ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರಕ್ಕೆ ಮಹಾ ಶಾಕ್..! ಚುನಾವಣೆಗೂ ಮುನ್ನವೇ ಹೊಡೆತ..

ದೇಶದ ಬಹುದೊಡ್ಡ ರಾಜ್ಯ ಆಗಿರುವ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಬಿಗ್​ ಶಾಕ್​ ಎದುರಾಗಿದೆ. ಈಗಾಗಲೇ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಸಾಕಷ್ಟು ಸಮೀಕ್ಷೆಗಳು ಹೇಳಿದ್ದರೂ ಪಕ್ಷ ಬಿಟ್ಟು ಹೋಗುತ್ತಿರುವುದು ಕೇಸರಿ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸಂಸದರಾಗಿದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ 10ಕ್ಕೂ ಹೆಚ್ಚು ಸಮಾವೇಶಗಳನ್ನು ನಡೆಸಿದ್ದು, ಮತ್ತೊಮ್ಮೆ ಅಧಿಕಾರ ಕೊಡುವಂತೆ […]