ಒಂದು ರೂಪಾಯಿ ಕಾಯಿನ್ ಇದ್ರೆ 1 ಕೋಟಿ ಗಳಿಸಬಹುದು..! ಈ ಸುದ್ದಿ ನಂಬಿ..

ಈ ರೀತಿಯ ಹೆಡ್‌ಲೈನ್ ಹಾಕಿಕೊಂಡು ಸಾಕಷ್ಟು ವೆಬ್‌ಸೈಟ್‌ಗಳಲ್ಲೇ ಸುದ್ದಿ‌ ಮಾಡಿರ್ತಾರೆ. ಆ ರೀತಿಯ ಸುದ್ದಿಗಳಿಗೆ ಅಪ್ಪ ಅಮ್ಮ ಯಾರೂ ಇರೋದಿಲ್ಲ. ಯಾರು ಒಂದು ರೂಪಾಯಿ‌ ಖರೀದಿ‌ ಮಾಡ್ತಾರೆ..? ಒಂದು ರೂಪಾಯಿ‌ ಕಾಯಿನ್ ಯಾರಿಗೆ ತಲುಪಿಸಬೇಕು..? ಅನ್ನೋ ಬಗ್ಗೆಯೂ ಒಳಗೆ ಮಾಹಿತಿ‌ ಇರೋದಿಲ್ಲ. ಆದರೆ ಜನರು‌ ಕುತೂಹಲದಿಂದ ಓದಲಿ‌ ಎನ್ನುವ ಕಾರಣಕ್ಕೋ ಅಥವಾ ಯಾವುದೋ ಸುಳ್ಳು ವೆಬ್‌ಸೈಟ್‌ ಮಾಹಿತಿ ನಂಬಿಯೋ ವರದಿ ಮಾಡಿರುತ್ತಾರೆ. ಆದರೆ ಇದೇ ರೀತಿಯ ಮಾಹಿತಿ ನಂಬಿದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.‌ […]

ಪ್ರೇಮಿಗಳು ಸ್ವಲ್ಪ ದಿನದಲ್ಲೇ ಮಸ್ತಿ ಬಳಿಕ ಬದಲಾಗುವುದು ಯಾಕೆ..? ಕೊಲ್ಲುವುದೂ ಯಾಕೆ..?

ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲೂ ನಡೆಯುವ ಒಂದೇ ರೀತಿಯ ಘಟನೆ ಎಂದರೆ ಅದು ಪ್ರೀತಿ, ಪ್ರೇಮ, ಕೊನೆಗೆ ಕೊಲೆಯಲ್ಲಿ ಅಂತ್ಯ. ಇದಕ್ಕೆ ಕಾರಣ ನಾವು ಪಾಲಿಸಿಕೊಂಡು ಬರುತ್ತಿರುವ ಭಾವನಾತ್ಮಕ ಬದುಕು ಪ್ರಮುಖ ಕಾರಣ ಎನ್ನಬಹುದು. ಕಾಲೇಜು ಮೆಟ್ಟಿಲು ಹತ್ತಿದ ಸ್ನೇಹಿತರು ಪರಸ್ಪರ ಮೆಚ್ಚಿಕೊಂಡು ಕೈ ಕೈ ಹಿಡಿದು ಸುತ್ತಾಡುವುದು, ಮೈಗೆ ಮೈ ತಾಗಿಸಿಕೊಂಡು ಮನೋಲ್ಲಾಸ ಪಡೆಯುವುದು ಸರ್ವೇ ಸಾಮಾನ್ಯ. ಇಂದಿನ ಸಮಾಜದಲ್ಲಿ ಇದೆಲ್ಲವುಗಳಿಂದ ದೂರ ಇದ್ದೇನೆ ಎಂದರೆ ಅವರು ಸಮಾಜದಿಂದಲೇ ದೂರ ಉಳಿದಿದ್ದಾರೆ ಅಥವಾ ಸಮಾಜವೇ […]

ಭಾರತ ಬದಲಾಗುತ್ತೆ ಎಂದಿದ್ದರು.. ಬೆಂಕಿ ಪೊಟ್ಟಣದ ದರವೂ ಬದಲಾಯ್ತು..!

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರ ಹಿಡಿಯುವ ವೇಳೆ ಭಾರತ ಬದಲಾಗುತ್ತದೆ. ಹೊಸ ದಿಕ್ಕಿನಲ್ಲಿ ಭಾರತವನ್ನು ತೆಗೆದುಕೊಂಡು ಹೋಗ್ತೇವೆ ಎಂದಿದ್ದರು. ಆದರೆ ಈ ಪ್ರಮಾಣದಲ್ಲಿ ಬದಲಾವಣೆ ಆಗಲಿದೆ‌ ಎನ್ನುವುದನ್ನು ಭಾರತೀಯರಲ್ಲಿ ಯಾರೊಬ್ಬರೂ ಊಹಿಸಿರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಬದಲಾವಣೆ ಕಾಣಿಸುತ್ತಿದೆ. ಭಾರತದಲ್ಲಿ ಬೆಂಕಿಪೊಟ್ಟಣದ ಬೆಲೆಯೂ ಬರೋಬ್ಬರಿ 14 ವರ್ಷಗಳ ನಂತರ ಬೆಲೆ ಏರಿಕೆ‌ ಕಂಡಿದೆ. 1 ರೂಪಾಯಿ ಇದ್ದ ಬೆಂಕಿ ಪೊಟ್ಟಣದ ಬೆಲೆ ಇನ್ಮುಂದೆ ಡಿಸೆಂಬರ್​ 1 ರಿಂದ ಎರಡು ರೂಪಾಯಿಗಳು. ಈಗಾಗಲೇ ಮ್ಯಾಚ್​ ಬಾಕ್ಸ್​ ಸಂಗ್ರಹ […]

ಮಾನ ಉಳಿಸಿಕೊಳ್ಳಲು ಸಿಎಂ ಸರ್ಕಸ್​, ಮಾನ ಕಳಿಯೋಕೆ ಉಳಿದವರು ವರ್ಸಸ್​..!

ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಜನತೆ ಕಂಗಾಲಾಗಿದ್ದಾರೆ. ಹಣದುಬ್ಬರದ ಹೊಡೆತ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜೀವನ ನಡೆಸುವುದು ಕಷ್ಟವಾಗ್ತಿದೆ. ಮೂಲಭೂತ ಸೌಕರ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಹಬ್ಬಗಳ ಆಚರಣೆ ಮಾಡುವುದು ಇರಲಿ, ಸಂಸಾರ ನೌಕೆ ಸಾಗಿಸುವುದೇ ದುರ್ಗಮವಾಗಿದೆ. ದಿನನಿತ್ಯದ ಬಳಕೆಗೆ ವಾಹನಗಳನ್ನು ಬಳಸುವುದು ಕಷ್ಟ ಎನ್ನುತ್ತಿದ್ದಾರೆ ಸಾರ್ವಜನಿಕರು. ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಮಾನ ಕಾಪಾಡಿಕೊಳ್ಳಲು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸರ್ಕಸ್​ ಮಾಡ್ತಿದ್ದಾರೆ. ಆದರೆ ಅದೇ ಬಸವರಾಜ ಬೊಮ್ಮಾಯಿ […]