ಬೆಂಗಳೂರಿಂದ ಒಂದೇ ದಿನ 7 ಮಕ್ಕಳು ನಾಪತ್ತೆ ? ಖದೀಮರು ಯಾರು..?

ಬೆಂಗಳೂರಿನಲ್ಲ ಜನರು ಬೆಚ್ಚಿ ಬೀಳುವ ಸಂಗತಿ ಶನಿವಾರ ಸಂಜೆ ವೇಳೆಗೆ ಸದ್ದು ಮಾಡಿತ್ತು. ಬೆಂಗಳೂರಿನ ಬಾಗಲೂರು ಹಾಗೂ ಸೋಲದೇವನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಿಂದ ಪ್ರತ್ಯೇಕ 2 ಕೇಸ್​ಗಳಲ್ಲಿ 7 ಮಕ್ಕಳು ನಾಪತ್ತೆ ಆಗಿದ್ದಾರೆ ಎನ್ನುವ ಸುದ್ದಿಗಳು ಬಂದವು. ಶುಕ್ರವಾರ ಬೆಳಗ್ಗೆಯೇ ಮನೆ ಬಿಟ್ಟು ಹೋಗಿದ್ದರೂ ಗೌಪ್ಯತೆ ಕಾಪಾಡಿಕೊಂಡಿದ್ದ ಕುಟುಂಬಸ್ಥರು, ಮಕ್ಕಳು ಸಿಗದೆ ಇದ್ದಾಗ ದೂರು ನೀಡುವ ಮನಸ್ಸು ಮಾಡಿದ್ದಾರೆ. ಎರಡು ಪ್ರತ್ಯೇಕ ಮಿಸ್ಸಿಂಗ್​ ಕೇಸ್​ ದಾಖಲಾದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಎರಡೂ ಕುಟುಂಬಗಳನ್ನು ಒಟ್ಟಿಗೆ ಕೂರಿಸಿ ವಿಚಾರಣೆ ಮಾಡಿದ್ದು, ಎಲ್ಲಾ 7 ಮಂದಿ ಮಕ್ಕಳು ಒಟ್ಟಿಗೆ ಹೋಗಿದ್ದಾರಾ..? ಅಥವಾ ಇವೆರಡೂ ಕೇಸ್​ಗಳು ಬೇರೆ ಬೇರೆಯಾಗಿದ್ದು, ಸಮಯ, ದಿನ ಒಂದೇ ಆಗಿರುವುದು ಆಕಸ್ಮಿಕ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಮಕ್ಕಳು ಯಾರು..? ಎಷ್ಟು ವರ್ಷದ ಮಕ್ಕಳು..?

ಬೆಂಗಳೂರಿನ‌ ಸೋಲದೇವನಹಳ್ಳಿ ವ್ಯಾಪ್ತಿಯ ಎಜಿಬಿ ಲೇಔಟ್‌ನ ಕ್ರಿಸ್ಟನ್ ಕುಶಾಲ್ ಅಪಾರ್ಟ್​ಮೆಂಟ್​ನಲ್ಲಿ ಪೋಷಕರೊಂದಿಗೆ ವಾಸವಿದ್ದ 12 ವರ್ಷದ ರಾಯನ್, 12 ವರ್ಷದ ಭೂಮಿ, 14 ವರ್ಷದ ಚಿಂತನ್ ಹಾಗೂ 21 ವರ್ಷದ ವರ್ಷಿಣಿ ನಾಪತ್ತೆ ಆಗಿದ್ದಾರೆ. ಇನ್ನೂ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ, ಒಂದೇ ತರಗತಿ, ಒಂದೇ ಸೆಕ್ಷನ್​ನಲ್ಲಿ ಓದುತ್ತಿದ್ದ ಪರೀಕ್ಷೀತ್, ಕಿರಣ್, ನಂದನ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ವರ್ಷಿಣಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ ಉಳಿದ ಮೂರು ಮಕ್ಕಳು ಪ್ರಾಥಮಿಕ ಶಾಲಾ ಹಂತದಲ್ಲಿ ಕಲಿಯುತ್ತಿದ್ದರು ಎನ್ನಲಾಗಿದೆ. ನಾಲ್ವರು ಅಪಾರ್ಟ್​ಮೆಂಟ್​ ನಿವಾಸಿಗಳು ಆಗಿದ್ದರಿಂದ ಒಟ್ಟಿಗೆ ಆಟವಾಡುತ್ತಿದ್ದರು. ಮನೆ ಬಿಟ್ಟು ಹೋಗುವ ಮುನ್ನ ತಯಾರಿ ಮಾಡಿಕೊಂಡಿದ್ದು, ಚಪ್ಪಲಿ, ವಾಟರ್​ ಬಾಟೆಲ್, ಪೇಸ್ಟ್​, ಟೂತ್​ ಬ್ರಷ್ ಎಂದು ಬರೆದಿರುವ ಚೀಟಿ ನಾಲ್ವರ ಟೀಂ ಮಕ್ಕಳ ಮನೆಯಲ್ಲಿ ಸಿಕ್ಕಿದೆ.

Read this also;

ಕಬಡ್ಡಿ ಆಟಕ್ಕಾಗಿ ಮನೆಯನ್ನೇ ಬಿಟ್ಟರಾ ಮಕ್ಕಳು..?

ಬಾಲಕ ಪರೀಕ್ಷಿತ್​ ತಂದೆ ಹೇಳುವ ಪ್ರಕಾರ, ಮಗ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸುತ್ತಿದ್ದನು. ನಾವು ಓದುವಂತೆ ಒತ್ತಡ ಹೇರುತ್ತಿರಲಿಲ್ಲ ಎಂದಿದ್ದಾರೆ. ಆದರೆ ಮೂರು ಮಕ್ಕಳ ಮನೆಯಲ್ಲೂ ಪತ್ರಗಳು ಸಿಕ್ಕಿದ್ದು, ನಮಗೆ ಕಬಡ್ಡಿ ಆಟದಲ್ಲಿ ಆಸಕ್ತಿ ಹೆಚ್ಚು. ನಮ್ಮ ಆಟಕ್ಕೆ ಓದು ಅಡ್ಡಿಯಾಗುತ್ತಿದೆ. ನಾವು ಕಬಡ್ಡಿಯಲ್ಲಿ ಸಾಧನೆ ಮಾಡಿ, ಹಣ ಗಳಿಸಿ ಮತ್ತೆ ವಾಪಸ್​ ಆಗುತ್ತೇವೆ. ನಮ್ಮನ್ನು ಹುಡುಕಬೇಡಿ ಎಂದು ಬರೆದಿದ್ದಾರೆ. ಆ ನಾಲ್ವರು ಮಕ್ಕಳು ಟ್ರಕ್ಕಿಂಗ್​ಗೆ ಬೇಕಾದ ವಸ್ತುಗಳನ್ನು ಬರೆದಿರುವ ಕಾರಣ ಪಿಕ್ನಿಕ್​ಗೆ ಹೋಗಿರಬಹುದು ಎಂದು ಶಂಕಿಸಲಾಗಿದೆ. ಈಗಾಗಲೇ ಈ ಬಗ್ಗೆ ಪೊಲೀಸರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು ನಾಲ್ಕು ತಂಡಗಳನ್ನ ರಚಿಸಲಾಗಿದೆ. ಮುಂಬೈ, ಪುಣೆ, ಗೋವಾಗೂ ತನಿಖಾ ತಂಡ ಕಳುಹಿಸಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡುತ್ತಿದ್ದಾರೆ. ಆದರೆ ಇವರೆಲ್ಲಾ ಒಟ್ಟಿಗೆ ಹೋಗಿದ್ದಾರಾ..? ಅಥವಾ ಯಾರಾದರೂ ಪ್ಲ್ಯಾನ್​ ಮಾಡಿ ಮಕ್ಕಳನ್ನು ಕರೆದೊಯ್ದಿದ್ದಾರಾ..? ಎನ್ನುವ ಬಗ್ಗೆಯೂ ಅನುಮಾನಗಳು ಸೃಷ್ಟಿಯಾಗಿವೆ.

Read this also;

ಅಕ್ಕ ಪಕ್ಕದ ಏರಿಯಾ..? ಬೇರೆ ಬೇರೆ ರೀತಿ ಪತ್ರ..!

ಮಕ್ಕಳು ಒಂದೇ ದಿನ ಅಕ್ಕಪಕ್ಕದ ಏರಿಯಾಗಳಿಂದ ಈ ರೀತಿ ಹೋಗಿರುವುದನ್ನು ಗಮನಸಿದಾಗ ಎಲ್ಲರೂ ಒಟ್ಟಾಗಿ ಹೋಗಿದ್ದಾರೆ ಎಂದು ಊಹಿಸುವುದು ಸಾಮಾನ್ಯ. ಆದರೆ ಪೊಲೀಸರಿಗೆ ಇಲ್ಲೀವರೆಗೂ ಈ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ನಾಲ್ಕು ಮತ್ತು ಮೂವರು ಪ್ರತ್ಯೇಕವಾಗಿಯೇ ಮನೆಯಿಂದ ಹೋಗಿದ್ದಾರೆ ಎನ್ನಲಾಗಿದೆ. ಎಲ್ಲರೂ ವಾಕಿಂಗ್​ಗೆ ತೆರಳಿದಾಗಲೇ ಹೋಗಿದ್ದಾರೆ. ಎಲ್ಲರೂ ಮನೆಯಿಂದ ಹೊರಡುವ ಮುನ್ನ ಪತ್ರಗಳನ್ನು ಬರೆದಿಟ್ಟಿದ್ದಾರೆ. ಇದರಲ್ಲಿ ಯಾರದ್ದೋ ಕೈವಾಡ ಇರುವ ವಾಸನೆಯೂ ಖಾಕಿಪಡೆಯನ್ನು ತಲುಪಿದೆ. ಯಾರೋ ಉದ್ದೇಶ ಪೂರ್ವಕವಾಗಿ ಮಕ್ಕಳ ಮನಸ್ಸನ್ನು ಡೈವರ್ಟ್​ ಮಾಡಿ, ಇದೇ ರೀತಿ ಪತ್ರಗಳು ಇರಬೇಕು ಎನ್ನುವ ಬಗ್ಗೆ ಮೊದಲೇ ಬರೆಸಿ, ಮನೆಯಲ್ಲಿಟ್ಟು ಮಕ್ಕಳನ್ನು ಅಪಹರಿಸಿರುವ ಸಾಧ್ಯತೆಗಳೂ ಇವೆ. ಪೊಲೀಸರು ಸ್ವಲ್ಪ ಎಚ್ಚರಿಕೆ ವಹಿಸಿ ತನಿಖೆ ಮಾಡುವ ಅಗತ್ಯವಿದೆ.

Related Posts

Don't Miss it !