ಆ ದಿನಗಳು ನಟ ಚೇತನ್​ ನಾಪತ್ತೆ​..! ಪೊಲೀಸ್​ ವೇಷದಲ್ಲಿ ಬಂದು ಕಿಡ್ನ್ಯಾಪ್​ ಮಾಡಿದ್ರಾ..?

ಆ ದಿನಗಳು ಖ್ಯಾತಿಯ ನಟ ಚೇತನ್​​ ನಾಪತ್ತೆ ಆಗಿದ್ದಾರೆ. ಆದರೆ ಪೊಲೀಸರೇ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ ಮಾಹಿತಿ ಕೇಳಿದರೂ ನೀಡ್ತಿಲ್ಲ ಎಂದು ನಟ ಚೇತನ್​ ಪತ್ನಿ ಮೇಘಾ ಆರೋಪ ಮಾಡಿದ್ದಾರೆ. ಒಂದು ವೇಳೆ ಪೊಲೀಸರ ಅರೆಸ್ಟ್​ ಮಾಡಿದರೆ ನಟ ಚೇತನ್​ಗೆ ಕಾನೂನು ಸಲಹೆ ಸಿಗಬೇಕಿದೆ. ಇಲ್ಲೀವರೆಗೂ ನಮಗೆ ಗೊತ್ತಿಲ್ಲ ಎನ್ನುವ ಮೂಲಕ ಮಾಹಿತಿಯನ್ನು ಮುಚ್ಚಿಡ್ತಿದ್ದಾರೆ. ನಾನು ಮನೆಯಲ್ಲೇ ಇದ್ದರೂ ನನಗೆ ಯಾವುದೇ ಮಾಹಿತಿ ನೀಡದೆ ಕರೆದುಕೊಂಡು ಹೋಗಿದ್ದಾರೆ. […]