ಪಠ್ಯ ಪುಸ್ತಕ ವಿಚಾರದಲ್ಲಿ ಒಕ್ಕಲಿಗರಿಗೆ ಹಿನ್ನಡೆ.. ಲಿಂಗಾಯತರ ಎದುರು ಮಂಡಿಯೂರಿದ ಸರ್ಕಾರ..!!

ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ಸಾಕಷ್ಟು ವಿರೋಧಕ್ಕೆ ಕಾರಣವಾಯಿತು. ಮೊದಲಿಗೆ ಟಿಪ್ಪು ಪುಸ್ತಕ ಕೈಬಿಟ್ಟ ಬಗ್ಗೆ ಭಾರೀ ಚರ್ಚೆ ಆಗಿತ್ತು. ಆದರೆ ಸರ್ಕಾರ ಸೇರಿದಂತೆ ಟಿಪ್ಪು ಸುಲ್ತಾನ್ ಓರ್ವ ನರಹಂತಕ, ಆತ ಯಾವುದೇ ಸಾಧನೆ ಮಾಡಿಲ್ಲ ಎಂದು ಮೊಂಡುವಾದ ಮಾಡಿಕೊಂಡು ಸುಮ್ಮನಾಯ್ತು. ಆ ಬಳಿಕ ಕೆಂಪೇಗೌಡ ಹಾಗೂ ಕುವೆಂಪು ಬಗ್ಗೆ ಅವಹೇಳನ ಮಾಡಲಾಗಿದೆ. ಕುವೆಂಪು ಬೇರೆಯವರ ಸಹಕಾರದಿಂದ ಮೇಲೆ ಬಂದರು, ಅವರನ್ನು ರಾಷ್ಟ್ರಕವಿ ಎಂದು ಕರೆಯುತ್ತಾರೆ ಎಂದು ತುಚ್ಛವಾಗಿ ಬರೆದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. […]