ಡ್ರಗ್ಸ್​ ಕೇಸ್​ನಲ್ಲಿ ಅನುಶ್ರೀ ರಕ್ಷಣೆ ಮಾಡಲಾಗ್ತಿದ್ಯಾ..? ಒತ್ತಡ ಹೇರಿದ ಮಾಜಿ ಸಿಎಂ ಆಡಿಯೋ ಯಾರದ್ದು..?

ಮಂಗಳೂರು ಡ್ರಗ್ಸ್​ ಪ್ರಕರಣದಲ್ಲಿ ಜಾರ್ಜ್​​ಶೀಟ್ ಸಲ್ಲಿಕೆ ಮಾಡಲಾಗಿದೆ. ಆದರೆ ಚಾರ್ಜ್​ಶೀಟ್​​​ನಲ್ಲಿ ಆ್ಯಂಕರ್​ ಅನುಶ್ರೀ ಹೆಸರಿಲ್ಲ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇದೀಗ ಮಂಗಳೂರು ಪೊಲೀಸ್ ಕಮೀಷನರ್ ಮಾತನಾಡಿ ಸ್ಪಷ್ಟನೆ ನೀಡಿದ್ದು, ಅನುಶ್ರೀ ಆರೋಪಿ ಎಂದು ಉಲ್ಲೇಖ ಆಗಿಲ್ಲ. ಕಿಶೋರ್ ಹೇಳಿಕೆಯಲ್ಲಿ ಮಾತ್ರವೇ ಅನುಶ್ರೀ ಹೆಸರಿದೆ. ಮತ್ತೆ ಕಿಶೋರ್ ಅಮನ್ ವಿಚಾರಣೆ ನಡೆಸಲ್ಲ ಎಂದಿದ್ದಾರೆ. ಇನ್ನೂ ಅನುಶ್ರೀ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯಗಳಿಲ್ಲ. 6 ಜನ ಆರೋಪಿಗಳ ಬಗ್ಗೆ ಅಂತಿಮ ವರದಿಯನ್ನು ಕೋರ್ಟ್​ಗೆ ಸಲ್ಲಿಸಿದ್ದೇವೆ. ಐದು ಜನ […]