ದೆಹಲಿಯಲ್ಲಿ ರಾಯಣ್ಣನ ಪ್ರತಿಮೆ ನಿರ್ಮಾಣ..! ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ..!

ಭಾರತದ 75ನೇ ಸ್ವಾತಂತ್ರ್ಯೋತ್ಸವ ಸಂಧರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಹೆಸರು ನೆನಪು ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ, ಕೆಚ್ಚೆದೆಯ ಸೈನಿಕನಾಗಿದ್ದ ಸಂಗೊಳ್ಳಿ ರಾಯಣ್ಣನ ಜನುಮ ದಿನ ಇಂದು. ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಅರಸು ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗ ಜನುಮ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧಿಕೃತವಾಗಿ ಸಂಗೊಳ್ಳಿ ರಾಯಣ್ಣ ಜನ್ಮದಿನವನ್ನು ಸರ್ಕಾರ ಆರಂಭಿಸಿದೆ. ಈ ವೇಳೆ ಮಾತನಾಡಿರುವ ಕನಕಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾತನ ಹೆಸರು ರಾಯಪ್ಪ. ರಾಯಪ್ಪನ ಮೊಮ್ಮಗನಿಂದ ರಾಯಣ್ಣನ ಜಯಂತಿ ಮಾಡಬೇಕಾಯಿತು. ಕನಕ ಜಯಂತಿ ಆರಂಭಿಸಿದ್ದು ಸಿದ್ದರಾಮಯ್ಯ, ರಾಯಣ್ಣ ಜಯಂತಿ ಆರಂಭಿಸಿದ್ದು ಬಸವರಾಜ ಬೊಮ್ಮಾಯಿ ಎಂದರು. ಬಸವರಾಜ ಬೊಮ್ಮಾಯಿ ಇನ್ನಷ್ಟು ಉತ್ತಮ ಕಾರ್ಯ ಮಾಡಲಿ ಎಂದು ಹಾರೈಸಿದ್ರು.

ರಾಯಣ್ಣನಿಗೆ ಮೋಸ ಮಾಡಿದ ಕುಟುಂಬಕ್ಕೆ ಶಾಪ..!

ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಂಗೊಳ್ಳಿ ರಾಯಣ್ಣ ಎಂದರೆ ಕೂದಲು ನೆಟ್ಟಗಾಗುತ್ತವೆ. ವೀರ, ಧೀರ, ಶೂರನ ಚರಿತ್ರೆ ರೋಮಾಂಚನ ಎಂದರು. ಶತಮಾನದ ಯುಗಪುರುಷ, ಅಪರೂಪದ ಶಕ್ತಿವಂತ ಎಂದು ಬಣ್ಣಿಸಿದರಲ್ಲದೆ, ಸಿಪಾಯಿ ದಂಗೆ 1857ರಲ್ಲಿ ನಡೆಯಿತು. ಭಾರತದ ಪ್ರಥಮ ಮಹಿಳಾ ಹೋರಾಟಗಾರ್ತಿ ಝಾನ್ಸಿ ಎಂದು ಬರೆದಿದ್ದಾರೆ. ಆದರೆ ಸಿಪಾಯಿ ದಂಗೆ ನಡೆಯುವ 40 ವರ್ಷಕ್ಕೂ ಮೊದಲೇ ಯುದ್ಧ ಮಾಡಿದ್ದರು. ಬ್ರಿಟೀಷ್ ಹೈಕಮಿಷನರ್ ಥ್ಯಾಕರೆಯನ್ನು ಕೊಂದರು. ಬ್ರಿಟೀಷರ ವಿರುದ್ಧ ಯುದ್ಧ ಸಾರಿದ್ದರು. ಕಿತ್ತೂರು ರಕ್ಷಣೆಗೆ ಮಾದರಿ ಹೋರಾಟ ನಡೆಸಿದರು. ಎಂದಿದ್ದಾರೆ. ಇನ್ನೂ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ತಾಯಿ ಮಗನಂತಿದ್ದರು.ಸಂಗೊಳ್ಳಿ ರಾಯಣ್ಣ ಇಲ್ಲದೇ ಯಾವ ತೀರ್ಮಾನ ಮಾಡುತ್ತಿರಲಿಲ್ಲ. ಕಿತ್ತೂರಿನ ಕೀರ್ತಿ‌ ಸಂಗೊಳ್ಳಿ ರಾಯಣ್ಣ ಎಂದಿದ್ದಾರೆ.

ಇದನ್ನೂ ಓದಿ:

ಬ್ರಿಟೀಷರ ವಿರುದ್ಧದ ಯುದ್ಧದ ವೇಳೆ ಮದ್ದು ಗುಂಡು ಸಿಡಿಯದಂತೆ ಸಗಣಿ ನೀರು ಹಾಕಲಾಯಿತು. ಕಿತ್ತೂರು ರಾಣಿಯನ್ನು ಬ್ರಿಟಿಷರು ಸೆರೆಹಿಡಿದರು. ಆದರೆ ಸಂಗೊಳ್ಳಿ ರಾಯಣ್ಣ ಮಾತ್ರ ಬ್ರಿಟೀಷರಿಗೆ ಸಿಕ್ಕಿರಲಿಲ್ಲ. ಆದರೆ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನನ್ನು ಬ್ರಿಟೀಷರು ಮೋಸದಿಂದ ಸೆರೆ ಹಿಡಿದರು. ಸಂಗೊಳ್ಳಿ ರಾಯಣ್ಣನಿಗೆ ಮೋಸ ಮಾಡಿ ಸೆರೆ ಸಿಗಲು ಬ್ರಿಟೀಷರಿಗೆ ಸಹಾಯ ಮಾಡಿದ ಕುಟುಂಬಕ್ಕೆ ಈಗಲೂ ಶಾಪ ಇದೆ. ಬೆಳಗ್ಗೆ ಮಾಡಿದ ಅನ್ನ ಸಂಜೆ ವೇಳೆಗೆ ಹುಳವಾಗುತ್ತದೆ. ಅಷ್ಟು ಸಾತ್ವಿಕ ಶಾಪ ಅವರ ಮೇಲಿದೆ ಎಂದು ತಿಳಿಸಿದ್ರು. ಇನ್ನು ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಯಿತು. ಈ ವೇಳೆ ಇಡೀ ನಾಡು ಕಣ್ಣೀರು ಹಾಕುತ್ತಿತ್ತು. ಈ ಭೂಮಿ ಮೇಲೆ ಮತ್ತೆ ಹುಟ್ಟಿ ಬರ್ತಿನಿ ಅಂತಾ ರಾಯಣ್ಣ ಹೇಳಿದ್ದ. ಅವನ ತಾಯಿ ಕೂಡ ಅದೇ ಮಾತು ಹೇಳಿದ್ದಳು. ಅವನ ಶೂರತ್ವ, ಧೀರತನ ನಮ್ಮ ಮಣ್ಣಿನಲ್ಲಿದೆ ಎಂದಿದ್ದಾರೆ. ರಾಯಣ್ಣನನ್ನು ಗಲ್ಲಿಗೇರಿಸಿದ ನಂದಗಡದ ಸೈನಿಕ ಶಾಲೆ ಅಭಿವೃದ್ಧಿ ಮಾಡುತ್ತಿದ್ದೇವೆ. ಈ ಹಿಂದೆ 80 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈಗ ಮತ್ತಷ್ಟು ವೇಗ ಕೊಟ್ಟು ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ದೇಶ ಕಾಯುವ ಸೈನಿಕರನ್ನು ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:

ದೆಹಲಿಯಲ್ಲಿ ರಾಯಣ್ಣನ ಮೂರ್ತಿ ಸ್ಥಾಪನೆ..!

ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುವ ವಿಚಾರ ಕೇಳಿ ಬರುತ್ತಿದೆ. ನಾನು ದೆಹಲಿಗೆ ಭೇಟಿ ಕೊಟ್ಟ ವೇಳೆ ಈ ಬಗ್ಗೆ ಅಲ್ಲಿನ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ. ಎಲ್ಲರೂ ಭೇಟಿ ನೀಡುವ ಸ್ಥಳದಲ್ಲಿಯೇ ರಾಯಣ್ಣನ ಪ್ರತಿಮೆ ಮಾಡೋಣ ಎಂದು ಘೋಷಿಸಿದರು. ರಾಯಣ್ಣನ ಪ್ರತಿಮೆ ನಿರ್ಮಾಣ ಮಾಡುವುದಕ್ಕಾಗಿ ನಾನು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ ಎನ್ನುವ ಮೂಲಕ ದೆಹಲಿಯಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಶಂಖನಾಧ ಮಾಡಿದ್ದಾರೆ. ಇನ್ನೂ ಸರ್ಕಾರಿ ಕಾರ್ಯಕ್ರಮದಲ್ಲಿ ಉಡುಗೊರೆ ಕೊಡುವಂತಿಲ್ಲ ಎಂದು ಸಿಎಂ ಸೂಚನೆ ನೀಡಿದ್ದರೂ ಸಚಿವ ಎಂಟಿಬಿ ನಾಗರಾಜ್​, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಂಬಳಿ ಹೊದಿಸಿ, ಬೆಳ್ಳಿಯ ಗಧೆ ಕೊಟ್ಟು ಸ್ವಾಗತ ಮಾಡಲಾಯ್ತು. 224ನೇ ರಾಯಣ್ಣ ಜಯಂತಿ ಈ ಬಾರಿ ಅದ್ಧೂರಿಯಾಗಿ ನೆರವೇರಿತು.

Related Posts

Don't Miss it !