ಬೆಂಗಳೂರು ಅಂದಕ್ಕೆ ಕೊನೆಯಲ್ಲಿ ಕಪ್ಪು ಚುಕ್ಕೆ ಇಟ್ಟ ಯಡಿಯೂರಪ್ಪ..!

ಮುಖ್ಯಮಂತ್ರಿ ಸ್ಥಾನದಿಂದ ಇಳಿದಿರುವ ಬಿ,ಎಸ್​ ಯಡಿಯೂರಪ್ಪ ಕೊನೇ ಕ್ಷಣದಲ್ಲಿ ಬೆಂಗಳೂರಿನ ಅಂದಕ್ಕೆ ಕಪ್ಪು ಚುಕ್ಕಿ ಯಾಕೆ ಇಟ್ಟರು ಎನ್ನುವ ಪ್ರಶ್ನಾರ್ಥಕ ಚಿಹ್ನೆ ಬೆಂಗಳೂರಿನ ನಿವಾಸಿಗಳನ್ನು ಕಾಡುವುದಕ್ಕೆ ಶುರುವಾಗಿದೆ. ವಿಧಾನಸೌಧದ ಮೂರನೇ ಮಹಡಿಯ ಅಧಿಕಾರದಿಂದ ಇಳಿಯುವ ಮುನ್ನ ಬೆಂಗಳೂರಿನಲ್ಲಿ ಜಾಹಿರಾತು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ. ಬಿಬಿಎಂಪಿ 2019ರಲ್ಲಿ ಜಾರಿ ಮಾಡಿದ್ದ ಜಾಹಿರಾತು ನಿಯಮ ಈ ಮೂಲಕ ನಿಷ್ಕ್ರಿಯವಾಗಿದೆ. ಅಂದರೆ ಬೆಂಗಳೂರಿನಲ್ಲಿ ವಾಣಿಜ್ಯ ಜಾಹಿರಾತು ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಜಾಹಿರಾತು ರಾರಾಜಿಸಲಿವೆ. ಮೂರು […]