ಬೆಂಗಳೂರಲ್ಲಿ ಮಗು ಕಿಡ್ನ್ಯಾಪ್​ ಮಾಡಿಸಿದ್ಲು ಬಿಹಾರದ ಗರ್ಭಿಣಿ..!

ಬೆಂಗಳೂರಲ್ಲಿ ಜೂನ್​ 6ರಂದು 11 ವರ್ಷದ ಬಾಲಕನ ಕಿಡ್ನ್ಯಾಪ್​ ಆಗಿತ್ತು. ಹೊರಮಾವು ಸಮೀಪದ ಆಗರದಿಂದ ಬಾಲಕನನ್ನು ಅಪಹರಣ ಮಾಡಿ ಜಿಗಣಿ ಫಾರ್ಮ್ ಹೌಸ್​ನಲ್ಲಿ ಇರಿಸಿಸಲಾಗಿತ್ತು. ಮೊಬೈಲ್​ ಟ್ರೇಸ್​ ಮಾಡಿದ ಹೆಣ್ಣೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ 5ನೇ ತರಗತಿ ಬಾಲಕನನ್ನು ರಕ್ಷಣೆ ಮಾಡಿದ್ದರು. ಆದರೆ ಫಾರ್ಮ್​ಹೌಸ್​ಗೆ ಮಗುವನ್ನು ಕರೆದುಕೊಂಡು ಬಂದಿದ್ದ ಬಹಿಳೆಯನ್ನು ಪೊಲೀಸ್ರು ಬೆನ್ನು ಹತ್ತಿದ್ರು. ಆ ಬಳಿಕ ದುರ್ಗಾದೇವಿ ಎನ್ನುವ ಮಹಿಳೆಯನ್ನೂ ಅರೆಸ್ಟ್​ ಮಾಡಿದ್ದರು. ಆ ಬಳಿಕ ಈಗ ತಿಳಿದ ಅಸಲಿ ಕಹಾನಿ ಅಂದ್ರೆ […]

10ನೇ ತರಗತಿ.. 16 ವರ್ಷ 5ನೇ ಮಹಡಿಯಿಂದ ಹಾರಿದ ಏಕೈಕ ಪುತ್ರ..!

ಕೊರೊನಾ ಸೋಂಕು ಬಂದ ಬಳಿಕ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎನ್ನುವ ವಿಚಾರ ವೈದ್ಯಕೀಯ ಲೋಕದಲ್ಲಿ ಕೇಳಿಬರುತ್ತಿರುವ ಆತಂಕಕಾರಿ ವಿಚಾರ. ಆದರೆ ಅದೇ ವೈದ್ಯರ ದಂಪತಿ ಏಕೈಕ ಪುತ್ರ 5ನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ಇರುವ ಆನೇಕಲ್ ತಾಲೂಕಿನ ಕಮ್ಮಸಂದ್ರ ಸಮೀಪದ ಡ್ಯಾಡಿಸ್ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ. ಗಾರ್ಡನ್ ಅಪಾರ್ಟ್ಮೆಂಟ್​ನ ಐದನೇ ಮಹಡಿ ಏರಿದ್ದ 16 ವರ್ಷದ ಬಾಲಕ ಮೇಲಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. […]

ಮುಖ್ಯಮಂತ್ರಿ ನೋಡಲು ಬಂದ ಬಾಲಕನ ತಲೆ ಹೊಡೆದ ಪೊಲೀಸ್ರು..!

ದಾವಣಗೆರೆ ಜಿಲ್ಲೆಯಲ್ಲಿ ಕಂದಾಯ ಸಚಿವ ಆರ್​ ಅಶೋಕ್​, ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕಂದಾಯ ಸಚಿವ ಆರ್​.ಅಶೋಕ್​ ಅವರ ಗ್ರಾಮ ವಾಸ್ತವ್ಯಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಭಾಗಿಯಾಗಿದ್ದಾರೆ. ಹಳ್ಳಿಯ ಜನರ ಜಾನಪದ ಭಜನಾ ಗೀತೆಗೆ ಭಜನೆ ಮಾಡಿ ಖುಷಿ ಪಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದ ಮುಖ್ಯಮಂತ್ರಿಗಳನ್ನು ನೋಡಲು […]