ಮಡಿಕೇರಿಯ ಕತ್ತಲೆ ಕೋಣೆಯಿಂದ ಹೊರಕ್ಕೆ ಬಂದಳು 27 ವರ್ಷದ ಪದವಿ ವಿದ್ಯಾರ್ಥಿನಿ..!

ಮಡಿಕೇರಿಯ ಗಾಳಿಬೀಡು ಗ್ರಾಮದಲ್ಲಿ 27 ವರ್ಷದ ಹುಡುಗಿಯನ್ನು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗಾಳಿಬೀಡು ನಿವಾಸದ ಮೇಲೆ ದಾಳಿ ಮಾಡಿ ಯುವತಿಯನ್ನು ಬಂಧನದಿಂದ ಮುಕ್ತ ಮಾಡಿದ್ದಾರೆ. ಇದೀಗ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೇಳು ವರ್ಷದಿಂದ ಕತ್ತಲ ಕೋಣೆಯಲ್ಲಿದ್ದ ಯುವತಿಗೆ ಮಾತುಗಳೇ ಮರೆತು ಹೋಗಿವೆ. ಅದೇನೋ ಹೇಳಬೇಕು ಎಂದು ಹಂಬಲಿಸುವ ಆ ಯುವತಿ ಆರೇಳು ವರ್ಷಗಳ ಬಳಿಕ ಸೂರ್ಯನ ಬಿಸಿಲು ಕಂಡಿದ್ದಾಳೆ. ಮಹಿಳಾ […]