ಮಗಳು ಗರ್ಭಿಣಿ ಆದರೂ ಕರಗದ ಕೋಪ.. ಆಕ್ಸಿಡೆಂಟ್ ಹೆಸರಲ್ಲಿ ಅಳಿಯನ ಮರ್ಡರ್..!!

ವಿಜಯಪುರ ಅಂದರೆ ಮೊದಲಿಗೆ ನೆನಪಾಗುವುದು ಭೀಮಾ ತೀರದ ಹಂತಕರು. ಆ ಬಳಿಕ ಅಲ್ಲಲ್ಲಿ ಕೇಳಿಸುವ ಬಂದೂಕಿನ ಸದ್ದು. ಇದೀಗ ಭೀಕರ ಅಪಘಾತವೊಂದು ನಡೆದಿದ್ದು, ಮುಸ್ತಕಿನ್ ಎಂಬಾತ ಸಾವನ್ನಪ್ಪಿದ್ದಾನೆ. ಸಾವಿನ ಹಿನ್ನೆಲೆ ಕೆಣಕಿದಾಗ ಕೊಲೆ ಎನ್ನುವುದು ಪತ್ತೆಯಾಗಿದೆ ಎಂದು ವಿಜಯಪುರ ಎಸ್​ಪಿ ಆನಂದ್​ಕುಮಾರ್​ ತಿಳಿಸಿದ್ದಾರೆ. ರಕ್ಷಣೆ ನೀಡುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದರೂ ರಕ್ಷಣೆ ಕೊಡಲಾಗದ ವಿಜಯಪುರ ಪೊಲೀಸರು ಇದೀಗ ಕೊಲೆಗಾರರನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಪಘಾತದ ರೀತಿಯಲ್ಲಿ ಕೊಲೆ ಮಾಡುವುದಕ್ಕೆ ಕಾರಣವಾಗಿದ್ದು, […]

ಕೊಲೆಗಡುಕ ಲೈನ್​ಮ್ಯಾನ್​​ & 26 ಹುಡುಗಿಯರು, ತಾಳಿ ಗಾಳ..!

ಸಮಾಜದಲ್ಲಿ ಗಂಡು ಹೆಣ್ಣಿನ ಅನುಪಾತ ಹೆಚ್ಚು ಕಡಿಮೆ ಆಗಿರುವ ಕಾರಣ ಗಂಡು ಮಕ್ಕಳಿಗೆ ಹೆಣ್ಣು ಸಿಗದಂತಾಗಿದೆ. ಅದರಲ್ಲೂ ಹೆಣ್ಣು ಮಕ್ಕಳ ಪೋಷಕರು ಹಳ್ಳಿಗಾಡಿನ ಹುಡುಗರಿಗೆ ಹೆಣ್ಣು ಕೊಡಲು ನಿರಾಕರಣೆ ಮಾಡುವ ಕಾರಣ ಅದೆಷ್ಟೋ ರೈತ ಯುವಕರಿಗೆ ಮದುವೆ ಆಗದೆ ಸಂಕಷ್ಟ ಎದುರಾಗಿದೆ. ಆದರೆ ಕಲರ್​​ ಫುಲ್​ ಪ್ಯಾಂಟ್​, ಶರ್ಟ್​ ಹಾಕಿಕೊಂಡು ಸಾಮಾಜಿಕ ತಾಣದಲ್ಲಿ ಮಿಂಚುವ ಹುಡುಗರಿಗೆ ಈ ಸಮಸ್ಯೆ ಇಲ್ಲ. ಸಾವಿರ ಸುಳ್ಳು ಹೇಳಿ ಒಂದು ಮದ್ವೆ ಮಾಡು ಎನ್ನುವ ಗಾಧೆಯಂತೆ ಕೆಲಸ ಇರಲಿ, ಇಲ್ಲದೇ ಇರಲಿ […]