ನೋವಿನಲ್ಲೇ ಬದುಕು ಪಯಣ ಮುಗಿಸಿದ ಪೋಷಕ ನಟ ಸತ್ಯಜಿತ್​ ..

ಕನ್ನಡ ಚಿತ್ರರಂಗದಲ್ಲಿ ಧೀರ್ಘ ಕಾಲ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಹಿರಿಯ ನಟ ಸತ್ಯಜಿತ್ ಕೊನೆಯುಸಿರು ಎಳೆದಿದ್ದಾರೆ. ಕಳೆದ 6 ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸತ್ಯಜಿತ್​​, ಚಿಕಿತ್ಸೆ ಫಲಕಾರಿಯಾಗಿದೆ ಬದುಕಿಗೆ ಅಂತಿಮ ವಿದಾಯ ಹೇಳಿದ್ದಾರೆ. ಬುಧವಾರದವರೆಗೂ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತಾದರೂ ಗುರುವಾರ ಡಯಾಲಿಸಿಸ್ ಮಾಡುವ ವೇಳೆ ಹಾರ್ಟ್ ರೇಟ್ ಕಡಿಮೆಯಾಗಿತ್ತು. ಜೊತೆಗೆ ಇಂಟರ್ನಲ್ ಬ್ಲೀಡಿಂಗ್ ಕೂಡ ಆಗಿತ್ತು. ಹೀಗಾಗಿ ವೆಂಟಿಲೇಟರ್ ಸಪೋರ್ಟ್ ಕೊಡಲಾಗಿತ್ತು. ಶುಕ್ರವಾರ ಮತ್ತಷ್ಟು ಕ್ಷೀಣಿಸಿದ ಆರೋಗ್ಯ ಓರ್ವ ಅದ್ಬುತ […]