾಗತಿಸಿದ ಗೃಹ ಸಚಿವ..!

ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಪ್ರಕಟವಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವನೊಬ್ಬ ವಿಕೃತ, ಅಮಾನವೀಯ ವ್ಯಕ್ತಿ. ಅವನಿಗೆ ಕೊಟ್ಟಿರುವ ಶಿಕ್ಷೆ ಸ್ವಾಗತಾರ್ಹ ಎಂದಿದ್ದಾರೆ. ಘೋರ ಕೃತ್ಯಗಳನ್ನು ಎಸಗುತ್ತಿದ್ದ. ಆತನಿಂದ ಅನೇಕ ಜನರಿಗೆ ಅಪಾಯವಾಗಿದೆ. ಆತನಿಗೆ ಕೋರ್ಟ್ ನೀಡಿದ ಶಿಕ್ಷೆ ಸ್ವಾಗತಾರ್ಹ ಎಂದಿದ್ದಾರೆ. ಚಿತ್ರದುರ್ಗ ಮೂಲದ ಉಮೇಶ್​ ರೆಡ್ಡಿಗೆ ಇದೀಗ ಮರಣದಂನೆ ಮರು ನಿಗದಿ ಆಗಿದ್ದರೂ ಮತ್ತೆ ಸುಪ್ರೀಂಕೋರ್ಟ್​ಗೆ ಹೋಗುವ ಅವಕಾಶವಿದೆ. ನ್ಯಾಯಧೀಶರು ಅಪ್ಪಿತಪ್ಪಿ ಮರು ವಿಚಾರಣೆಗೆ ಸಮ್ಮತಿಸಿಬಿಟ್ಟರೆ ಗಲ್ಲು ಮತ್ತಷ್ಟು ಮುಂದಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ.

Read this also;

‘ಮಾನಸಿಕ ಅಸ್ವಸ್ಥ’ ಗಲ್ಲು ಕುಣಿಕೆ ಅನುಮಾನ..!?

ಸಿಆರ್​ಪಿಎಫ್ ಯೋಧನಾಗಿದ್ದ ಕಾಮುಕ ಉಮೇಶ್​ ರೆಡ್ಡಿ, ಜಮ್ಮು ಕಾಶ್ಮೀರದಲ್ಲಿ ಕಮಾಂಡರ್​​ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಅಲ್ಲಿಂದ ಓಡಿ ಬಂದಿದ್ದ. ಆ ಬಳಿಕ ಜಿಲ್ಲಾ ಶಸಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್​ ಪೇದೆಯಾಗಿ ಕೆಲಸ ಮಾಡಿದ್ದು, ಒಂಟಿ ಮಹಿಳೆಯರನ್ನು ಅತ್ಯಾಚಾರ ಮಾಡೋದು, ಕೊಲೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದ. ಕರ್ನಾಟಕ ಹೈಕೋರ್ಟ್​ ವಿಭಾಗೀಯ ಪೀಠ ಉಮೇಶ್​ ರೆಡ್ಡಿ ಮತ್ತೆ ಸುಪ್ರೀಂಕೋರ್ಟ್​ಗೆ ಹೋಗಲು 6 ವಾರಗಳ ಕಾಲಾವಕಾಶ ನೀಡಿದೆ. ಆದರೆ ಕಳೆದ 10 ವರ್ಷಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಒಂಟಿ ಆಗಿರುವ ಉಮೇಶ್​ ರೆಡ್ಡಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎನ್ನಲಾಗಿದೆ. ಇದೀಗ ಸುಪ್ರೀಂಕೋರ್ಟ್​ ಮೊರೆ ಹೋಗಲು ವಕೀಲರು ಸಿದ್ಧತೆ ನಡೆಸಿದ್ದು, ಮಾನಸಿಕ ಅಸ್ವಸ್ಥ ಎಂಬುದನ್ನು ಸಾಬೀತು ಮಾಡಿ, ಶಿಕ್ಷೆಯನ್ನು ಪರಿವರ್ತಿಸುವ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ. ಒಟ್ಟಾರೆ, 15 ವರ್ಷಗಳ ಹಿಂದೆ ಗಲ್ಲು ಶಿಕ್ಷೆ ಆಗಿದ್ದರೂ ಕಾನೂನು ಕಣ್ಣಿಗೆ ಮಣ್ಣೆರೆಚುತ್ತಲೇ ಸಾಗಿರುವ ಆರೋಪಿ, ಮತ್ತೆ ನೇಣು ಕುಣಿಕೆಯಿಂದ ತಪ್ಪಿಸಿಕೊಳ್ತಾನಾ..? ಎನ್ನುವ ಕುತೂಹಲ ಮೂಡಿಸಿದೆ.

Related Posts

Don't Miss it !