ರಾಜಕೀಯ ದಾಳ ಉರುಳಿಸಿ ಗೆಲ್ಲೋದ್ಯಾರು..? ರಾಜ್ಯಸಭೆ ಪಕ್ಕಾ ಲೆಕ್ಕಾಚಾರ..!!

ನಾಳೆ ವಿಧಾನಸಭಾ ಸದಸ್ಯರು ರಾಜ್ಯಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಇರುವ ನಾಲ್ಕು ಸ್ಥಾನಗಳಿಗೆ ಆರು ಮಂದಿ ಅಖಾಡದಲ್ಲಿ ಇದ್ದಾರೆ. ಈ ಬಾರಿ ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಮೂವರೂ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ನಾಲ್ಕನೇ ಸ್ಥಾನಕ್ಕೆ ಬೇಕಾದ ಸೂಕ್ತ ಮತಗಳು ಯಾರ ಬಳಿಯಲ್ಲೂ ಇಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಸರಳವಾಗಿ ಎರಡು ಸ್ಥಾನ ಹಾಗೂ ಕಾಂಗ್ರೆಸ್​ ಒಂದು ಸ್ಥಾನವನ್ನು ಗೆಲ್ಲಲಿವೆ. ಉಳಿದ ಮತ್ತೊಂದು ಸ್ಥಾನಕ್ಕೆ ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ, ಕಾಂಗ್ರೆಸ್​ನಿಂದ ಮನ್ಸೂರ್​ […]

ಪ್ರಧಾನಿ ನರೇಂದ್ರ ಮೋದಿ ಅಲೆ ವಿರುದ್ಧ ಈಜುವ ಛಲಗಾರ ನಾಯಕ ಯಾರಿದ್ದಾರೆ..?

ದೇಶದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಕೇಸರಿ ಪಾಳಯ ಚುನಾವಣೆಯಲ್ಲಿ ಪದೇ ಪದೇ ಗೆಲ್ಲುವ ಮೂಲಕ ಜನಪರ ಅಧಿಕಾರ ನೀಡುವ ಏಕೈಕ ಪಕ್ಷ ಎನ್ನುವಂತೆ ಸಾಬೀತು ಮಾಡುತ್ತಲೇ ಇದೆ. ಇದೀಗ ಪಂಚ ರಾಜ್ಯ ಚುನಾವಣೆಯಲ್ಲೂ ಉತ್ತರ ಪ್ರದೇಶ ಸೇರಿದಂತೆ ಮಣಿಪುರ, ಗೋವಾ, ಉತ್ತರಾಖಂಡ್​ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಯವಾಗಿದೆ. ಇನ್ನೂ ಪಂಜಾಬ್​ನಲ್ಲಿ ಬಿಜೆಪಿಯನ್ನು ಜನರು ತಿರಸ್ಕಾರ ಮಾಡಿದ್ದು, ಕಾಂಗ್ರೆಸ್​​ ಜೊತೆಗೆ ಬಿಜೆಪಿ ಕೂಡ ಹೀನಾಯ ಸೋಲುಂಡಿದೆ. ಇದೀಗ ನಾಲ್ಕು […]

ಗೆದ್ದು ಬಿದ್ದ ಬಿಜೆಪಿ, ಜೆಡಿಎಸ್​​ಗೆ ಮುಖಭಂಗ, ಕಹಿ ನಡುವೆ ಕಾಂಗ್ರೆಸ್​​ಗೆ ಸಿಹಿ..!

ವಿಧಾನ ಪರಿಷತ್​ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಮೂರೂ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಸೋಲಿನ ಬಿಸಿ ತಟ್ಟಿದೆ. ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 02 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.  ಬಿಜೆಪಿ ಕಳೆದ ಬಾರಿಗಿಂತಲೂ 5 ಸ್ಥಾನಗಳನ್ನು ಹೆಚ್ಚಾಗಿ ಗೆದ್ದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಿದೆ. ಆಡಳಿತ ಪಕ್ಷವಾಗಿ ಬಿಜೆಪಿಯ ಸಾಧನೆ ಅಷ್ಟಕ್ಕಷ್ಟೇ ಎನ್ನಬಹುದು. ಈ ಫಲಿತಾಂಶ ಕಾಂಗ್ರೆಸ್ ಕೂಡ ಬಿಜೆಪಿ‌ ಪಕ್ಷದಷ್ಟೇ ಬಲಾಢ್ಯ ಎಂಬುದನ್ನು ಸಾಬೀತು ಮಾಡಿದೆ. ಬಿಜೆಪಿ ಸೋತಿದ್ದು ಯಾವ ಕ್ಷೇತ್ರದಲ್ಲಿ […]

ಕುಂದಾನಗರಿಯಲ್ಲಿ ಅರಳಿದ ಕಮಲ, ಅಳಿಸಿದ ಹಸ್ತ, ಉದುರಿದ ತೆನೆ..!

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಒಟ್ಟು 58 ವಾರ್ಡ್​ಗಳಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಳ ಬಹುಮತ ಪಡೆದುಕೊಂಡಿದೆ. ಎರಡನೇ ಸ್ಥಾನಕ್ಕೆ ಪಕ್ಷೇತರರು ಬಂದಿದ್ದು ಒಟ್ಟು 10 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ಕಾಂಗ್ರೆಸ್​ ಅಭ್ಯರ್ಥಿಗಳು 9 ವಾರ್ಡ್​ಗಳಲ್ಲಿ ಗೆಲ್ಲುವ ಮೂಲಕ 3ನೇ ಸ್ಥಾನಕ್ಕೆ ಬಂದಿದ್ದಾರೆ. ಎಂಇಎಸ್​ 2 ವಾರ್ಡ್​ಗಳಲ್ಲಿ ಗೆಲ್ಲುವ ಮೂಲಕ ಕಿತಾಪತಿಗೆ ಕುರ್ಚಿ ಕಾಪಾಡಿಕೊಂಡಿದ್ದಾರೆ. ಇನ್ನೂ ಅಸಾದುದ್ದೀನ್​ ಓವೈಸಿ ಪಕ್ಷ ಎಐಎಂಐಎಂ ಕೂಡ ಒಂದು ಸ್ಥಾನದಲ್ಲಿ ಗೆಲುವಿನ […]