ಗ್ಯಾಸ್​​ ಗೀಸರ್​​ನಿಂದ ತಾಯಿ ಮಗಳ ಸಾವು..! ಸರ್ಕಾರವೇ ಕಾರಣ..!!

ಬೆಂಗಳೂರಿನಲ್ಲಿ ತಾಯಿ ಮಗಳ ದುರ್ಮರಣ ಹೊಂದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಭಾನುವಾರದ ಸ್ನಾನ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ 35 ವರ್ಷದ ತಾಯಿ ಮಂಗಳ ಹಾಗೂ 7 ವರ್ಷದ ಗೌತಮಿ ಮೃತ ದುರ್ದೈವಿಗಳು.

ರಾಮನಗರದಿಂದ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದ ಕುಟುಂಬ ಚಿಕ್ಕಬಾಣಾವರದಲ್ಲಿ ವಾಸವಾಗಿತ್ತು. ಭಾನುವಾರ ಕೂಡ ಗಂಡ ಕೆಲಸಕ್ಕೆ ಹೋಗಿದ್ದಾಗ ಮಗಳಿಗೆ ಸ್ನಾನ ಮಾಡಿಸಲು ಹೋದಾಗ ಸಾವು ಸಂಭವಿಸಿದೆ.

ಭಾನುವಾರ ಗಂಡ ನರಸಿಂಹ ಮೂರ್ತಿ ಕೆಲಸಕ್ಕೆ ಹೋಗಿದ್ದರು. ಆ ಬಳಿಕ 7 ವರ್ಷದ ಮಗಳನ್ನು ಸ್ನಾನ ಮಾಡಿಸುವ ಉದ್ದೆಸದಿಂದ ಮಂಗಳಾ ಗೌತಮಿ ಜೊತೆಗೆ ಸ್ನಾನದ ಮನೆಗೆ ಹೋಗಿದ್ದರು. ಆದರೆ ಗ್ಯಾಸ್​​ ಗೀಸರ್​ನಲ್ಲಿ ಗ್ಯಾಸ್​ ಉರಿದ ಬಳಿಕ ಬಿಡುಗಡೆ ಆಗುವ ಕಾರ್ಬನ್​ ಮೊನಾಕ್ಸೈಡ್​​ ಅಮ್ಮ, ಮಗಳ ಸಾವಿಗೆ ಕಾರಣವಾಗಿದೆ.

ಮೃತರು ರಾಮನಗರ ಮೂಲದವರಾಗಿದ್ದು, 15 ವರ್ಷದ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ದಿನನಿತ್ಯದಂತೆ ಪತಿ ನರಸಿಂಹಮೂರ್ತಿ ಕೆಲಸಕ್ಕೆ ಹೋದ ಬಳಿಕ ಮನೆ ಮಾಲೀಕರಾದ ಗಾಯತ್ರಿ ಮನೆ ಬಳಿಗೆ ಬಂದಿದ್ದರು. ಮನೆ ಬಾಗಿಲು ತೆಗೆದು ಒಳಕ್ಕೆ ಹೋದಾಗ ಸ್ನಾನದ ಮನೆ ಬಾಗಿಲು ಮುಚ್ಚಿತ್ತು. ಬಾಗಿಲು ಒಡೆದು ನೋಡಿದಾಗ ಸಾವು ಸಂಭವಿಸಿದ್ದು ಗೊತ್ತಾಗಿದೆ.

ಗ್ಯಾಸ್​ ಗೀಸರ್​ನಿಂದ ಬೆಂಗಳೂರಿನಲ್ಲಿ ನಿರಂತರ ಸಾವುಗಳು ಸಂಭವಿಸುತ್ತಿವೆ. ಇದಕ್ಕೆಲ್ಲಾ ಮೂಲ ಕಾರಣ ಗ್ಯಾಸ್​ ಗೀಸರ್​ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದು, ಪೊಲೀಸರು ಆಕಸ್ಮಿಕ ಸಾವು ಎಂದು ಕೇಸ್​ ಬುಕ್​ ಮಾಡಿ ಸಾವಿನ ಪ್ರಕರಣವನ್ನೇ ಮುಚ್ಚಿ ಹಾಕುತ್ತಿದ್ದಾರೆ ಎನಿಸುತ್ತದೆ.

ಗ್ಯಾಸ್​ ಗೀಸರ್​ ಕಂಪನಿ ಮೇಲೆ ಕೇಸ್​ ಬುಕ್​ ಮಾಡುವ ಮೂಲಕ ಈ ಸಾವಿನ ಸರಣಿಗೆ ಬ್ರೇಕ್​ ಹಾಕಬೇಕಿದೆ. ಗ್ಯಾಸ್ ಗೀಸರ್​ ಕಂಪನಿಗಳು ತಯಾರು ಮಾಡಿ ಮಾರಾಟ ಮಾಡುತ್ತಿವೆ. ಆದರೆ ಗ್ಯಾಸ್​ ಗೀಸರ್​ನಿಂದ ಆಗುವ ಅನಾಹುತಗಳ ಬಗ್ಗೆ ಯಾವುದೇ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಗ್ಯಾಸ್​ ಗೀಸರ್​ ಕಂಪನಿಗಳ ಮೇಲೆ ದೂರು ದಾಖಲಿಸಬೇಕಿದೆ.

ಗ್ಯಾಸ್​ ಗೀಸರ್​ ಅಪಯಾಕಾರಿ ಎನ್ನುವುದನ್ನು ಜನರು ಮನಗಾಣಬೇಕಿದೆ. ಗ್ಯಾಸ್​ ಗೀಸರ್​ ಅಳವಡಿಸುವ ಮುನ್ನ ಸ್ನಾನದ ಮನೆಗೆ ಗಾಳಿ ಬೆಳೆಕು ಸರಾಗವಾಗಿ ಬರುತ್ತಿದೆಯೇ ಎನ್ನುವುದನ್ನ ಖಚಿತಪಡಿಸಿಕೊಳ್ಳಬೇಕು. ಗ್ಯಾಸ್​ ಗೀಸರ್​​ ಅಳವಡಿಸುವ ಮುನ್ನ ಈ ಎಲ್ಲಾ ವಿಚಾರಗಳ ಖಚಿತಪಡಿಸಿಕೊಂಡು ಮಾರಾಟ ಮಾಡಬೇಕು. ಈ ಬಗ್ಗೆ ಸರ್ಕಾರವೇ ನಿಯಮವೊಂದನ್ನು ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಸರಣಿ ಸಾವಿಗೆ ತಡೆ ಒಡ್ಡುವುದು ಅಸಾಧ್ಯ.

Related Posts

Don't Miss it !