‘ಅಶ್ಲೀಲ ವೀಡಿಯೋ’ ಮಹಾನಾಯಕ ತಂತ್ರ..? ಬಯಲಾಗುತ್ತಾ ಬಾಂಬೆ ಸೀಕ್ರೆಟ್..?

ರಾಮನಗರ ಜಿಲ್ಲೆ ಚನ್ನಪಟ್ಟಣದ ಕಾಂಗ್ರೆಸ್​ ಕಾರ್ಯಕರ್ತೆ ನವ್ಯಶ್ರೀ ವೀಡಿಯೋ ಒಂದು ಇತ್ತೀಚಿಗೆ ಬಿಡುಗಡೆ ಆಗಿತ್ತು. ಅಶ್ಲೀಲ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ನವ್ಯಶ್ರೀ, ವೀಡಿಯೋದಲ್ಲಿ ಇರುವ ವ್ಯಕ್ತಿ ನನ್ನ ಗಂಡ ಎಂದು ಬಹಿರಂಗ ಮಾಡಿದ್ದರು. ನವ್ಯಶ್ರೀ ಆರ್. ರಾವ್‌, ಬೆಳಗಾವಿಯ ತೋಟಗಾರಿಕೆ ಇಲಾಖೆ ಅಧಿಕಾರಿ ನನ್ನ ಗಂಡ ಎಂದು ಬಹಿರಂಗ ಮಾಡಿದ್ದರು. ಆದರೆ ಆ ಬಳಿಕ ನವ್ಯಶ್ರೀ ವಿರುದ್ಧ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡಿದ್ದರು. ಬೆಳಗಾವಿ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ. […]

ವಲಸಿಗರಲ್ಲಿ ಯಾರೆಲ್ಲಾ ಮಂತ್ರಿ ಸ್ಥಾನ ಕಳೆದುಕೊಳ್ತಾರೆ!? ಇಲ್ಲಿದೆ ಲಿಸ್ಟ್​..

ಕಾಂಗ್ರೆಸ್​ನಿಂದ ಅಧಿಕಾರಕ್ಕಾಗಿ ವಲಸೆ ಬಂದಿದ್ದ ಬಹುತೇಕ ಮಂದಿ ಮತ್ತೆ ಕಾಂಗ್ರೆಸ್​ ಗೂಡು ಸೇರುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ವಿಚಾರ ಬಿಜೆಪಿ ಹೈಕಮಾಂಡ್​ ಗಮನಕ್ಕೂ ಬಂದಿದ್ದು, ಚುನಾವಣೆಗೂ ಮುನ್ನವೇ ಕೆಲವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪಕ್ಷ ನಿಷ್ಠರಿಗೆ ಮಣೆ ಹಾಕುವ ಪೂರ್ವ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಜೆಟ್​ಗೂ ಮುನ್ನ ಸಂಪುಟ ವಿಸ್ತರಣೆ ಆದರೆ ಕೆಲವು ಯೋಜನೆಗಳನ್ನು ತಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗುವ ಹುಮ್ಮಸ್ಸಿನಲ್ಲಿದ್ದಾರೆ ಮೂಲ ಬಿಜೆಪಿ ನಾಯಕರು. ವಲಸಿಗರ ಬಗ್ಗೆ ನೇರವಾಗಿಯೇ ಬಸನಗೌಡ ಪಾಟೀಲ್​ ವಾಗ್ದಾಳಿ […]