ಸಿಎಂ ಬದಲಾವಣೆ..? ಹೊಸ ನಾಯಕತ್ವ ಹುಡುಕಾಟದಲ್ಲಿ ಬಿಜೆಪಿ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭ ಆಗಿದ್ದವು. ಆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಸೇರಿದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಸ್ಪಷ್ಟನೆ ನೀಡಿ ಬಸವರಾಜ ಬೊಮ್ಮಾಯಿ ಅವಧಿ ಸಂಪೂರ್ಣ ಮಾಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆ ಬಳಿಕ ಕೇವಲ ಸಂಪುಟ ವಿಸ್ತರಣೆ ಬಗ್ಗೆ ಮಾತ್ರ ಮಾತುಗಳು ಆರಂಭವಾಗಿದ್ದವು. ಇದೀಗ ಸಂಪುಟ ವಿಸ್ತರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿಗೆ ತೆರಳಲು ನಿರ್ಧಾರ ಮಾಡಿದ್ದಾರೆ. ಈ ನಡುವೆ ಕೇವಲ […]

ವಿಸ್ಟಾಡೋಮ್​ ಬೋಗಿಯ ರೈಲು ಪ್ರವಾಸ, ಇದು ‘ಸಂಚಾರಿ ಸ್ವರ್ಗ’..!

ಬಹುತೇಕ ಮಂದಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರವಾಸ ಕೈಗೊಂಡಾಗ ಕಿಟಕಿ ಭಾಗದ ಸೀಟ್​ ಬುಕ್​ ಮಾಡುವುದು ಬಹುತೇಕ ಜನರ ರೂಢಿ. ಗಾಳಿ ಬೆಳಕು ಜೊತೆಗೆ ಹೊರಗಿನ ಪರಿಸರವನ್ನು ಯಾವುದೇ ಸಮಸ್ಯೆಯಿಲ್ಲದೆ ಆಸ್ವಾಧಿಸಬಹುದು ಎನ್ನುವ ಲೆಕ್ಕಚಾರದಲ್ಲಿ ಕಿಟಕಿ ಭಾಗದ ಸೀಟ್​ ಬುಕ್​ ಮಾಡುತ್ತಾರೆ. ಈ ರೀತಿಯ ಮನಸ್ಥಿತಿಯುಳ್ಳ ಜನರನ್ನು ಮನಸ್ಸಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಇಲಾಖೆ ರೈಲಿನಲ್ಲಿ ವಿಸ್ಟಾಡೋಮ್​ ಕೋಚ್​ ಪರಿಚಯಿಸಿದ್ದು, ಇಂದಿನಿಂದ ಹಳಿ ಮೇಲೆ ಬಂದಿದೆ. ಎಲ್ಲಿಂದ ಎಲ್ಲಿಗೆ ಈ ರೈಲು ಸಂಚಾರ..! ಎಲ್ಲಾ ರೈಲುಗಳಲ್ಲೂ ಈ ರೀತಿಯ ವಿಸ್ಟಾಡೋಮ್​ […]

ಕೊರೊನಾ​ ಬೇಸರ ತಂದಿದ್ಯಾ..? ಹಕ್ಕಿಯಂತೆ ಹಾರಬೇಕಾ..? ಬನ್ನಿ ಗದಗಕ್ಕೆ..

ಕೊರೊನಾ ಲಾಕ್​ಡೌನ್​ನಲ್ಲಿ ಸಾಕಷ್ಟು ಜನರು ಬೆಂಗಳೂರಿನಲ್ಲೇ ಬಂಧಿಯಾಗಿದ್ದರು. ಇದೀಗ ಲಾಕ್​ಡೌನ್​ ಓಪನ್​ ಆಗಿದೆ. ಪ್ರವಾಸಿ ಸ್ಥಳಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ. ಇದೀಗ the public spot ನಮ್ಮ ಓದುಗರನ್ನು ಆಗಸದಲ್ಲಿ ಹಾರಾಡುವಂತೆ ಮಾಡುತ್ತಿದೆ. ಎರಡು ಬೆಟ್ಟಗಳ ನಡುವೆ ಜಿಪ್​ಲೈನ್​ ಹಾಕಲಾಗಿದ್ದು, ಪ್ರವಾಸಿಗರ ಸ್ವರ್ಗ ಎನ್ನುವಂತಾಗಿದೆ. ಎದೆ ಝಲ್​ ಎನ್ನುವಂತೆ ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ಒಂದು ಕಿಲೋ ಮೀಟರ್​ ದೂರ ಪುಷ್ಪಕ ವಿಮಾನದಲ್ಲಿ ಸಂಚಾರ ಮಾಡಿದ ಅನುಭವ ನಿಮ್ಮದಾಗಲಿದೆ. ಏನಿದು ಗದಗದಲ್ಲಿ ಜಿಪ್​ ಲೈನ್​ ಸಂಚಾರ..!? […]

ಧರ್ಮಸ್ಥಳಕ್ಕೆ ಹೋದಾಗ ಗಡಾಯಿಕಲ್ಲು ಪ್ರವಾಸ ಮಿಸ್ ಆಗದೆ ಇರಲಿ..!

ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಮಂಜುನಾಥನು ನೆಲೆ ನಿಂತಿರುವುದು ಧರ್ಮಸ್ಥಳದಲ್ಲಿ. ಈ ಪುಣ್ಯಸ್ಥಳಕ್ಕೆ ಕರ್ನಾಟಕದ ಬಹುತೇಕ ಜನರು ಭೇಟಿ ನೀಡಿರುತ್ತಾರೆ ಧರ್ಮಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ರಮಣೀಯವಾದ ಗಡಾಯಿಕಲ್ಲು ನಿಮ್ಮ ಕಣ್ಣಿಗೆ ಬಿದ್ದಿರಬಹುದು ಅಥವಾ ಗಮನಿಸದೆ ಇರಬಹುದು. ಗಡಾಯಿಕಲ್ಲಿನ ಬಗ್ಗೆ ಮಾಹಿತಿ ಇಲ್ಲದ ಕಾರಣ ನೋಡುವ ಮನಸ್ಸು ಮಾಡದೆ ವಾಪಸ್ ಬಂದಿರಬಹುದು. ಆದರೆ ಇನ್ಮುಂದೆ ಧರ್ಮಸ್ಥಳ ಹೋದಾಗ ಗಡಾಯಿಕಲ್ಲಿನ ಸೌಂದರ್ಯ ಸವಿಯೋದನ್ನು ಮಾತ್ರ ಮಿಸ್ ಮಾಡುವಂತಿಲ್ಲ. ಯಾಕಂದ್ರೆ ಗಡಾಯಿಕಲ್ಲು ವಿಶೇಷತೆ ಬಗ್ಗೆ ಕಣ್ಣಿಗೆ ಕಟ್ಟುವ ಚಿತ್ರಣ ಇಲ್ಲಿದೆ. […]