ಪಂಚಮಸಾಲಿ ಶ್ರೀಗಳಿಗೆ ಹೋರಾಟ ನಿಲ್ಲಿಸುವಂತೆ ಕಿರುಕುಳ..! ಆ ನಾಯಕ ಯಾರು​..?

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಆದರೆ ಹೋರಾಟದ ಮುಂದಾಳತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಫೋಟಕ ವಿಚಾರ ಬಯಲು ಮಾಡಿದ್ದಾರೆ. ಹೋರಾಟ ನಿಲ್ಲಿಸುವಂತೆ ಕೆಲವರು ಮಾನಸಿಕವಾಗಿ ನೋವು ಕೊಡ್ತಿದ್ದಾರೆ. ನಮ್ಮದೇ ಸಮುದಾಯದವರು ಮಾ‌ನಸಿಕವಾಗಿ ಹಿಂಸೆ ಕೊಡ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಮಾನಸಿಕ ಹಿಂಸೆ ಕೊಡ್ತಿರುವ ನಾಯಕರು ಯಾರು ಎನ್ನುವುದನ್ನು ಬಹಿರಂಗ ಮಾಡ್ತೇನೆ ಎಂದಿದ್ದಾರೆ. ಪೀಠಾಧ್ಯಕ್ಷ […]