ಶಿರಾಡಿ ಘಾಟ್​ ರಸ್ತೆ ಬಂದ್​ ಆದ್ರೆ ಬೇರೆ ಬದಲಿ ಮಾರ್ಗ ಯಾವುದು..?

ಕರಾವಳಿ ಕರ್ನಾಟಕ ಹಾಗು ಹಳೇ ಮೈಸೂರು ಭಾಗಕ್ಕೆ ಅಂದರೆ ಪಶ್ಚಿಮಘಟ್ಟ ಇಳಿಯಲು ಹಾಗು ಘಟ್ಟವನ್ನು ಏರುವುದಕ್ಕೆ ಇರುವ ಪ್ರಮುಖ ಮಾರ್ಗ ಶಿರಾಡಿಘಾಟ್. ಪ್ರತಿ ಮಳೆಗಾಲದಲ್ಲೂ ಈ ಮಾರ್ಗದಲ್ಲಿ ಗುಡ್ಡ ಕುಸಿತ, ರಸ್ತೆ ಕುಸಿತ ಹಲವಾರು ಸಂಕಷ್ಟಗಳನ್ನು ಜನರಿಗೆ ತಂದೊಡ್ಡುತ್ತದೆ. ಶಿರಾಡಿ ಮಾರ್ಗದಲ್ಲಿ ಒಮ್ಮೆ ಸಂಪರ್ಕ ಕಡಿತ ಆದರೆ ಜನರು ಬದಲಿ ಮಾರ್ಗವಾಗಿ ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್​ ಮೂಲಕ ಮಂಗಳೂರಿಗೆ ಪ್ರವೇಶ ಪಡೆಯುತ್ತಾರೆ. ಅದೇ ರೀತಿ ಘಟ್ಟವನ್ನು ಏರುವುದಕ್ಕೂ ಅದೇ ಮಾರ್ಗಗಳು ಜನರಿಗೆ ಕಾಣಿಸುತ್ತವೆ. ಆದರೆ […]