ಮುಖ್ಯಮಂತ್ರಿಗಳೇ.. ಇದು ನಮ್ಮೂರ ರಸ್ತೆ, ನೀವೊಮ್ಮೆ ನೋಡಿ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಿಂದ ಬರಗೇನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಿದು. ಈ ರಸ್ತೆ ಸಂಪೂರ್ಣವಾಗಿ ಹಾಳಗಿದ್ದು, ರಸ್ತೆಯ ತುಂಬಾ ತಗ್ಗು-ಗುಂಡಿಗಳು ಇರುವುದರಿಂದ ವಾಹನ ಸವಾರರು ಸಂಚಾರ ಮಾಡಲು ಹರಸಾಹಸ ಪಡಬೇಕಾಗಿದೆ. ನಿತ್ಯ ಸಂಚಾರ ಮಾಡುವ ಜನರ ಗೋಳು ಹೇಳ ತೀರದು. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿ ಇದೆ. ನಮ್ಮ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗಿದ್ದರೂ ಅಭಿವೃದ್ಧಿ ಮರಿಚಿಕೆಯಾಗಿದೆ. ಇದಕ್ಕೆ ನೂತನ ಮುಖ್ಯಮಂತ್ರಿಯಾದ ನೀವಾದರೂ ಕಾಯಕಲ್ಪ ನೀಡಿ. ಈ ರಸ್ತೆಯು […]