ನೋವಿನಲ್ಲೇ ಬದುಕು ಪಯಣ ಮುಗಿಸಿದ ಪೋಷಕ ನಟ ಸತ್ಯಜಿತ್​ ..

ಕನ್ನಡ ಚಿತ್ರರಂಗದಲ್ಲಿ ಧೀರ್ಘ ಕಾಲ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಹಿರಿಯ ನಟ ಸತ್ಯಜಿತ್ ಕೊನೆಯುಸಿರು ಎಳೆದಿದ್ದಾರೆ. ಕಳೆದ 6 ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸತ್ಯಜಿತ್​​, ಚಿಕಿತ್ಸೆ ಫಲಕಾರಿಯಾಗಿದೆ ಬದುಕಿಗೆ ಅಂತಿಮ ವಿದಾಯ ಹೇಳಿದ್ದಾರೆ. ಬುಧವಾರದವರೆಗೂ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತಾದರೂ ಗುರುವಾರ ಡಯಾಲಿಸಿಸ್ ಮಾಡುವ ವೇಳೆ ಹಾರ್ಟ್ ರೇಟ್ ಕಡಿಮೆಯಾಗಿತ್ತು. ಜೊತೆಗೆ ಇಂಟರ್ನಲ್ ಬ್ಲೀಡಿಂಗ್ ಕೂಡ ಆಗಿತ್ತು. ಹೀಗಾಗಿ ವೆಂಟಿಲೇಟರ್ ಸಪೋರ್ಟ್ ಕೊಡಲಾಗಿತ್ತು. ಶುಕ್ರವಾರ ಮತ್ತಷ್ಟು ಕ್ಷೀಣಿಸಿದ ಆರೋಗ್ಯ ಓರ್ವ ಅದ್ಬುತ ಪೋಷಕ ನಟನನ್ನು ಸ್ಯಾಂಡಲ್​​ವುಡ್​ನಲ್ಲಿ ನೆನಪಾಗಿ ಉಳಿಸಿತು ಎನ್ನಬಹುದು.

ಧರ್ಮವನ್ನೇ ಮೀರಿ ಬೆಳೆದಿದ್ದ ನಟ ಸತ್ಯಜಿತ್​..!

ಶುಕ್ರವಾರ ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಹಿರಿಯ ನಟ ಸತ್ಯಜಿತ್​​ ಅಸಲಿಗೆ ಮುಸಲ್ಮಾನ ಸಮುದಾಯದಲ್ಲಿ ಹುಟ್ಟಿ ಧರ್ಮ ಮೀರಿ ಬೆಳೆದಿದ್ದ ಪೋಷಕ ನಟ. ಸತ್ಯಜಿತ್ ಅವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. 650ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ನಟ ಸತ್ಯಜಿತ್‌, ಯಾವುದೇ ಪಾತ್ರ ಕೊಟ್ಟರೂ ಅಚ್ಚುಕಟ್ಟಾಗಿ ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ನೆಗೆಟೀವ್​ ಪಾತ್ರ, ಕಾಮಿಡಿ ಪಾತ್ರ, ಪೊಲೀಸ್​ ಪಾತ್ರ ಸೇರಿದಂತೆ ತಂದೆ ಪಾತ್ರವನ್ನು ಖಡಕ್​ ಆಗಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಇದೇ ಕಾರಣದಿಂದ 90ರ ದಶಕದಲ್ಲಿ ಬಹು ಬೇಡಿಕೆಯನ್ನು ಹೊಂದಿದ್ದ ನಟ ಸತ್ಯಜಿತ್.

Read this aslo;

ಹುಬ್ಬಳ್ಳಿ ಮೂಲದ ಸತ್ಯಜಿತ್​ ರಂಗಕಲಾವಿದ..!

ಸತ್ಯಜಿತ್ ನಿಧನಕ್ಕೆ ಹುಬ್ಬಳ್ಳಿಯ ಗೆಳೆಯರು ಕಂಬನಿ ಮಿಡಿದಿದ್ದಾರೆ. ಮೂಲತಃ ಹುಬ್ಬಳ್ಳಿಯ ನಿವಾಸಿ ಆಗಿದ್ದ ಸತ್ಯಜಿತ್, ಸಿನಿಮಾ ರಂಗ ಪ್ರವೇಶ ಮಾಡಿದ ನಂತರ ಬೆಂಗಳೂರಿನಲ್ಲಿ ವಾಸವಿದ್ದರು. ಸಯ್ಯದ್ ನಿಜಾಮುದ್ದೀನ್ ಎನ್ನುವ ಹೆಸರನ್ನು ಚಿತ್ರರಂಗ ಪ್ರವೇಶ ಮಾಡಿದ ನಂತರ ಹೆಸರನ್ನು ಸತ್ಯಜಿತ್ ಎಂದು ಮಾರ್ಪಾಡು ಮಾಡಿಕೊಂಡಿದ್ದರು. ಓದಿದ್ದು ಕೇವಲ ಎಸ್ಎಸ್ಎಲ್​ಸಿ ಆದರೂ ಕಲೆ ಸಿದ್ಧಿಸಿತ್ತು. ಕುಂ ವೀರಭದ್ರಪ್ಪ ಅವರ ಬೇಲಿ ಮತ್ತು ಹೊಲ ನಾಟಕದ ಮೂಲಕ ರಂಗಭೂಮಿ ಪ್ರವೇಶ ಮಾಡಿದ ಸತ್ಯಜಿತ್​ ಹಿಂತಿರುಗಿ ನೋಡಲಿಲ್ಲ. ಹುಬ್ಬಳ್ಳಿಯ ಸುಭಾಷ ನರೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ನಾಟಕದಲ್ಲಿ ಅಭಿನಯಿಸಿದ ಸತ್ಯಜಿತ್​ ಅವರನ್ನು ಚಿತ್ರರಂಗಕ್ಕೆ ಎಳೆದು ತಂದು ನಿಲ್ಲಿಸಿತ್ತು. ಜ್ಞಾಪಕ ಶಕ್ತಿ ಮತ್ತು ನಟನಾ ಕೌಶಲ್ಯದ ಮೂಲಕವೇ ಎಲ್ಲರ ಮನಗೆದ್ದಿದ್ದ ಸತ್ಯಜಿತ್​​ ಹಿಂದಿಯಲ್ಲಿ ಅವಕಾಶ ಸಿಕ್ಕೂ ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡದಲ್ಲೇ ನೆಲೆನಿಂತ ಕಲಾವಿದ.

ಸತ್ಯಜಿತ್ ಪ್ರತಿಭೆಗೆ ಸ್ನೇಹಿತರು, ಹಿರಿಯರ ಕಂಬನಿ..!

ಮೊದಲ ಬಾರಿಗೆ ಸತ್ಯಜಿತ್​ ಅಭಿನಯಿಸಿದ ನಾಟಕದ ನಿರ್ದೇಶಕರಾಗಿದ್ದ ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಕಂಬನಿ ಮಿಡಿದಿದ್ದಾರೆ. ಅಂತಹ ಮಹಾನ್ ಕಲಾವಿದ ನನ್ನ ನಾಟಕದ ಮೂಲಕ ರಂಗ ಪ್ರವೇಶಿಸಿದ ಎಂಬುದು ನನಗೆ ಹೆಮ್ಮೆಯ ವಿಷಯ. ಚಿತ್ರರಂಗ ಪ್ರವೇಶ ಮಾಡಿದ ನಂತರ ಅವರ ನಟನಾ ಕೌಶಲ್ಯದ ವ್ಯಾಪ್ತಿ ಮತ್ತಷ್ಟು ದೊಡ್ಡದಾಗಿತ್ತು. ನಟನಾಗುವ ಮುಂಚೆಯೇ ವಿವಿಧ ಕಲಾವಿದರನ್ನು ಅನುಕರಣೆ ಮಾಡಿ ನಟನೆ ಮಾಡುತ್ತಿದ್ದ. ಪುಟಗಟ್ಟಲೆ ಡೈಲಾಗ್ ಕೊಟ್ಟರೂ ಒಮ್ಮೆ ನೋಡಿಕೊಂಡು ಪಟಪಟನೆ ಹೇಳಿಬಿಡುತ್ತಿದ್ದ. ಅಷ್ಟರ ಮಟ್ಟಿಗೆ ಮಹಾನ್​ ಪ್ರತಿಭಾವಂತನಾಗಿದ್ದ. ಅವರ ನಿಧನದಿಂದ ನಮಗೆಲ್ಲರಿಗೂ ಆಘಾತವಾಗಿದೆ. ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ. ಬಡತನದ ಬೇಗೆಯಲ್ಲಿ ಬೆಂದರೂ ಕಲಾವಿದನ ರೂಪದಲ್ಲಿ ಅರಳಿ ಕನ್ನಡಿಗರ ಮನೆ ಮಾತಾಗಿದ್ದ ಸತ್ಯಜಿತ್​ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗುತ್ತಿದೆ. ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇವೆ. ಸತ್ಯಜಿತ್ ಅಗಲಿಕೆ ಚಿತ್ರರಂಗ ಒಂದೇ ಅಲ್ಲದೆ ನಮ್ಮೆಲ್ಲ ಗೆಳೆಯರ ಬಳಗಕ್ಕೂ ಆಘಾತಕಾರಿ ವಿಚಾರ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ ಬಾಲ್ಯದ ಗೆಳೆಯ ಮತ್ತು ಚಿತ್ರ ನಿರ್ದೇಶಕ ಯೂಸುಫ್ ಖಾಜಿ.

ಬೆಂಗಳೂರಿನ ಹೆಗಡೆ ನಗರದಲ್ಲಿ ಅಂತ್ಯಕ್ರಿಯೆ..!

ಬೌರಿಂಗ್ ಆಸ್ಪತ್ರೆಯಿಂದ ಹೆಗಡೆ ನಗರದ ನಿವಾಸಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿದ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯ ನಂತರ ಹೆಗೆಡೆ ನಗರದ ಖಬರ್ ಸ್ಥಾನ್​​ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಪುತ್ರ ಆಕಾಶ್ ಹಾಗೂ ಸ್ನೇಹಿತರು ಎಲ್ಲಾ ಕಾರ್ಯಗಳನ್ನು ನೆರವೇರಿಸಲು ಸಜ್ಜಾಗಿದ್ದಾರೆ. ಸತ್ಯಜಿತ್​​ ಕೊನೆಯ ದಿನಗಳಲ್ಲಿ ಹಣಕ್ಕಾಗಿ ಪೀಡಿಸಲು ಶುರು ಮಾಡಿದರು ಎಂದು ಮಗಳೇ ಅಪ್ಪನ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸತ್ಯಜಿತ್​, ನಾನು ಯಾರ ಬಳಿಯೂ ಹಣ ಕೇಳಿಲ್ಲ. ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಯಾರು ತಪ್ಪು ಮಾಡುತ್ತಾರೋ ಅವರಿಗೆ ಆ ದೇವರೇ ಶಿಕ್ಷೆ ನೀಡುತ್ತಾನೆ ಎಂದಿದ್ದರು. ಅದರ ನೋವಿನಲ್ಲೇ ಆಸ್ಪತ್ರೆ ಸೇರಿಕೊಂಡು ಆಸ್ಪತ್ರೆ ಸೇರಿದರು.

ಸತ್ಯಜಿತ್ ನಟಿಸಿದ ಚಲನಚಿತ್ರಗಳು:

ಪುಟ್ನಂಜ ಶಿವ ಮೆಚ್ಚಿದ ಕಣ್ಣಪ್ಪ ಚೈತ್ರಾದ ಪ್ರೇಮಾಂಜಲಿ ಆಪ್ತಮಿತ ಅರುಣ ರಾಗ ಅಂತಿಮ ತೀರ್ಪು ಶಿವ ಮೆಚ್ಚಿದ ಕಣ್ಣಪ್ಪ ರಣರಂಗ ನಮ್ಮೂರ ರಾಜ ನ್ಯಾಯಕ್ಕಾಗಿ ನಾನು ಯುದ್ಧಕಾಂಡ ಇಂದ್ರಜಿತ್ ನಮ್ಮೂರ ಹಮ್ಮೀರ ಪೊಲೀಸ್ ಲಾಕಪ್ ಮನೆದೇವ್ರು ಮಂಡ್ಯದ ಗಂಡು ಪೊಲೀಸ್ ಸ್ಟೋರಿ ಸರ್ಕಲ್ ಇನ್ಸ್‌ಪೆಕ್ಟರ್ ಪಟೇಲ ದುರ್ಗದ ಹುಲಿ ಅಪ್ಪು ಧಮ್ ಅಭಿ ಅರಸು ಇಂದ್ರ ಭಾಗ್ಯದ ಬಳೇಗಾರ ಕಲ್ಪನಾ ಗಾಡ್ ಫಾದರ್ ಲಕ್ಕಿ ಉಪ್ಪಿ 2 ಮಾಣಿಕ್ಯ ರನ್ನ ರಣವಿಕ್ರಮ ಮೈತ್ರಿ… Etc

Related Posts

Don't Miss it !