ಸಂವಿಧಾನ ಬಲ್ಲವರಿಗೆ ಇಷ್ಟು ಜ್ಞಾನ ಇಲ್ಲವೇ..? ಸಿದ್ದುಗೆ ಗುದ್ದು ಕೊಟ್ಟ HDK..!

ಜಾತಿ ಸಮೀಕ್ಷೆಯನ್ನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಒಪ್ಪಿಕೊಳ್ಳಲಿಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಕುಮಾರಸ್ವಾಮಿ ತಿರುಗಿ ಬಿದ್ದಿದ್ದಾರೆ. ಟ್ವೀಟ್​ ಮೂಲಕ ವಾಗ್ದಾಳಿ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಪ್ರತಿ ಬಾರಿ ಚುನಾವಣೆ ಬಂದಾಗ ಯಾವುದೋ ಒಂದು ವಿಷಯದ ಆಯ್ಕೆ ಮಾಡಿಕೊಂಡು ಪ್ರಚಾರ ಗಿಟ್ಟಿಸುವುದು ಸರಿಯಲ್ಲ. ಅಧಿಕಾರ ಇದ್ದಾಗಲೇ ಸಲ್ಲಿಕೆಯಾಗಿದ್ದ ಜಾತಿ ವರದಿಯನ್ನು ಬಿಡುಗಡೆ ಮಾಡಲು ನಿರ್ಲಕ್ಷ್ಯ ತೋರಿದ್ದು ಯಾಕೆ..? ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಕುದುರೆ ಇದ್ದಾಗಲೇ ಏರಲಿಲ್ಲ, ಇನ್ನೊಬ್ಬರು ಕುದುರೆ ಮೇಲಿದ್ದಾಗ ಅವರನ್ನು ಕೆಳಕ್ಕೆ ಕೆಡವಲು ಯಾಕೆ ಈ ಕೆಟ್ಟ ಉತ್ಸಾಹ..? ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರ ಕೆಡವಿದ ಬಗ್ಗೆ ಲೇವಡಿ ಮಾಡಿದ್ದಾರೆ.

 ರಾಜಕಾರಣದಲ್ಲಿ ಕ್ಷಣಕ್ಕೊಂದು ಬಣ್ಣ ಬದಲಿಸಿಕೊಂಡು ಓಡಾಡುವವರ ಬಗ್ಗೆ ನನಗೆ ಗೊತ್ತಿದೆ. ಇವರು ರಾಜಕೀಯ ಊಸರವಳ್ಳಿಗಳು, ಜನರ ಪಾಲಿನ ಮಗ್ಗುಲ ಮುಳ್ಳುಗಳು. ಮುಳ್ಳನ್ನು ಹೇಗೆ ತೆಗೆಯಬೇಕು ಎಂಬುದು ಜನರಿಗೆ ಗೊತ್ತಿದೆ. ಆ ಕಾಲವೂ ಹತ್ತಿರದಲ್ಲೇ ಇದೆ. ಇವರು ಅಧಿಕಾರದಲ್ಲಿ ಇದ್ದಾಗಲೇ ಕಾಂತರಾಜು ಆಯೋಗದ ವರದಿಯೂ ಬಂದಿತ್ತು. ಆಗಲೇ ಜಾತಿ ಸಮೀಕ್ಷೆಯ ವರದಿ ಅಂಗೀಕರಿಸಿ ಬಿಡುಗಡೆ ಮಾಡಬಹುದಿತ್ತಲ್ಲವೇ..? ಹಾಗೆ ಮಾಡಲಿಲ್ಲ, ಯಾಕೆ..? ಎಂದು ಪ್ರಶ್ನೆ ಮಾಡಿದ್ದಾರೆ. ತಾವೇ ವರದಿ ಬಿಡುಗಡೆ ಮಾಡಲು ಅವಕಾಶ ಇದ್ದಾಗಲೂ ಬಿಡುಗಡೆ ಮಾಡದೇ ಈಗ ಆಷಾಢಭೂತಿತನ ಪ್ರದರ್ಶನ ಮಾಡುತ್ತಿರುವುದು ಏಕೆ..? ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

Read this also;

ಜನರಿಗೆ ಅರ್ಥವಾಗದು ಎಂಬ ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡುತ್ತಿದ್ದಾರೆ. ಅತಿ ಬುದ್ಧಿವಂತರೆಲ್ಲ ಆಮೇಲೆ ಏನಾದರು ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ಗೊತ್ತಿದೆ. ಸಹಿ ಇಲ್ಲದ ವರದಿ ಸಲ್ಲಿಸಲಾಗಿದೆ ಎಂದು ಈಗಿನ ಸಮಾಜ ಕಲ್ಯಾಣ ಸಚಿವರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ಸಹಿಯೇ ಇಲ್ಲದ ವರದಿ ಅಧಿಕೃತ ವರದಿ ಹೇಗಾಗುತ್ತದೆ..? ಐದು ವರ್ಷ ಆಡಳಿತ ನಡೆಸಿದವರು ಅವರು, ಸಂವಿಧಾನದ ಬಗ್ಗೆ ಹಾದಿ ಬೀದಿಯಲ್ಲಿ ನಿಂತು ಪಾಠ ಮಾಡುವವರಿಗೆ ಈ ಮಟ್ಟಿಗಿನ ಜ್ಞಾನವೂ ಇಲ್ಲವೇ..? ಎಲ್ಲದರಲ್ಲೂ ಸಿದ್ಧಹಸ್ತರಾದರೆ ಉಪಯೋಗವೇನು..? ಸತ್ಯ ಹೇಳುವುದಕ್ಕೂ ಗುಂಡಿಗೆ ಬೇಕು. ಇನ್ನೊಬ್ಬರ ಎದೆಗಾರಿಕೆ ಪ್ರಶ್ನಿಸುವ ಮಹಾನುಭಾವರು. ತಮ್ಮ ಅವಧಿಯಲ್ಲಿ ಈ ವರದಿನ್ನ ಏಕೆ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದರು..? ಎನ್ನುವುದನ್ನ ಹೇಳಲಿ ಎಂದು ಕೆಣಕಿದ್ದಾರೆ.

Read this also;

ಸಹಿ ಇಲ್ಲದ ಕಾಗದ ಪತ್ರಕ್ಕೆ ಬೆಲೆ ಇಲ್ಲ. ಅಪ್ಪ ಅಮ್ಮನಿಲ್ಲದ ಕೂಸು ಅನಾಥ. ಸಹಿ ಇಲ್ಲದ ವರದಿ ಸ್ವೀಕಾರ ಮಾಡಿ, ಅಧಿಕಾರದಲ್ಲಿ ಇದ್ದಾಗ ಸುಮ್ಮನಿದ್ದು, ಈಗ ಹಾಹಾಕಾರ ಮಾಡಿದರೇನು ಪ್ರಯೋಜನ..? ಊಸರವಳ್ಳಿ ಉಸಾಬರಿ ಎಂದರೆ ಇದೇ ಇರಬೇಕು ಎಂದು ಸಿದ್ದರಾಮಯ್ಯ ಬಗ್ಗೆಯೇ ನೇರವಾಗಿ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗಲೇ ವರದಿ ಬಂದಿತ್ತು. ಸಿದ್ದರಾಮಯ್ಯ ಮಾತ್ರ ವರದಿ ಒಪ್ಪಿಕೊಳ್ಳಲಿಲ್ಲ. ಸಮ್ಮಿಶ್ರ ಸರ್ಕಾರ ಬಂದ ಬಳಿಕ ಒಪ್ಪಿಕೊಳ್ಳಲಿಲ್ಲ ಎನ್ನುವ ಸಿದ್ದರಾಮಯ್ಯಗೆ ಸಹಿ ಇಲ್ಲದ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಗೊತ್ತಿಲ್ಲವೇ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಸಿದ್ದರಾಮಯ್ಯ ಕುಮಾರಸ್ವಾಮಿ ಪ್ರಶ್ನೆಗಳಿಗೆ ಒತ್ತರ ಕೊಡಬೇಕಿದೆ. ಸತ್ಯವನ್ನು ಒಪ್ಪಿಕೊಳ್ಳುವ ಎದೆಗಾರಿಕೆ ಇರಬೇಕು ಎಂದಿದ್ದಾರೆ. ಇದೀಗ ಸಿದ್ದರಾಮಯ್ಯ ಮತ್ತೆ ವರದಿ ಅಪೂರ್ಣವಾಗಿತ್ತು ಎಂದು ಮತ್ತೆ ಅದನ್ನೇ ಹೇಳ್ತಾರೋ..? ಅಥವಾ ವರದಿ ಬಂದಿದ್ದ ಬಗ್ಗೆ ಒಪ್ಪಿಕೊಳ್ತಾರಾ..? ಕಾದು ನೋಡಬೇಕು.

Related Posts

Don't Miss it !