ಸಂಸದೆ ಸುಮಲತಾ ಸುಳ್ಳಿನ ಹಿಂದೆ ಓಡುತ್ತಿರೋ ಉದ್ದೇಶವಾ ದರೂ ಏನು..?

ಮಂಡ್ಯ ಸಂಸದೆ ಸುಮಲತಾ ಕಳೆದೊಂದು ವಾರದಿಂದ ಅಬ್ಬರ ಸೃಷ್ಟಿಸಿದ್ದಾರೆ. ಎಲ್ಲಾ ಮಾಧ್ಯಮಗಳು ಸಂಸದೆ ಸುಮಲತಾ ಅವರ ಹಿಂದೆ ಬಿದ್ದಿದ್ದು ಕ್ಷಣ ಕ್ಷಣದ ಸುದ್ದಿಗಳು ಹಾಕುತ್ತಿದ್ದಾರೆ. ಆದ್ರೆ ಸುಮಲತಾ ಹೇಳುತ್ತಿರೋದು ಎಲ್ಲವೂ ಸತ್ಯವೇ ಎಂದು ಅವಲೋಕಿಸಿದರೆ ಖಂಡಿತ ಇಲ್ಲ, ಕೆಲವೊಂದು ಸುಳ್ಳುಗಳನ್ನು ಹೇಳಿ ಜನರನ್ನು ತನ್ನ ಕಡೆಗೆ ಸೆಳೆಯುವ ಕೆಲಸ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊಚರವಾಗುತ್ತಿದೆ. ಇದರಿಂದ ಸುಮಲತಾ ಅವರಿಗೆ ಏನು ಲಾಭ ಎನ್ನುವುದಕ್ಕಿಂತ, ಪ್ರಚಾರ ಸಿಗುತ್ತೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆಯೇ..? ಎನ್ನುವ ಶಂಕೆ ಮೂಡುವಂತೆ ಮಾಡಿದೆ. […]