James: ಡಾ ಪುನೀತ್ ರಾಜ್‍ಕುಮಾರ್ ‘ಅಭಿ’ಮಾನಿಗಳಿಗೆ ಗುಡ್ ನ್ಯೂಸ್.. ಜೇಮ್ಸ್‌ ಚಿತ್ರದಲ್ಲಿ ಒರಿಜಿನಲ್ ವಾಯ್ಸ್..!!

ಕರ್ನಾಟಕ ರತ್ನ ಡಾ ಪುನೀತ್ ರಾಜ್‌ಕುಮಾರ್ ಅಭಿನಯದ ಕಟ್ಟ ಕಡೆಯ ಚಿತ್ರ ಜೇಮ್ಸ್. ಈ ಚಿತ್ರ ಇತ್ತೀಚಿಗೆ ರಿಲೀಸ್ ಆಗಿತ್ತು. ಅಪ್ಪು ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಂಡಿದ್ದರು. ಆದರೆ ಪುನೀತ್ ರಾಜ್‍ಕುಮಾರ್ ಧ್ವನಿ ಕೇಳಿಸದ ಬೇಸರ ಎಲ್ಲರನ್ನೂ ಕಾಡಿತ್ತು. ಅದರಲ್ಲೂ ಅಪ್ಪು ಅಭಿಮಾನಿಗಳು ಪುನೀತ್ ಶೈಲಿಯಲ್ಲಿ ಮಿಮಿಕ್ರಿ ಮಾಡಿಸಿದ್ದರೂ ಒಳ್ಳೆಯದಿತ್ತು. ಡಾ ಶಿವರಾಜ್‌ಕುಮಾರ್ ವಾಯ್ಸ್ ಅಪ್ಪುಗೆ ಸರಿ ಹೊಂದುತ್ತಿಲ್ಲ ಎನ್ನುತ್ತ ಮನಸಲ್ಲೇ ಮಂಡಿಗೆ ತಿಂದಿದ್ದರು. ಅಭಿಮಾನಿಗಳ ಆಸೆ ಈಡೇರುವ ಸಂತಸದ ಸುದ್ದಿ ಹೊರಬಿದ್ದಿದೆ. ಅದು ಅಪ್ಪು ವಾಯ್ಸ್‌ನಲ್ಲೇ ಜೇಮ್ಸ್ […]

ಅಪ್ಪು ನಿಧನದ ಬೆನ್ನಲ್ಲೇ ಅಶ್ವಿನಿ ಪುನೀತ್​ ರಾಜ್​​ಕುಮಾರ್​ಗೆ ಮತ್ತೊಂದು ಆಘಾತ..!

ಕನ್ನಡಿಗರ ನೆಚ್ಚಿನ ನವೆಂಬರ್​ ತಿಂಗಳ ಆರಂಭಕ್ಕೂ ಮುನ್ನವೇ ಅಕ್ಟೋಬರ್​ 29ರಂದು ನೆಚ್ಚಿನ ನಟನನ್ನು ಕಳೆದುಕೊಂಡು ದುಃಖಕ್ಕೆ ಈಡಾಗಿದ್ರು. ಕನ್ನಡ ಚಿತ್ರರಂಗದ ದೊಡ್ಮನೆ ಕೂಡ ಶೋಕಸಾಗರದಲ್ಲಿ ಮುಳುಗಿತ್ತು. ಇದೀಗ ಮತ್ತೆ ದೊಡ್ಮನೆ ಕುಟುಂಬಕ್ಕೆ ಶಾಕ್​ ಆಗಿದೆ. ನಟ ದಿವಂಗತ ಪುನೀತ್ ರಾಜ್​​ಕುಮಾರ್​​ ಪತ್ನಿ ಅಶ್ವಿನಿ ಅವರ ತಂದೆ ಇಹಲೋಕ ತ್ಯಜಿಸಿದ್ದಾರೆ. 78 ವರ್ಷದ ರೇವನಾಥ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಎಂ.ಎಸ್​ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ವಿಧಿವಶರಾಗಿದ್ದಾರೆ. ಕಾರ್ಡಿಯಾಕ್​ ಅರೆಸ್ಟ್​ನಿಂದ ಕನ್ನಡಿಗರ ನೆಚ್ಚಿನ ನಟ […]

ಪವರ್ ಸ್ಟಾರ್​ ಅಪ್ಪು ಸಾವಿನ ಬಳಿಕ ಕೊನೆ ಆಸೆ ಈಡೇರಿಸಿದ ಸಹೋದರರು..!

ಸ್ಯಾಂಡಲ್​ವುಡ್​ನಲ್ಲಿ ಪವರ್​ ಸ್ಟಾರ್​, ಅಪ್ಪು ಎಂದೇ ಖ್ಯಾತಿ ಗಳಿಸಿದ್ದ ಪುನೀತ್​ ರಾಜ್​ಕುಮಾರ್​ ಕೊನೆಯ ಚಿತ್ರ ಜೇಮ್ಸ್​​ ಚಿತ್ರೀಕರಣ ಮುಕ್ತಾಯವಾಗಿದೆ. ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್​ನಲ್ಲಿ ನಡೆದ ಅಂತಿಮ ದಿನದ ಶೂಟಿಂಗ್​ ಮುಗಿಸಿದ ಚಿತ್ರತಂಡ ಕುಂಬಳಕಾಯಿ ಹೊಡೆಯುವ ಕೆಲಸ ಮಾಡಿ ಮುಗಿಸಿದೆ. ಇನ್ನೇನಿದ್ದರೂ ಪೋಸ್ಟ್​ ಪ್ರೊಡಕ್ಷನ್​​ ಕೆಲಸ ಮುಗಿಸಿದ ಬಳಿಕ ಭಾರೀ ನಿರೀಕ್ಷೆ ಹುಟ್ಟಿಸಿರುವ ಜೇಮ್ಸ್​ ಚಿತ್ರ ತೆರೆ ಮೇಲೆ ಬರಲಿದೆ. ನಟ ಪುನೀತ್​ ರಾಜ್​ಕುಮಾರ್​ ಬದುಕಿದ್ದರೆ ಈ ಚಿತ್ರಕ್ಕೆ ಮತ್ತಷ್ಟು ಪ್ರಚಾರ ಸಿಗುತ್ತಿತ್ತು. ಆದರೆ ಇದೀಗ ಅಪ್ಪು […]

ನಟ ಪುನೀತ್ ಸಾವಿನ ಬಗ್ಗೆ ಡಾಕ್ಟರ್ ಹೇಳಿದ್ದು ಸತ್ಯವಿದ್ದರೆ ಹೆದರುವ ಅಗತ್ಯ ಏನಿದೆ..?

ನಟ ಪುನೀತ್ ರಾಜ್‍ಕುಮಾರ್ ಸಾವನ್ನಪ್ಪಿ ಈಗಾಗಲೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿದೆ. ಆದರೆ ಸಾವಿನ ಬಗೆಗಿನ ಅನುಮಾನಗಳು ಮಾತ್ರ ಇನ್ನೂ ಕೂಡ ಬಗೆಹರಿದಿಲ್ಲ. ಮನೆಯಿಂದ ಹೊರಟ ಪುನೀತ್ ರಾಜ್‍ಕುಮಾರ್ ಕ್ಲಿನಿಕ್ ತಲುಪಿ ತಪಾಸಣೆಗೆ ಒಳಪಟ್ಟಿದ್ದಾರೆ. ಡಾ ರಮಣ ರಾವ್ ಹೇಳುವ ಪ್ರಕಾರ ಕ್ಲಿನಿಕ್‌ನಲ್ಲಿ ಎಲ್ಲಾ ರೀತಿಯ ತಾತ್ಕಾಲಿಕ ಚಿಕಿತ್ಸೆ ನೀಡಿ ಕೆಲವೇ ನಿಮಿಷಗಳಲ್ಲಿ ಅವರನ್ನು ಕಳಿಸಿಕೊಟ್ಟೆವು. ಆಂಬ್ಯುಲೆನ್ಸ್ ಬಂದು ಕರೆದೊಯ್ಯುವ ಹೊತ್ತಿಗೆ ಸಮಯ ಆಗುತ್ತೆ ಎನ್ನುವ ಕಾರಣಕ್ಕೆ ಕಾರ್‌ನಲ್ಲೇ ಕಳಿಸಿದೆವು ಎನ್ನುತ್ತಾರೆ. ಇಷ್ಟನ್ನು ಹೇಳುವಾಗ ಡಾ ರಮಣರಾವ್ […]

ನಟ ಪುನೀತ್ ಅಭಿಮಾನಿಗಳು ಸಾಯುತ್ತಿರೋದು ಯಾಕೆ..?

ನಟ ಪುನೀತ್ ರಾಜ್‍ಕುಮಾರ್ ಅಕ್ಟೋಬರ್ 29ರಂದು ಉಸಿರು ಚೆಲ್ಲಿದ ಬಳಿಕ ಚಾಮರಾಜನಗರ, ಮೈಸೂರು, ರಾಯಚೂರು, ಚಿಕ್ಕಮಗಳೂರು, ತುಮಕೂರು ಸೇರಿದಂತೆ ರಾಜ್ಯಾದ್ಯಂತ ಸಾವುಗಳು ಸಂಭವಿಸುತ್ತಲೇ ಇವೆ. ಕೆಲವು ಕಡೆ ಆತ್ಮಹತ್ಯೆ ಪ್ರಯತ್ನಗಳು ನಡೆದ್ರೆ ಮತ್ತೆ ಕೆಲವು ಕಡೆ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವಿನ ಮನೆ ಸೇರುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ರೀತಿಯಲ್ಲೇ ನಮ್ಮ ಕಣ್ಣುಗಳನ್ನು ದಾನ ಮಾಡಬೇಕು ಎಂದೆಲ್ಲಾ ಪತ್ರ ಬರೆದಿಟ್ಟು ಸಾಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಬೆಳವಣಿಗೆ ದೊಡ್ಮನೆ ಕುಟುಂಬಸ್ಥರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. […]

ಅಪ್ಪು ಅಂತ್ಯಕ್ರಿಯೆ ಇಂದಲ್ಲ.. ನಾಳೆ.. ಕಾರಣ ಏನು ಗೊತ್ತಾ..?

ನಟ ಪುನೀತ್ ರಾಜ್‍ಕುಮಾರ್ ವಿಧಿವಶರಾಗಿ 30 ಗಂಟೆಗಳಾಗುತ್ತಿವೆ. ಕಂಠೀರವ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಕಣ್ಣೀರ ತರ್ಪಣ ಸಲ್ಲಿಸುತ್ತಿದ್ದಾರೆ. ಈ ನಡುವೆ ಅಮೆರಿಕದಲ್ಲಿದ್ದ ಪುನೀತ್ ಮಗಳು ವಿದೇಶದಿಂದ ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಇಂದೇ ಮುಗಿಸಲು ಸಕಲ ತಯಾರಿಗಳು ನಡೆದಿದ್ದವು. ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿವಿಧಾನಕ್ಕೆ ಬೇಕಾದ ಎಲ್ಲಾ ತಯಾರಿಗಳೂ ನಡೆದಿದ್ದವು. ಅಂತಿಮ ಯಾತ್ರೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಬದಲಿ ಮಾರ್ಗಕ್ಕೆ ಮಾರ್ಪಾಡು ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಆದ ಬದಲಾವಣೆಯಂತೆ ಅಂತಿಮ […]

ಕಟ್ಟ ಕಡೆಯಲ್ಲಿ ಮಾಡಿದ ಎಡವಟ್ಟು ಅಪ್ಪು ಜೀವಕ್ಕೆ ಆಯ್ತಾ ಆಪತ್ತು..!?

ನಟ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿ 24 ಗಂಟೆಗಳು ಕಳೆದು ಹೋಗುತ್ತಿವೆ. ಲಕ್ಷಾಂತರ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಆಗಮಿಸಿ ಮೆಚ್ಚಿನ ನಟನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ದೂರದ ಊರುಗಳಿಂದ ಬಸ್‌ಗಳ ಮೂಲಕ ಗುಂಪು ಗುಂಪಾಗಿ ಅಭಿಮಾನಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಅಷ್ಟೊಂದು ಪ್ರೀತಿಸುವ ನಟನ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಆ ಅನುಮಾನಗಳಿಗೆ ಉತ್ತರ ಹೇಳುವವರು ಯಾರು..? ಎನ್ನುವ ಪ್ರಶ್ನೆ ಕಾಡುತ್ತಿದೆ. ಆ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ನಿಮ್ಮ The […]

ಏನಾಯ್ತು ಅಣ್ಣಾವ್ರ ಮಗ ನಟ ಪುನೀತ್ ರಾಜ್ ಕುಮಾರ್‌ಗೆ..?

ನಟ ಪುನೀತ್ ರಾಜ್ ಕುಮಾರ್ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಪುನೀತ್ ರಾಜ್‌ಕುಮಾರ್ ಅವರನ್ನು ದಾಖಲು ಮಾಡಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಮನೆ ಹಾಗೂ ವಿಕ್ರಮ್ ಆಸ್ಪತ್ರೆ ಬಳಿ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಕ್ರಮ್ ಆಸ್ಪತ್ರೆಗೆ ಭೇಟಿ ನೀಡಿ,ಆರೋಗ್ಯ ವಿಚಾರಿಸಿದ್ದಾರೆ. ನಟ ಶಿವರಾಜ್‌ಕುಮಾರ್, ಶ್ರೀಮುರಳಿ, ನಿರ್ದೇಶಕ ಆನಂದ್ ರಾಮ್ ಸೇರಿದಂತೆ ಸಾಕಷ್ಟು ಗಣ್ಯರು ಆಸ್ಪತ್ರೆ ಬಳಿಗೆ ದೌಡಾಯಿಸುತ್ತಿದ್ದಾರೆ. ಹಾರ್ಟ್ ಅಟ್ಯಾಕ್ ಆದರೆ ಆತಂಕ ಯಾಕೆ..? ಹಾರ್ಟ್ ಅಟ್ಯಾಕ್ […]