WhatsAppನಲ್ಲಿ ಎರಡು ಸೆಟ್ಟಿಂಗ್ಸ್ ಬದಲಾವಣೆ..! ಪ್ರೇಮಿಗಳಿಗಾಗಿ ಬದಲಾಯ್ತಾ..?

ವಾಟ್ಸಪ್​ ಇಲ್ಲದಿದ್ರೆ ಜೀವನವೇ ಕಷ್ಟ ಎನ್ನುವ ಪರಿಸ್ಥಿತಿಗೆ ಜಗತ್ತು ಬಂದು ನಿಂತಿದೆ. ನಿತ್ಯ ಜೀವನದಲ್ಲಿ ವಾಟ್ಸ್​​ ಆಪ್ ಕೂಡ ದಿನಬಳಕೆಯ ಒಂದು ಭಾಗವಾಗಿದೆ. ದಿನ ಬೆಳಗಾದರೆ ವಾಟ್ಸ್​ ಆಪ್​ ಮೂಲಕ ನೂರಾರು ಜನರ ಜೊತೆಗೆ ಸಂಪರ್ಕ ಸಾಧಿಸುತ್ತೇವೆ. ಬೇಕಿರುವ ದಾಖಲೆ, ಪತ್ರಗಳನ್ನು ಕ್ಷಣಾರ್ಧದಲ್ಲಿ ಪಡೆಯುತ್ತೇವೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಾಹಿತಿ ಹಂಚಿಕೊಳ್ತೇವೆ. ಹೀಗೆ ಹತ್ತಾರು ಕೆಲಸಗಳು ವಾಟ್ಸ್​ ಆಪ್​ ಮೂಲಕ ನಡೆಯುತ್ತವೆ. ವಾಟ್ಸ್​ ಆಪ್​ ಸಂಸ್ಥೆ ಕೂಡ ದಿನದಿಂದ ದಿನಕ್ಕೆ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತ ಜನರ ಮೆಚ್ಚುಗೆ ಗಳಿಸಿದೆ. ಇದೀಗ ವಾಟ್ಸ್​ ಆಪ್​ ಸಂಸ್ಥೆ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ಬದಲಾವಣೆಗಳನ್ನು ಪ್ರೇಮಿಗಳಿಗಾಗಿಯೇ ಮಾಡಿದ್ಯಾ ಎನ್ನುವ ಅನುಮಾನ ಕಾಡುತ್ತಿದೆ.

ಡಿಲೀಟ್​ ಮಾಡೋ ತಾಪತ್ರಯವೇ ಇಲ್ಲ..!

ಯಾವುದೇ ಒಂದು ವಿಡಿಯೋ ಅಥವಾ ದಾಖಲೆಯನ್ನು ನಾವು ಕಳುಹಿಸಿದ ಬಳಿಕ ಅದು ದಾಖಲೆಯಾಗಿ ಉಳಿದುಕೊಳ್ಳುವ ಭೀತಿ ಸಾಕಷ್ಟು ಜನರಲ್ಲಿ ಮೂಡಿತ್ತು. ಇದೇ ಕಾರಣಕ್ಕೆ ಸಂವಹನ ನಡೆಸುವಾಗ ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಬೇಕಿತ್ತು. ಇದೇ ಕಾರಣದಿಂದ ಈ ಹಿಂದೆ ಕೆಲವು ಸಮಯದ ಒಳಗೆ ತಾವು ಕಳುಹಿಸಿದ  ದಾಖಲೆಗಳನ್ನು ಡಿಲೀಟ್​ ಮಾಡುವ ಅವಕಾಶ ಕೊಡಲಾಗಿತ್ತು. ಡಿಲೀಟ್​ ಎವೆರಿ ಒನ್ ಎನ್ನುವ ಆಪ್ಶನ್​ ಪ್ರೆಸ್​ ಮಾಡಿದ್ರೆ ಸೇವ್​ ಮಾಡಿದ ಫೋಲ್ಡರ್​​ನಲ್ಲೂ ದಾಖಲೆಗಳು ಡಿಲೀಟ್​ ಆಗ್ತಿತ್ತು. ಇದೀಗ ಇದಕ್ಕೂ ಮಿಗಿಲಾದ ಸೆಟ್ಟಿಂಗ್​ ಒಂದನ್ನು ವಾಟ್ಸ್​ ಆಪ್​ ಸಂಸ್ಥೆ ನೀಡಿದೆ. ಅದುವೇ ಒನ್​ ಟೈಂ ವ್ಯೂವ್. ಈ ಸೆಟ್ಟಿಂಗ್​​ನ ಮೂಲಕ ನೀವು ಯಾವುದೇ ದಾಖಲೆ, ವಿಡಿಯೋ, ಫೋಟೋ ಕಳುಹಿಸಿದರೂ ಒಮ್ಮೆ ಮಾತ್ರ ನೋಡಲು ಸಾಧ್ಯ. ಅದು ಸೇವ್​ ಆಗಲ್ಲ, ಮತ್ತೆ ನೋಡೋಣ ಎಂದರೂ ಓಪನ್​ ಆಗಲ್ಲ.

ಒಂದು ಎನ್ನುವ ಬಟನ್ ಪ್ರೆಸ್​ ಮಾಡಬೇಕು

ಇದನ್ನೂ ಓದಿ:

ಈ ಸೆಟ್ಟಿಂಗ್​ ಆಯ್ಕೆ ಮಾಡೋದು ಹೇಗೆ..?

ನಿಮ್ಮ ವಾಟ್ಸ್​ ಆಪ್​ ಅಪ್​ಡೇಟ್​ ಆಗಿಲ್ಲದಿದ್ದರೆ ಒಮ್ಮೆ ಅಪ್​ಡೇಟ್​ ಮಾಡಿಕೊಳ್ಳಿ. ಆ ನಂತರ ವಾಟ್ಸ್​ ಆಪ್​ ಓಪನ್​ ಮಾಡಿ ಫೋಟೋ ಸೆಲೆಕ್ಟ್​ ಮಾಡುವ ಬಟನ್​ ಪ್ರೆಸ್​ ಮಾಡಿ, ನಿಮ್ಮ ಗ್ಯಾಲರಿ ತೆರೆದುಕೊಳ್ಳುತ್ತದೆ. ಒಂದು ಫೋಟೋ ಸೆಲೆಕ್ಟ್​ ಮಾಡಿ, ಆಡ್​ ಕ್ಯಾಪ್ಷನ್​ ಪಕ್ಕದಲ್ಲಿ ವೃತ್ತಾಕಾರದಲ್ಲಿ ಒಂದು ಎಂದು ಇರುವ ಸಣ್ಣ ಬಟನ್​ ಪ್ರೆಸ್​ ಮಾಡಿ ಕಳುಹಿಸಿ. ನೀವು ಕಳುಹಿಸಿ ಫೈಲ್​ ಜಿಪ್​ ಫಾರ್ಮೆಟ್​ನಲ್ಲಿ ಸ್ನೇಹಿತರನ್ನು ತಲುಪುವ ಕಾರಣ ಸ್ಕ್ರೀನ್​ ಶಾಟ್ ಕೂಡ ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ಏನನ್ನು ಕಳುಹಿಸಿದ್ದೀರಿ ಎನ್ನುವುದನ್ನು ಮೇಲ್ನೋಟಕ್ಕೆ ಊಹೆ ಮಾಡಲೂ ಸಾಧ್ಯವಿಲ್ಲ. ಓಪನ್​ ಮಾಡಿ ನೋಡಿದಾಗ ಮಾತ್ರವೇ ನೀವು ಕಳುಹಿಸಿದ್ದನು ನೋಡಬಹುದು. ಆದರೆ ಇದು ಸೇವ್​ ಆಗಲ್ಲ. ಮತ್ತೊಮ್ಮೆ ನೋಡೋಣ ಎಂದರೂ ಸಾಧ್ಯವಾಗಲ್ಲ. ಜೊತೆಗೆ ಇನ್ನೊಂದು ಸೆಟ್ಟಿಂಗ್​​ನಲ್ಲಿ ನಿಮ್ಮ ಸೀಕ್ರೆಟ್​​ ಗ್ರೂಪ್​ಗಳನ್ನು ಸೆಲೆಕ್ಟ್​ ಮಾಡಿ ಆರ್ಲೈವ್​ ಮೂಲಕ ಗೌಪ್ಯವಾಗಿಯೂ ಇಡಬಹುದು. ಏಕಾಏಕಿ ಯಾರಿಗೂ ನೇರವಾಗಿ ಕಾಣಿಸುವುದಿಲ್ಲ.

ಮುಚ್ಚಿದ ಲಕೋಟೆಯಲ್ಲಿ ರವಾನೆ

ಇದನ್ನೂ ಓದಿ:

ಪ್ರೇಮಿಗಳಿಗೆ ಇದು ಉಪಯೋಗ ಹೇಗೆ..?

ಎರಡು ಮನಸ್ಸುಗಳ ನಡುವೆ ಪ್ರೀತಿ ಪ್ರೇಮ ಹೆಚ್ಚಾದಂತೆ ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಕೆಲವೊಂದು ಸಮಯದಲ್ಲಿ ಹಾಗೆ ಅದಲು ಬದಲು ಮಾಡಿಕೊಂಡ ಸಾಕಷ್ಟು ಸಂಗತಿಗಳು ಜೀವನದಲ್ಲಿ ಶತ್ರುಗಳಾಗಿ ಕಾಡುವುದು ಸಹಜ. ಆದರೆ ಇದೀಗ ಏನನ್ನೂ ಬೇಕಿದ್ದರೂ ಶೇರ್ ಮಾಡಬಹುದು. ಒಂದು ಬಾರಿ ನೋಡಿದ ಬಳಿಕ ಆಟೋಮ್ಯಾಟಿಕ್​ ಆಗಿ ಡಿಲೀಟ್​ ಆಗುವ ಕಾರಣ ಸೇವ್​ ಮಾಡಿಕೊಂಡು ಬ್ಲಾಕ್​ಮೇಲ್​ ಮಾಡ್ತಾರೆ ಎನ್ನುವ ಆತಂಕ ದೂರವಾಗಲಿದೆ. ಪ್ರೇಮಿಗಳ ಆಸೆಯನ್ನೂ ಪೂರೈಸಿದಂತೆ ಆಗುವುದರ ಜೊತೆಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಇದು ಸಹಕಾರಿ ಎಂದರೆ ತಪ್ಪಾಗಲಾರದು. ಈ ಆಯ್ಕೆ ಮೂಲಕ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದವರು ಬಚಾಬ್​ ಆಗಬಹುದು.

Related Posts

Don't Miss it !