ಕೊರೊನಾದಿಂದ ಸಾವು – ಸಹಕಾರ ಇಲಾಖೆ ಸಾಲ ಮನ್ನಾ..! ಇದಿಷ್ಟೇ ಗೊಂದಲ..

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ರೈತರ ಸಾಲಮನ್ನಾ ಮಾಡುವ ಬಗ್ಗೆ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​ ಘೋಣೆ ಮಾಡಿದ್ದರು. ಈ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳು ದಾಖಲೆ ಸಿದ್ದಪಡಿಸಿರುವ ಕೆಲಸ ಮಾಡಿದ್ದಾರೆ. ಕಳೆದ ವಾರ ಡಿಸಿಸಿ ಹಾಗು ಅಪೆಕ್ಸ್ ಬ್ಯಾಂಕ್​ನಿಂದ ಕೊರೊನಾ ಸೋಂಕಿನಿಂದ ಮೃತಪಟ್ಟ ರೈತರ ಮಾಹಿತಿ ಕೇಳಿದ್ದ ಸಹಕಾರ ಇಲಾಖೆ ಕೊರೊನಾದಿಂದ ಮೃತರಾದ 10,187 ರೈತರ ಪಟ್ಟಿ ಸಿದ್ದಪಡಿಸಿದೆ. 79.47 ಕೋಟಿ ರೂಪಾಯಿ ಸಾಲ ಮಾಡುವ ಪಟ್ಟಿ ತಯಾರಾಗಿದೆ. ಬೆಳಗಾವಿಯಲ್ಲಿ ಅತಿ ಹೆಚ್ಚು ರೈತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಸಹಕಾರ ಸಚಿವರು ಹೇಳಿದ್ದೇನು..?

ಮಂಗಳೂರಿನಲ್ಲಿ ಮಾತನಾಡಿರುವ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​, ಕೋವಿಡ್​ನಿಂದ ಮೃತಪಟ್ಟ ರೈತರ ಸಾಲ ಮನ್ನಾ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ರಾಜ್ಯದಲ್ಲಿ ಕೋವಿಡ್‌ನಿಂದ 10,400 ಮಂದಿ ಸಾಲ ಮಾಡಿರುವ ರೈತರು ಮೃತಪಟ್ಟಿದ್ದಾರೆ. ಅವರ ಒಟ್ಟು ಸಾಲದ ಮೊತ್ತದಲ್ಲಿ ತಲಾ 1 ಲಕ್ಷ ರೂಪಾಯಿ ಮೊತ್ತವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ 81 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದಿದ್ದಾರೆ.

 1. ಬಾಗಲಕೋಟೆ – 672 ರೈತರ ಸಾವು – 5,42,26,261 ರೂಪಾಯಿ ಸಾಲ
 2. ಬೆಳಗಾವಿ – 3334 ರೈತರು ಸಾವು – 23,84,51,700 ರೂಪಾಯಿ ಸಾಲ
 3. ಬಳ್ಳಾರಿ – 357 ರೈತರ ಸಾವು – 3,65,98.411 ರೂಪಾಯಿ ಸಾಲ
 4. ಬೆಂಗಳೂರು – 381 ರೈತರ ಸಾವು – 2,36,72,500 ರೂಪಾಯಿ ಸಾಲ
 5. ಬೀದರ್ – 824 ರೈತರ ಸಾವು – 5,47,68,271 ರೂಪಾಯಿ ಸಾಲ
 6. ಚಿಕ್ಕಮಗಳೂರು -113 ರೈತರ ಸಾವು – 2,03,86,020 ರೂಪಾಯಿ ಸಾಲ
 7. ಚಿತ್ರದುರ್ಗ – 156 ರೈತರ ಸಾವು – 1,63,71,000 ರೂಪಾಯಿ ಸಾಲ
 8. ದಾವಣಗೆರೆ – 402 ರೈತರ ಸಾವು – 2,66,22,071 ರೂಪಾಯಿ ಸಾಲ
 9. ಹಾಸನ – 454 ರೈತರ ಸಾವು – 2,86,42,000 ರೂಪಾಯಿ ಸಾಲ
 10. ಕಲಬುರಗಿ – 224 ರೈತರ ಸಾವುರ 87,38,776.43 ರೂಪಾಯಿ ಸಾಲ
 11. ಕೆನರಾ ಶಿರಸಿ (ಉತ್ತರ ಕನ್ನಡ) – 186 ರೈತರ ಸಾವು – 1,70,98,364 ರೂಪಾಯಿ ಸಾಲ
 12. ಕೆಸಿಸಿ ಬ್ಯಾಂಕ್ ಧಾರವಾಡ – 376 ರೈತರ ಸಾವು – 2,07,10,455 ರೂಪಾಯಿ ಸಾಲ
 13. ಕೊಡಗು – 113 ರೈತರ ಸಾವು – 1,82,99,040 ರೂಪಾಯಿ ಸಾಲ
 14. ಕೋಲಾರ – 147 ರೈತರ ಸಾವು – 2,54,09,639 ರೂಪಾಯಿ ಸಾಲ
 15. ಮಂಡ್ಯ – 410 ರೈತರ ಸಾವು – 2,73,28,268 ರೂಪಾಯಿ ಸಾಲ
 16. ಮೈಸೂರು – 281 ರೈತರು ಸಾವು – 3,13,99,000 ರೂಪಾಯಿ ಸಾಲ
 17. ರಾಯಚೂರು – 237 ರೈತರು ಸಾವು – 1,92,03,700 ರೂಪಾಯಿ ಸಾಲ
 18. ಶಿವಮೊಗ್ಗ – 307 ರೈತರು ಸಾವು – 3,27,01,000 ರೂಪಾಯಿ ಸಾಲ
 19. ದಕ್ಷಿಣ ಕನ್ನಡ – 152 ರೈತರು ಸಾವು – 2,40,63,450 ರೂಪಾಯಿ ಸಾಲ
 20. ತುಮಕೂರು – 307 ರೈತರರು ಸಾವು – 1,87,22,000 ರೂಪಾಯಿ ಸಾಲ
 21. ವಿಜಯಪುರ – 754 ರೈತರು ಸಾವು – 5,13,40,000 ರೂಪಾಯಿ ಸಾಲ

ಸಂಕಷ್ಟಕ್ಕೆ ಸಿಲುಕಿದ್ದಾರೆ ರೈತ ಮಹಿಳೆಯರು..!

ಕೊರೊನಾದಿಂದ ಸಾವನ್ನಪ್ಪಿದ 10,187 ರೈತರ 79,47,51,926.43 ರೂಪಾಯಿ ಸಾಲ ಮನ್ನಾ ಪ್ರಕ್ರಿಯೆ ಪಟ್ಟಿಯನ್ನು ಸಹಕಾರ ಇಲಾಖೆ ಸಿದ್ಧಪಡಿಸಿದೆ ಎನ್ನುವುದನ್ನು ಸ್ವತಃ ಸಹಕಾರ ಸಚಿವರೇ ಬಹಿರಂಗ ಮಾಡಿದ್ದಾರೆ. ಇದೇ ಪಟ್ಟಿಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಪ್ರಕಟ ಮಾಡುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದೀಗ ರಾಜ್ಯ ಸರ್ಕಾರ ಗಮನಿಸದೆ ಇರುವ ಕಾರಣ ರಾಜ್ಯದ ರೈತ ಮಹಿಳೆಯರು ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ. ಈ ಸಮಸ್ಯೆಯನ್ನು ಹಾಗೇ ಮುಂದುವರಿಸಿದರೆ ಮತ್ತಷ್ಟು ಸಾವು ನೋವು ಸಂಭವಿಸಿದರೂ ಅಚ್ಚರಿಯಿಲ್ಲ.

ತಾಯಿಗೋ ಹೆಂಡತಿಗೋ ಸಂಕಷ್ಟ ಗ್ಯಾರಂಟಿ..!

ಗಂಡ ಸತ್ತ ನಂತರ ಜಮೀನು ಪತ್ನಿಯ ಹೆಸರಿಗೆ ಬರುವುದು ಸಾಮಾನ್ಯ ಸಂಗತಿ. ತಾಯಿಯ ಹೆಸರಿನಲ್ಲೇ ಮಗನು ಸಾಲ ಮಾಡಿದ್ದು, ಈಗ ಕೊರೊನಾ ಸಂಕಷ್ಟದಲ್ಲಿ ಮಗನು ಸಾವನ್ನಪ್ಪಿದರೆ ತಾಯಿಯು ಸಾಲ ಮರುಪಾವತಿ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅಥವಾ ಆತನ ಪತ್ನಿಯಾದರೂ ಸಾಲ ಮರುಪಾವತಿ ಮಾಡಬೇಕಾಗಬಹುದು. ಮೊದಲೇ ಮಗನನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ತಾಯಿಗೆ ಸಾಲದ ನೋಟಿಸ್​ ಬರುವುದು ಖಚಿತ. ಹೀಗಾಗಿ ಸಾಲ ಮಾಡಿರುವ ರೈತ ಎನ್ನುವ ಬದಲು ಸಾಲ ಮಾಡಿರುವ ಮನೆಯ ಮುಖ್ಯಸ್ಥ ಎಂದು ಬದಲಿಸಿದರೆ, ತಾಯಂದಿರ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಈ ಮೂಲಕ ಸರ್ಕಾರ ರೈತಾಪಿ ವರ್ಗಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಡಬಹುದು.

Related Posts

Don't Miss it !