ಉತ್ತರಕ್ಕೆ ಅಯೋಧ್ಯೆ.. ದಕ್ಷಿಣಕ್ಕೆ ಅಂಜನಾದ್ರಿ.. ಬಿಜೆಪಿ ಮತಬ್ಯಾಂಕ್​ ದೇವಸ್ಥಾನ..!

ಸರ್ಕಾರದ ಹಿಡಿತದಿಂದ ದೇವಸ್ಥಾನಗಳಿಗೆ ಮುಕ್ತಿ..? ಹಿಂದೂಗಳ ಮತಗಳ ಮೇಲೆ ನಿಗಾ ವಹಿಸಿ ಕೆಲಸ ಮಾಡುವ ಬಿಜೆಪಿ ಸರ್ಕಾರದ ಇತ್ತೀಚಿಗೆ ಮತಾಂತರ ನಿಷೇಧ ಕಾನೂನು ಜಾರಿ ಮಾಡುವ ಮೂಲಕ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಿಣಿ ವೇಳೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಬಜೆಟ್​ ಅಧಿವೇಶನದಲ್ಲೇ ಇದಕ್ಕೊಂಡು ಹೊಸ ಕಾನೂನು ರೂಪಿಸುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇದರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳು […]