ಬಾಲಿವುಡ್​ ನಟ ಶಾರುಖ್​ ಪುತ್ರ ಡ್ರಗ್ಸ್​ ಕೇಸ್​ನಲ್ಲಿ ವಶ..! ಹಡಗಿನಲ್ಲಿ ನಡೀತಿತ್ತು ರೇವ್​ ಪಾರ್ಟಿ..

ಮಹಾರಾಷ್ಟ್ರದ ಮುಂಬೈ ಸಮುದ್ರ ಮಧ್ಯೆ ತೆರಳುತ್ತಿದ್ದ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಆಯೋಜನೆ ಮೇಲೆ ಎನ್​ಸಿಬಿ ಅಧಿಕಾರಿಗಳು ನಿನ್ನೆ ರಾತ್ರಿ ದಾಳಿ ಮಾಡಿ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಂಧಿ ಜಯಂತಿಯಂದು ಹೈಪ್ರೊಫೈಲ್ ಡ್ರಗ್ ಪಾರ್ಟಿ ಆಯೋಜನೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದ ಎನ್​​ಸಿಬಿ ಅಧಿಕಾರಿಗಳು ಪ್ರಯಾಣಿಕರ ಸೋಗಿನಲ್ಲಿ ಹಡಗಿನಲ್ಲಿ ಹಾಜರಾಗಿದ್ದರು ಎನ್ನಲಾಗಿದೆ. ಮುಂಬೈನಿಂದ ಗೋವಾ ಕಡೆಗೆ ಹೊರಟಿದ್ದ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಶುರುವಾಗುತ್ತಿದ್ದ ಹಾಗೆ ಅಖಾಡಕ್ಕೆ ಇಳಿದ ಎನ್​ಸಿಬಿ ಅಧಿಕಾರಿಗಳು ಕೊಕೇನ್ ಸೇರಿ ಮಾದಕ ವಸ್ತು ಜೊತೆಗೆ ಬಾಲಿವುಡ್ ನಟನ ಮಗ ಸೇರಿ 10 ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ನಟ ಶಾರೂಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಸುತ್ತಿಕೊಳ್ಳುತ್ತಿದೆ.

ಬಾದ್​​ಶಾ ಪುತ್ರನಿಗೂ ಡ್ರಗ್ಸ್​ಗೂ ಇದ್ಯಂತೆ ನಂಟು..!

ಮುಂಬೈ ಸಮುದ್ರದಲ್ಲಿ ಕ್ರೂಸ್​ ಶಿಪ್​ನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿದ್ದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರ್ಯನ್​ ವಶಕ್ಕೆ ಪಡೆಯಲಾಗಿದೆ. Narcotics Control Bureau (NCB) ಅಧಿಕಾರಿಗಳು ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ‌ ಆರ್ಯನ್ ಖಾನ್ ಬಂಧನ‌ ಮಾಡಲಿದ್ದಾರೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ. ಆರ್ಯನ್ ಖಾನ್ ಬಗ್ಗೆ NCBಗೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ನಿರಂತರವಾಗಿ ಡ್ರಗ್ಸ್ ಬುಕ್ ಮಾಡುತ್ತಿದ್ದ ಎನ್ನಲಾಗಿದೆ. NCB ಜೋನಲ್​ ಡೈರೆಕ್ಟರ್​ ಸಮೀರ್​ ವಾಂಕೆಡೆ ಮಾಹಿತಿ ಪ್ರಕಾರ, ಶಾರೂಖ್​ ಪುತ್ರನನ್ನು ಇಲ್ಲೀವರೆಗೂ ಅರೆಸ್ಟ್​ ಮಾಡಿಲ್ಲ, ಯಾವುದೇ ಕೇಸ್​ ಬುಕ್​ ಮಾಡಿಲ್ಲ. ಆದರೆ ವಿಚಾರಣೆ ನಡೆಸಲು ಕರೆತಂದಿರುವುದಾಗಿ ತಿಳಿಸಿದ್ದಾರೆ.

Read this Also;

https://twitter.com/CNNnews18/status/1444557209296203776

ಮಕ್ಕಳ ಮೇಲೆ ನಿಯಂತ್ರಣವಿಲ್ಲದ ಪೋಷಕರು..!

ಸ್ಟಾರ್​ ನಟ, ನಟಿಯರು ಅಷ್ಟೇ ಅಲ್ಲದೆ ಶ್ರೀಮಂತರಿಗೆ ಮಕ್ಕಳ ಮೇಲೆ ಹಿಡಿತ ಇಲ್ಲದೆ ಪೋಷಣೆ ಮಾಡುವುದು ಇಷ್ಟೆಲ್ಲಾ ಅನಾಹುತಗಳಿಗೆ ಸಾಕ್ಷಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೋಟ್ಯಂತರ ರೂಪಾಯಿ ಹಣ ಬಾಲ್ಯದಲ್ಲೇ ಕೈಗೆ ಸಿಗುವ ಕಾರಣ ದುಂದುವೆಚ್ಚದ ಹವ್ಯಾಸಗಳಿಗೆ ದಾಸರಾಗಿ ಬಿಡುತ್ತಾರೆ. ಬೆಳೆದು ದೊಡ್ಡವರಾಗುತ್ತಿದ್ದಾರೆ ಎನ್ನುವಾಗ ತಂದೆ ತಾಯಿ ನಿಯಂತ್ರಣ ಮಾಡಲು ಮುಂದಾದರೂ ಅಷ್ಟರೊಳಗೆ ಕೈಮೀರಿ ಹೋಗಿರುತ್ತದೆ. ಇದು ಶ್ರೀಮಂತರ ಮಕ್ಕಳು ಬಡವರ ಮಕ್ಕಳು ಎನ್ನುವ ಬೇಧ ಭಾವ ಇರುವುದಿಲ್ಲ. ಆದರೆ ಶ್ರೀಮಂತರ ಮಕ್ಕಳು ಐಶಾರಾಮಿ ಡ್ರಗ್ಸ್​, ಹಡಗಿನಲ್ಲಿ ರೇವ್​ ಪಾರ್ಟಿ ಮಾಡುತ್ತಾರೆ. ಬಡವರ ಮಕ್ಕಳು ಆದರೆ ಕುಡಿತ, ತಂಬಾಕು, ಧೂಮಪಾನದ ದಾಸರಾಗಿ ಕೊನೆಗೆ ಕಳ್ಳತನ ಮಾಡುವ ಮಟ್ಟಕ್ಕೆ ಇಳಿಯುತ್ತಾರೆ. ಮಕ್ಕಳ ಮೇಲೆ ಬಾಲ್ಯದಲ್ಲೇ ಹಿಡಿತ ಸಾಧಿಸುವ ಮೂಲಕ ಮಕ್ಕಳನ್ನು ಸಮಾಜಕ್ಕೆ ಕೊಡುಗೆ ಕೊಡುವುದು ಪೋಷಕರ ಜವಾಬ್ದಾರಿ. ಆ ಹೊಣೆಗಾರಿಯನ್ನು ಯಾರು ಮರೆಯುತ್ತಾರೋ ಅವರ ಮಕ್ಕಳು ಸಮಾಜಕ್ಕೆ ಮಾರಕವಾಗಿ ಮೆರೆಯುತ್ತಾರೆ ಎನ್ನುವುದು ಸತ್ಯ.

Read this also;

ಗುಜರಾತ್​ನಲ್ಲಿ ಟನ್​ಗಟ್ಟಲೆ ಸಿಕ್ಕ ಡ್ರಗ್ಸ್​ ಏನಾಯ್ತು..?

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂದೊಂದೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಲೇ ಸಾಗಿದೆ. ಅದರಲ್ಲಿ ಒಂದು ಗುಜರಾತ್​ನ ಬಂದರ್​. ಈ ಅದಾನಿ ಬಂದರ್​ಗೆ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್​ ಅಪ್ಘಾನಿಸ್ತಾನದಿಂದ ಬಂದಿತ್ತು. ಇದನ್ನು ಖರೀದಿ ಮಾಡಿದ್ದು ಯಾರು..? ಯಾರಿಗೆ ಸೇರಬೇಕಿತ್ತು ಎನ್ನುವ ಮಾಹಿತಿ ಇಲ್ಲೀವರೆಗೂ ಬಹಿರಂಗವಾಗಿಲ್ಲ. ಕಾಂಗ್ರೆಸ್​ ಕೂಡ ಈ ಬಗ್ಗೆ ನರೇಂದ್ರ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದು, ಈ ಪ್ರಕರಣದಲ್ಲಿ ಮೌನ ಮುರಿಯಬೇಕು, 2990 ಕೆಜಿ ಹೆರಾಯಿನ್​ ಯಾರದ್ದು ಎನ್ನುವ ಬಗ್ಗೆ ಸುಪ್ರೀಂಕೋರ್ಟ್​ನ ಹಾಕಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಭಾರತಕ್ಕೆ ಬರುತ್ತದೆ ಎಂದರೆ ಬೃಹತ್​ ಉದ್ಯಮಿಗಳೇ ಪಾಲುದಾರರು ಆಗಿದ್ದಿರಬಹುದು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುವ ಸತ್ಯ. ಆದರೆ ಈ ಬಗ್ಗೆ ಬಿಜೆಪಿ ಆಗಲಿ, ಕೇಂದ್ರ ಸರ್ಕಾರವಾಗಲಿ ಎಲ್ಲೂ ತುಟಿ ಬಿಚ್ಚುವ ಕೆಲಸ ಮಾಡ್ತಿಲ್ಲ ಎನ್ನುವುದೇ ದೇಶದ ದುರ್ದೈವ.

Related Posts

Don't Miss it !