ರಾಮಸೇನೆ ಜಿಲ್ಲಾಧ್ಯಕ್ಷನ ಎಡವಟ್ಟು, ಜಾಲತಾಣದ ಕಮೆಂಟ್​ ಕೊಲೆಯಲ್ಲಿ ಅಂತ್ಯ..!?

ಧಾರವಾಡದಲ್ಲಿ ರಾಮಸೇನೆ ಜಿಲ್ಲಾಧ್ಯಕ್ಷ ವಿಜಯ್​ ಕದಂ ಎಂಬಾತನ ಮೇಲೆ ಕೊಲೆ ಯತ್ನ ಕೇಸ್​ ದಾಖಲಾಗಿದೆ. ತನ್ನ ಪ್ರೇಯಸಿ ಪದ್ಮಾ ಬೆಟಗೇರಿ ಜೊತೆಗೆ ನಡೆದ ಜಗಳ ತಾರಕಕ್ಕೆ ಹೋಗಿ ತಲ್ವಾರ್​ನಿಂದ ವಿಜಯ್​ ಕದಂ ಹಲ್ಲೆ ಮಾಡಿದ್ದು, ಪದ್ಮಾ ಸ್ಥಿತಿ ಗಂಭೀರವಾಗಿದೆ. ಹುಬ್ಬಳ್ಳಿಯ ಕಿಮ್ಸ್​ನಲ್ಲಿ ದಾಖಲು ಮಾಡಿದ್ದು, ಸಾವು ಬದುಕಿನ ನಡುವೆ ಪದ್ಮಾ ಪರಿತಪಿಸುತ್ತಿದ್ದಾಳೆ. ಇತ್ತ ಕೋಪದಲ್ಲಿ ಹಲ್ಲೆ ಮಾಡಿದ ವಿಜಯ್ ಕದಂ​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರ ನಡುವಿನ ಗಲಾಟೆಗೆ ಅಕ್ರಮ ಸಂಬಂಧವೇ ಕಾರಣ ಎನ್ನುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹಲ್ಲೆಗೂ ಮುನ್ನ ನಡೆದಿರುವ ಜಗಳದ ಸಂಪೂರ್ಣ ದೃಶ್ಯವನ್ನು ಸ್ವತಃ ವಿಜಯ್​ ಕದಂ ರೆಕಾರ್ಡ್​ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ತೇನೆ ಎಂದವಳ ಹತ್ಯೆಗೆ ಯತ್ನ..!

ರಾಮಸೇನೆ ಜಿಲ್ಲಾಧ್ಯಕ್ಷ ವಿಜಯ್ ಕದಂ​, ಪದ್ಮಾ ಬೆಟಗೇರಿ ಜೊತೆಗೆ ಸಾಕಷ್ಟು ದಿನಗಳಿಂದ ಸ್ನೇಹ ಸಂಬಂಧ ಇರಿಸಿಕೊಂಡಿದ್ದನು. ವಿಜಯ್​ ಕದಂಗೆ ಈಗಾಗಲೇ ಮದುವೆ ಆಗಿದ್ದು, ಪದ್ಮಾ ಬೆಟಗೇರಿ ಜೊತೆಗೂ ಅನೈತಿಕ ಸಂಬಂಧ ಹೊಂದಿದ್ದನು. ವಿಜಯ್ ಕದಂ ಮೊದಲ ಪತ್ನಿಯ ಮನೆಗೆ ಹೋಗುವುದು ಬೇಡ ಎನ್ನುವುದು ಪದ್ಮಾ ಬೆಟಗೇರಿ ಷರತ್ತು. ಮೊದಲ ಪತ್ನಿ ಜೊತೆಗೆ ಹೋಗುವುದಕ್ಕೆ ಅವಕಾಶವನ್ನೇ ಕೊಡದ ಪದ್ಮಾ ಬೆಟಗೇರಿ ಜೊತೆಗೆ ಆಗಿಂದ್ದಾಗೆ ಗಲಾಟೆ ನಡೆಯುತ್ತಿತ್ತು. ಮೊದಲ ಹೆಂಡತಿ ಮನೆಗೆ ಹೋಗಿ ಬಂದ ವಿಜಯ್​ ಕದಂ ಜೊತೆಗೆ ಪದ್ಮಾ ಜಗಳ ಆಡಿದ್ದಾರೆ. ನೀನು ನನ್ನ ಮನೆಯೊಳಗೆ ಬರಬೇಡ, ಮನೆಯೊಳಗೆ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಕೈಯ್ಯಲ್ಲಿ ಚಾಕು ಹಿಡಿದು ಬೆದರಿಸುವ ಕಸರತ್ತು ಮಾಡಿದ್ದಾರೆ. ಅಂತಿಮವಾಗಿ ಜಗಳ ತಲ್ವಾರ್​ ಏಟಿನಿಂದ ಅಂತ್ಯವಾಗಿದೆ.

ಸಾಮಾಜಿಕ ಜಾಲತಾಣದ ಕಮೆಂಟ್​ ಕೊಲೆಗೆ ಕಾರಣ..!

ಮೈಸೂರು ಜಿಲ್ಲೆಯಲ್ಲಿ ಕೆಟ್ಟ ಕಾರಣಕ್ಕೆ ಕೊಲೆಯೊಂದ ನಡೆದಿದೆದೆ. ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ ಆರೋಪದಲ್ಲಿ 23 ವರ್ಷದ ಯುವಕನ ಕೊಲೆ ನಡೆದಿದೆ. ನಿತಿನ್ ಮತ್ತು ಮನು ಎಂಬ ಇಬ್ಬರು ಯುವಕರು ಸೇರಿಕೊಂಡು ಬೀರೇಶ್​ ಎಂಬಾತನನ್ನು ಕೊಲೆ ಮಾಡಿದ್ದಾರೆ. ಹುಣಸೂರು ಪಟ್ಟಣದ ಸರಸ್ವತಿ ಪ್ಲಾಜಾ ಬಳಿಗೆ ಬೈಕ್​ನಲ್ಲಿ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದಿದ್ದಾರೆ. ಇನ್​​ಸ್ಟಾಗ್ರಾಂ ಪೋಸ್ಟ್​ ಒಂದಕ್ಕೆ ನಿತಿನ್​ ಬಗ್ಗೆ ಕೆಟ್ಟದಾಗಿ ಕಮೆಂಟ್​ ಪೋಸ್ಟ್​ ಮಾಡಿದ್ದನ್ನು ಎನ್ನಲಾಗಿದೆ. ಚಾಕು ಇರಿತದಿಂದ ಗಾಯಗೊಂಡಿದ್ದ ಯುವಕ ಬೀರೇಶ್​ನನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್​ ಪತಿ ಮೇಲೆ ಅಟ್ಯಾಕ್​​..!

ಆರೋಪಿ ಮತೀನ್​ ರಾಜ್​

ಬೆಂಗಳೂರಿನಲ್ಲಿ ಮಾಜಿ ಕಾರ್ಪೋರೆಟರ್ ಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಬಿಬಿಎಂಪಿ ವಾರ್ಡ್ ನಂಬರ್​ 139 ಮಾಜಿ ಕಾರ್ಪೋರೇಟರ್ ನಜೀಮಾ ಅಯ್ಯುಬ್ ಪತಿ ಅಯ್ಯುಬ್ ಖಾನ್​ ಮೇಲೆ ಕುಟುಂಬಸ್ಥರಿಂದಲೇ ದಾಳಿ ನಡೆದಿದೆ. ಅಯ್ಯೂಬ್​ ಅಣ್ಣನ ಮಕ್ಕಳೇ ಥಳಿಸಿ, ಚಾಕುವಿನಿಂದ ಇರಿಯಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಯ್ಯಬ್​ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಆಸ್ತಿ ವಿವಾದದ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದ್ದಾರೆ. ಸ್ವಂತ ಚಿಕ್ಕಪ್ಪ ಅಯ್ಯುಬ್ ಖಾನ್​ಗೆ ಚಾಕು ಇರಿದ ಮತೀನ್ ಖಾನ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ರಾಜಕೀಯವಾಗಿ ಬೆಳೆಯೋದಕ್ಕೆ ಬಿಡ್ತಿಲ್ಲ ಅಂತಾ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.

Related Posts

Don't Miss it !