ಬೆಂಗಳೂರಿಗೆ ಬೆಂಕಿ ಬಿದ್ದರೆ ಮಾತ್ರ ಸರ್ಕಾರಕ್ಕೆ ಎಚ್ಚರ.. ಆ ಬಳಿಕ ಗಾಢ ನಿದ್ರೆ..

ಗುರುವಾರ, ಶುಕ್ರವಾರ ಸತತವಾಗಿ ಸುರಿದ ಮಳೆ ಬೆಂಗಳೂರು ಜನರು ಜಾಗರಣೆ ಮಾಡುವಂತೆ ಮಾಡಿತ್ತು. ಚಾಮರಾಜಪೇಟೆ, ಜಯನಗರ, ಜೆಸಿ ರಸ್ತೆ, ಗುಡ್ಡದಹಳ್ಳಿ, ಕಸ್ತೂರ ಬಾ ನಗರ ಸೇರಿದಂತೆ ಬಹುತೇಕ ಪ್ರದೇಶಗಳು ಜಲಾವೃತ ಆಗಿದ್ದವು. ತಗ್ಗು ಪ್ರದೇಶದ ಮನೆಗಳು ಕೊಳಚೆ ನೀರಿನಲ್ಲಿ ಮುಳುಗಿದ್ರೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಕೆರೆಯಂತಾಗಿದ್ದ ನೀರಿನಲ್ಲಿ ತೇಲುತ್ತಿದ್ದವು. ಜನರು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ರು. ಬಿಬಿಎಂಪಿ ಕಾಲ್ ಸೆಂಟರ್‌ಗೆ ಕರೆ ಮಾಡಿದ್ರು ಯಾವುದೇ ಸ್ಪಂದನೆ ಸಿಗಲಿಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಜನರ ಕೋಪ […]