ಬಡವರ ಅನ್ನದ ಹೊಟ್ಟೆ ಮೇಲೆ ಮತ್ತೆ ಹೊಡೆದ ಕೇಂದ್ರ ಸರ್ಕಾರ..!

ಪೆಟ್ರೋಲ್​, ಡೀಸೆಲ್​ ಬೆಲೆಯನ್ನು ನಿಯಂತ್ರಣ ಮಾಡಲು ಜಿಎಸ್​ಟಿ ವ್ಯಾಪ್ತಿಗೆ ತರಲಾಗುತ್ತೆ ಎನ್ನುವ ಚರ್ಚೆಗಳು ನಡೆದಿದ್ದವು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೂಡ ಜಿಎಸ್​ಟಿ ಕೌನ್ಸಿಲ್​ ಸಭೆಯ ಅಜೆಂಡಾದಲ್ಲಿ ಇದೆ ಎಂದು ತಿಳಿಸಿದ್ದರು. ಉತ್ತರ ಪ್ರದೇಶದ ಲಕ್ನೌನಲ್ಲಿ ನಡೆದ ಜಿಎಸ್​ಟಿ ಸಮಿತಿ ಸಭೆಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರ ಜಿಎಸ್​ಟಿ ವ್ಯಾಪ್ತಿಗೆ ಸೇರಿಸದಂತೆ ತೀವ್ರ ವಿರೋಧ ಮಾಡಿದವು ಎನ್ನಲಾಗಿದೆ. ಸಭೆ ಬಳಿಕ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಪೆಟ್ರೋಲ್​, ಡೀಸೆಲ್​ ಬೆಲೆಯನ್ನು ಜಿಎಸ್​ಟಿ ವ್ಯಾಪ್ತಿಗೆ ಸೇರಿಸಲು ಇದು ಸೂಕ್ತ ಸಮಯವಲ್ಲ ಎಂದಿದ್ದರು. ಆದರೆ ಅದೇ ಜಿಎಸ್​ಟಿ ಮೀಟಿಂಗ್​ನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುವ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ ಎನ್ನುವುದು ವಿಶೇಷ.

ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇಡೀ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಅದೇ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್​ 17ರಂದು ಕೇಂದ್ರ ಜಿಎಸ್​ಟಿ ಮಂಡಳಿ, ಆಹಾರ ಪೂರೈಕೆ ಮಾಡುವ ಆನ್​ಲೈನ್​ ಆ್ಯಪ್​ ಮೇಲೆ ಶೇಕಡ 5 ರಷ್ಟು ತೆರಿಗೆ ವಿಧಿಸಿದೆ. ಈಗಾಗಲೇ ಹೋಟೆಲ್​ನಲ್ಲಿ ಆಹಾರ ಕೊಳ್ಳುವ ಗ್ರಾಹಕನ ಮೇಲೆ ಟ್ಯಾಕ್ಸ್​ ಹಾಕಲಾಗಿದೆ. ಇದೀಗ ಊಟ ತಂದು ಕೊಡುವ ಆ್ಯಪ್​ಗಳ ಮೇಲೂ ತೆರಿಗೆ ವಿಧಿಸಲಾಗಿದೆ. ಊಟ ತಂದು ಕೊಡುವ ಆ್ಯಪ್​ಗಳು ಅಂದರೆ ಸ್ವಿಗ್ಗಿ, ಝೋಮ್ಯಾಟೋ ರೀತಿಯ ಆನ್​ಲೈನ್​ ಆ್ಯಪ್​ಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರ ಜಿಎಸ್​ಟಿ ಮಂಡಳಿಯಿಂದ ಮಾಡಲಾಗಿದೆ.

Read this also;

ಆ್ಯಪ್​ ಮೇಲೆ ತೆರಿಗೆ ವಿಧಿಸಿದರೆ ನಷ್ಟ ಏನು..?

ಕೇಂದ್ರ ಸರ್ಕಾರ ಆ್ಯಪ್​ ಮೇಲೆ ತೆರಿಗೆ ವಿಧಿಸಿದರೆ ಇದರಿಂದ ಬಡವರ ಹೊಟ್ಟೆ ಮೇಲೆ ಹೊಡೆದಂತೆ ಹೇಗೆ ಆಗುತ್ತೆ ಎನ್ನುವ ಪ್ರಶ್ನೆ ಮೂಡಬಹುದು. ಈ ಆ್ಯಪ್​ಗಳನ್ನು ಬಳಸಿ ಊಟ ಸರಭರಾಜು ಮಾಡುವುದು ಬಡವರು. ಯಾವುದೇ ಕಂಪನಿ ತನಗೆ ಎದುರಾಗುವ ಯಾವುದೇ ನಷ್ಟವನ್ನು ಬಳಕೆದಾರರು ಅಥವಾ ಸಿಬ್ಬಂದಿ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ವರ್ಗಾವಣೆ ಮಾಡುತ್ತದೆ. ಇದೀಗ ಶೇಕಡ 5 ರಷ್ಟು ತೆರಿಗೆ ವಿಧಿಸಿರುವ ಹಣ ಕೂಡ ಆ್ಯಪ್​ ಬಳಕೆದಾರರಿಂದ ಕೇಂದ್ರ ಸರ್ಕಾರದ ಖಜಾನೆ ತುಂಬಬೇಕಿದೆ. ಆ್ಯಪ್​ ಬಳಕೆದಾರರು ಎಂದರೆ ಹೋಟೆಲ್​ನಲ್ಲಿ ಊಟ ಖರೀದಿ ಮಾಡುವ ಗ್ರಾಹ ಅಥವಾ ಊಟವನ್ನು ಮನೆಗೆ ತಲುಪಿಸುವ ಡೆಲಿವರಿ ಬಾಯ್ಸ್​. ಈಗಾಗಲೇ ದುಬಾರಿ ಎನ್ನುವ ಕಾರಣದಿಂದ ಊಟ ಖರೀದಿ ಪ್ರಮಾಣ ಇಳಿಕೆಯಾಗಿದೆ. ಇದೀಗ ಗ್ರಾಹಕರ ಮೇಲೆ ತೆರಿಗೆ ವಿಧಿಸಿದರೆ ಮತ್ತಷ್ಟು ಕುಸಿತ ಕಾಣಲಿದೆ. ಇದರಿಂದ ಡೆಲಿವರಿ ಬಾಯ್ಸ್​ ಜೀವನಕ್ಕೂ ಪೆಟ್ಟು ಬೀಳಲಿದೆ.

Read this also;

ಡೆಲಿವರಿ ಬಾಯ್ಸ್​ ಕೆಲಸ ಯಾರು ಮಾಡ್ತಾರೆ ಗೊತ್ತಾ..?

ಕೊರೊನಾ ಸಂಕಷ್ಟ ಕಾಲದಲ್ಲಿ ಕೆಲಸ ಕಳೆದುಕೊಂಡು ಜೀವನ ನಡೆಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದ ಅದೆಷ್ಟೋ ಮಂದಿ ಈ ರೀತಿಯ ಆನ್​ಲೈನ್​ ಆ್ಯಪ್​ಗಳ ಸಹಾಯದಿಂದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆಟೋ, ಕಾರು ಓಡಿಸಲು ಶಕ್ತರಲ್ಲದ ಜನ ತಮ್ಮ ಸ್ವಂತ ಬೈಕ್​ಗಳನ್ನೇ ಬಳಸಿ ಆಹಾರ ಸರಭರಾಜು ಮಾಡುವ ಕೆಲಸ ಮಾಡುತ್ತಿದ್ದಾರೆ. ಅದೂ ಅಲ್ಲದೆ ಇದೀಗ ಪೆಟ್ರೋಲ್​ ಬೆಲೆ ಗಗನ ತಲುಪಿರುವ ಕಾರಣ ಉಳಿತಾಯ ಆಗುತ್ತಿರುವುದೇ ಇಷ್ಟು.. ಅದರಲ್ಲಿ ಕೇಂದ್ರ ಸರ್ಕಾರ ಕೀಳಲು ಮುಂದಾಗಿರುವುದು ಅಷ್ಟು. ಕೊರೊನಾ ಕಷ್ಟದಲ್ಲಿ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುವ ಬಡ ಜನರಿಂದಲೂ ಶೇಕಡ 5ರಷ್ಟು ತೆರಿಗೆ ಹಾಕುತ್ತಿರುವುದು ಸಮಂಜಸ ಎನಿಸದು.

Related Posts

Don't Miss it !