ಪ್ರತಿಭಟನೆ ವೇಳೆ ಕಾರು ಹತ್ತಿಸಿ 4 ರೈತರ ಹತ್ಯೆ, ಹಿಂಸಾಚಾರದಲ್ಲಿ ಮತ್ತೆ 4 ಸಾವು..

ದೆಹಲಿಯಲ್ಲಿ ಕೃಷಿ ಕಾಯ್ದೆಯನ್ನು ವಿರೋಧಿಸಿ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ರೂ ಕೇಂದ್ರ ಸರ್ಕಾರ ಮಣಿದಿಲ್ಲ. ಆದರೆ ಉತ್ತರ ಪ್ರದೇಶದ ಲಖಿಮ್ ಪುರದಲ್ಲಿ ಭಾರತೀಯ ಕಿಸಾನ್ ಸಂಘಟನೆ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲು ಪಡೆ ರೈತರ ಮೇಲೆ ಹತ್ತಿದ ಪರಿಣಾಮ ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ರು. ಇದ್ರಿಂದ ರೊಚ್ಚಿಗೆದ್ದ ಅನ್ನದಾತರು ಎರಡು ಎಸ್​ಯುವಿ ಕಾರುಗಳಿಗೆ ಬೆಂಕಿ ಹಚ್ಚಿದ್ರು. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಮತ್ತೆ ನಾಲ್ವರು ಅಸುನೀಗಿದ್ದಾರೆ. […]