ಈ ಮುಗ್ದ ಕಂದಮ್ಮನ ಸಾವಿಗೆ ಹೊಣೆ ಯಾರು..? ಉತ್ತರ ಕೊಡಿ ಸಿಎಂ ಸಾರ್​..!!

ಬೆಂಗಳೂರಿನಲ್ಲಿ 2020ರ ಮಾರ್ಚ್ 11ರಂದು ಘನಘೋರ ಘಟನೆಯೊಂದು ನಡೆದಿತ್ತು. ರಾಮಮೂರ್ತಿನಗರದ ಕೌದೇನಹಳ್ಳಿ ಬಳಿ ನಡೆದಿದ್ದ ದುರ್ಘಟನೆಯಲ್ಲಿ ಗಾಯಗೊಂಡಿದ್ದ 10 ವರ್ಷದ ಬಾಲಕಿ ರೆಚಲ್ ಷ್ರೀಷಾ,​ 2 ವರ್ಷಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಅಂತಿಮವಾಗಿ ಇಂದು ಉಸಿರು ಚಿಲ್ಲಿದ್ದಾಳೆ. ತಂದೆಯೊಂದಿಗೆ ಶಾಲೆಗೆ ಸ್ಕೂಟರ್​​ನಲ್ಲಿ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಮರದಿಂದ ಬಿದ್ದ ಒಣ ಮರದ ತುಂಡೊಂದು ಬಾಲಕ ರೆಚಲ್​ ಷ್ರೀಷಾಳ ಪ್ರಾಣವನ್ನು ಬಲಿ ಪಡೆದಿದೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮಣಿಪಾಲ್​ ಆಸ್ಪತ್ರೆ ಸೇರಿದ್ದ ರೆಚಲ್​ ಷ್ರೀಷಾ, […]