RTI ಕಾರ್ಯಕರ್ತನ ಹತ್ಯೆ ಕೇಸ್​ನಲ್ಲಿ ಮಾಜಿ ಮಿನಿಸ್ಟರ್​ ಪುತ್ರನ ಹೆಸರು..!

P.T Parameswar Son P.T Bharath

ಗುರುವಾರ ಸಂಜೆ ಬೆಂಗಳೂರಿನ ಕೂಗಳತೆ ದೂರದ ತಾವರಕೆರೆಯಲ್ಲಿ ಆರ್​ಟಿಐ ಕಾರ್ಯಕರ್ತ ವೆಂಕಟೇಶ್​ ಕೈ ಕಾಲು ಕತ್ತರಿಸಿದ್ರು. ಅದೇ ದಿನ ಸಂಜೆ ಹರಪನಹಳ್ಳಿಯಲ್ಲಿ RTI ಕಾರ್ಯಕರ್ತ ಟಿ. ಶ್ರೀಧರ್ ಎಂಬುವರನ್ನು ಬರ್ಬರ ಹತ್ಯೆ ಮಾಡಲಾಗಿತ್ತು. ನೂತನ ಜಿಲ್ಲೆಯಾದ ವಿಜಯನಗರದ ಹರಪನಹಳ್ಳಿ ಪಟ್ಟಣದಲ್ಲಿ ಘಟನೆ ನಡೆದಿತ್ತು. ಎಡಿಬಿ ಕಾಲೇಜು ಬಳಿ ವಾಕಿಂಗ್​ಗೆ ತೆರಳಿದಾಗ ರಾಡ್​ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರದ ನಿವಾಸಿ ಶ್ರೀಧರ್ ಮೃತ ದುರ್ದೈವಿ. ಹತ್ಯೆ ಮಾಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆಯ ಹಾದಿಯಲ್ಲಿ ಕಾಂಗ್ರೆಸ್​ನ ಮಾಜಿ ಮಿನಿಸ್ಟರ್​ ಪುತ್ರನ ಹೆಸರು ಹಿಡಿದಿದ್ದಾರೆ.

RTI ಕಾರ್ಯಕರ್ತ ಶ್ರೀಧರ್ ಹತ್ಯೆಗೆ ಕೇಸ್​ನಲ್ಲಿ ಟ್ವಿಸ್ಟ್ ಸಿಕ್ಕಿದೆ. ಶ್ರೀಧರ್​ ಹತ್ಯೆ ಕೇಸ್​ನ FIR ನಲ್ಲಿ ಕಾಂಗ್ರೆಸ್​​ನ ಮಾಜಿ ಸಚಿವ ಹಾಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಪುತ್ರ ಭರತ್ ಹೆಸರು ಉಲ್ಲೇಖ ಮಾಡಲಾಗಿದೆ. ಕೇವಲ ನಾಲ್ಕು ದಿನಗಳ ಹಿಂದೆ ಆರ್​ಟಿಐ ಕಾರ್ಯಕರ್ತ ಶ್ರೀಧರ್​ಗೆ ಪಿ.ಟಿ ಪರಮೇಶ್ವರ್​ ನಾಯ್ಕ್​ ಪುತ್ರನ ಕಡೆಯವರು ಬೆದರಿಕೆ ಕರೆ ಮಾಡಿದ್ದರು ಎಂಬ ಬಗ್ಗೆ ಉಲ್ಲೇಖ ಮಾಡಲಾಗಿದೆ. ಕೆಲವು ಕೇಸ್​ಗಳ ವಿಚಾರವಾಗಿ ಶ್ರೀಧರ್​ಗೆ ಬೆದರಿಕೆ ಕರೆ ಮಾಡಿದ್ದರು. ಬೆದರಿಕೆ ಕರೆ ವಿಚಾರವನ್ನ ಪತ್ನಿಯ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.

ಹತ್ಯೆಯಾದ ಆರ್​ಟಿಐ ಕಾರ್ಯಕರ್ತ ಶ್ರೀಧರ್​

ಪಿ.ಟಿ ಪರಮೇಶ್ವರ್​ ಹಾಗೂ ಆತನ ಮಗನ ವಿರುದ್ಧ ಕೇಸ್ ಮಾಡಿದ್ದಕ್ಕೆ ನನಗೆ ಬೆದರಿಕೆ ಇದೆ, ಎಚ್.ಕೆ ಹಾಲೇಶ್ ಅವರ ಕಡೆಯಿಂದ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ತನ್ನ ಗಂಡನಿಗೆ ಬೆದರಿಕೆ ಹಾಕಿದ್ದ ಬಗ್ಗೆ ಪತ್ನಿ ಶಿಲ್ಪಾ ಹೇಳಿಕೆ ಕೊಟ್ಟಿದ್ದಾರೆ. ಇದು FIR ನಲ್ಲಿ ದಾಖಲಾಗಿದೆ. ಬೆದರಿಕೆ ಕರೆ ಬಂದ ನಂತರ ಕೆಲವು ದಿನಗಳ ಕಾಲ ಬಾಗಿಲು ಬೀಗ ಹಾಕಿಕೊಂಡು ಶ್ರೀಧರ್ ಮಲಗುತಿದ್ದರು. ಇದಾದ ಕೆಲವೇ ದಿನಗಳಲ್ಲಿ RTI ಕಾರ್ಯಕರ್ತ ಶ್ರೀಧರ್​ ಹತ್ಯೆನಡೆದಿದೆ. ಈ ಬಗ್ಗೆಯು ತನಿಖೆ ಮಾಡುವಂತೆ ಶ್ರೀಧರ್ ಪತ್ನಿ ದೂರಿನಲ್ಲಿ ಆಗ್ರಹ ಮಾಡಿದ್ದಾರೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, RTI ಕಾರ್ಯಕರ್ತನ ಹತ್ಯೆ ಬಗ್ಗೆ ದಾಖಲಾಗಿರುವ FIR ನಲ್ಲಿ ಪಿ.ಟಿ ಪರಮೇಶ್ವರ್​ ನಾಯ್ಕ್​ ಪುತ್ರನ ಹೆಸರು ಉಲ್ಲೇಖ ಮಾಡಲಾಗಿದೆ.

ಪಿ.ಟಿ ಪರಮೇಶ್ವರ್​ ನಾಯ್ಕ್​ ಪುತ್ರನ ದರ್ಬಾರ್​..!

ಪಿ.ಟಿ ಪರಮೇಶ್ವರ್​ ನಾಯ್ಕ್​ ಪುತ್ರ ಭರತ್​​ ದರ್ಬಾರ್​ ಇಷ್ಟು ಮಾತ್ರವಲ್ಲ. ಕಲ್ಲು ಗಣಿಗಾರಿಕೆ ಬಗ್ಗೆ ಪ್ರಶ್ನಿಸಿದ ರೈತರ ಮೇಲೆ ಪರಮೇಶ್ವರ್​ ನಾಯ್ಕ್​ ಪುತ್ರ ಭರತ್​ ಹಾಗೂ ಸ್ನೇಹಿತರು ಹಲ್ಲೆ ಮಾಡಿದ್ದರು. ಈ ಹಲ್ಲೆ ಮಾಡುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿತ್ತು, ಆ ವಿಡಿಯೋದಲ್ಲಿ ಪಿ.ಟಿ ಪರಮೇಶ್ವರ್​ ನಾಯ್ಕ್​ ಕೂಡ ಇದ್ದರು. ಈ ಘಟನೆ 2019ರಲ್ಲಿ ನಡೆದಿತ್ತು. ಇದೇ 2021ರ ಏಪ್ರಿಲ್​ನಲ್ಲಿ ತನ್ನ ಸ್ವಂತ ಚಿಕ್ಕಪ್ಪ ಶಿವಾಜಿ ನಾಯ್ಕ್​ ಮೇಲೆ ಭರತ್​ ನಾಯ್ಕ್​ ಹಲ್ಲೆ ಮಾಡಿದ್ದರ ಬಗ್ಗೆ ವರದಿಯಾಗಿತ್ತು. ರಾಜಕೀಯ ವೈಷಮ್ಯಕ್ಕೆ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿತ್ತು.

ಬೆಂಗಳೂರಿನ ತಾವರೆಕರೆ ಬಳಿ ನಡೆದಿದ್ದ ಘಟನೆ

ರಾಜ್ಯದಲ್ಲಿ ಒಂದೇ ದಿನ RTI ಕಾರ್ಯಕರ್ತರ ಟಾರ್ಗೆಟ್​..!

ಗುರುವಾರ ಒಂದೇ ದಿನ ಎರಡು ಕಡೆ ಆರ್​ಟಿಐ ಕಾರ್ಯಕರ್ತರ ಮೇಲೆ ದಾಳಿಯಾಗಿದೆ. ವಿಜಯನಗರ ಜಿಲ್ಲೆ ಹರಪ್ಪನಹಳ್ಳಿಯಲ್ಲಿ ಶ್ರೀಧರ್​ ಎಂಬುವರ ಹತ್ಯೆ ನಡೆದಿದೆ. ಇತ್ತ ಬೆಂಗಳೂರಿನ ತಾವರೆಕರೆ ಬಳಿ ಟಿ ವೆಂಕಟೇಶ್​ ಎಂಬ ಆರ್​ಟಿಐ ಕಾರ್ಯಕರ್ತನ ಕೈ ಕಾಲು ಕಟ್ ಮಾಡಿದ್ದಾರೆ. ಎರಡೂ ಘಟನೆಗಳಿಗೂ ಒಬ್ಬರೇ ಕಾರಣವಾ ಎನ್ನುವ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಬೇಕಿದೆ. ಒಂದೇ ದಿನ ಎರಡು ಕಡೆ ಆರ್​ಟಿಐ ಕಾರ್ಯಕರ್ತರ ಮೇಲೆ ದಾಳಿ ನಡೆಯಲು ಏನು ಕಾರಣ..? ಅದೂ ಅಲ್ಲದೆ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ದಾಳಿ ನಡೆದಿದ್ದಕ್ಕೆ ಸಂಬಂಧ ಇದ್ಯಾ ಎನ್ನುವ ಬಗ್ಗೆಯೂ ತನಿಖೆ ನಡೆಯಬೇಕಿದೆ.

Related Posts

Don't Miss it !